Published On: Thu, May 21st, 2020

ಸಚಿವ ಮಾಧುಸ್ವಾಮಿಯವರನ್ನು ಸಂಪುಟದಿಂದ ಕೈಬಿಡಲು ರೈತ ಸಂಘದ ಒತ್ತಾಯ

ಕೋಲಾರ : ಕಾನೂನು ಅರಿವಿಲ್ಲದ ಕಾನೂನು ಸಚಿವ ಮಾಧುಸ್ವಾಮಿ. ತಪ್ಪೊಪ್ಪಿಕೊಂಡ ಸಚಿವರನ್ನು ಸಂಪುಟದಿಂದ ಕೈಬಿಡಲು ಒತ್ತಾಯಿಸಿ ಪ್ರೊ.ಎಂ.ಡಿ. ನಂಜುಂಡಸ್ವಾಮಿ ಸ್ತಾಪಿತ ಕರ್ನಾಟಕ ರಾಜ್ಯ ರೈತ ಸಂಘ ಮತ್ತು ಹಸಿರು ಸೇನೆ ಜಿಲ್ಲಾ ಘಟಕವು ಮುಖ್ಯಮಂತ್ರಿಗಳಿಗೆ ಮನವಿಯನ್ನು ಕೋಲಾರ ಜಿಲ್ಲಾಧಿಕಾರಿಗಳ ಮುಖಾಂತರ ಸಲ್ಲಿಸಿದರು.prof. MDN SWAMY NEWS4

ಮೇ20ರ ಬುಧವಾರದಂದು ಕೋಲಾರ ತಾಲ್ಲೂಕು ಎಸ್.ಅಗ್ರಹಾರ ಕೆರಗೆ ಕೆ.ಸಿ.ವ್ಯಾಲಿ ನೀರನ್ನು ವೀಕ್ಷಣೆ ಮಾಡಲು ಆಗಮಿಸಿದ್ದ ಸಣ್ಣ ನೀರಾವರಿ ಮತ್ತು ಕಾನೂನು ಸಂಸದೀಯ ವ್ಯವಹಾರಗಳ ಸಚಿವರಾದ ಜಿ. ಮಾಧುಸ್ವಾಮಿರವರಿಗೆ ಪ್ರಗತಿಪರ ಸಂಘಟನೆಗಳ ಮುಖಂಡರುಗಳು ಜಿಲ್ಲೆಯಲ್ಲಿ ಕೆರೆಗಳ ಒತ್ತುವರಿ, ರಾಜಕಾಲುವೆಗಳ ಒತ್ತುವರಿ, ಸರ್ಕಾರಿ ರಸ್ತೆಗಳ ಒತ್ತುವರಿ, ಚೆಕ್ಕುಡ್ಯಾಂಗಳನ್ನು ಹೊಡೆದು ಸರ್ಕಾರಕ್ಕೆ ನಷ್ಠ ಉಂಟುಮಾಡುತ್ತಿರುವ ಬಗ್ಗೆ ಸಚಿವರ ಗಮನಕ್ಕೆ ಹೋದಾಗ ಸಚಿವರು ಏಕ ವಚನದಲ್ಲಿ ‘ನಾನು ತುಂಬಾ ಕೆಟ್ಟವನು ಏ ರಾಸ್ಕೆಲ್’ ಎಂದು ಪದ ಬಳಕೆ ಬಳಸಿ ಸಂಬಂಧಪಟ್ಟ ಪೊಲೀಸ್ ಅಧಿಕಾರಿಗಳಿಗೆ ಇವರ ಮೇಲೆ ಕೇಸು ದಾಖಲಿಸಿ ಎಂದು ಹೇಳಿರುವುದು ಮಾನ್ಯ ಸಚಿವರ ಉದ್ದಟನದ ಸರ್ವಾಧಿಕಾರಿ ದೋರಣೆಯನ್ನು ತೋರುತ್ತದೆ ಎಂದು ಆರೋಪಿಸಿದ್ದಾರೆ.prof. MDN SWAMY NEWS

ಈ ಹಿಂದೆಯೂ ಸಹ ಕೋಲಾರ ಜಿಲ್ಲೆಯ ಮಾಲೂರು ತಾಲ್ಲೂಕು ಶಿವಾರಪಟ್ಟಣ ಕೆರೆಗೆ ಭೇಟಿ ನೀಡಿದ ಮಾಧುಸ್ವಾಮಿರವರಿಗೆ ರೈತ ನಾಯಕ ಪ್ರೊ. ನಂಜುಂಡಸ್ವಾಮಿ ಸ್ಥಾಪಿತ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ, ಕೋಲಾರ ಜಿಲ್ಲಾಧ್ಯಕ್ಷರಾದ ಕಲ್ವಮಂಜಲಿ ರಾಮುಶಿವಣ್ಣ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಜಿ. ನಾರಾಯಣಸ್ವಾಮಿ, ನೀರಾವರಿ ಹೋರಾಟಗಾರರಾದ ಕುರುಬರಪೇಟೆ ವೆಂಕಟೇಶ್, ಚಿನ್ನಿ ಶ್ರೀನಿವಾಸ್ ಇನ್ನು ಮುಂತಾದ ಪ್ರಗತಿಪರ ಸಂಘಟನೆಗಳ ಮುಖಂಡರುಗಳು ಇದೇ ಮೇಲ್ಕಂಡ ವಿಚಾರಗಳ ಬಗ್ಗೆ ತಿಳಿಸಲು ಹೋದಾಗ ಹೋರಾಟಗಾರರನ್ನು ಪಾರ್ಟ್ ಟೈಂ ಹೋರಾಟಗಾರರು ಎಂದು ಪದಬಳಕೆ ಮಾಡಿದರು. ಸ್ಥಳದಲ್ಲೇ ಸಂಘಟನೆಯ ಮುಖಂಡರು ತೀವ್ರ ತರಾಟೆಗೆ ತೆದುಕೊಂಡಾಗ ಕ್ಷಮೆಯಾಚಿಸಿದರು.

ಅದೇ ರೀತಿ ಮತ್ತೊಮ್ಮೆ ಹೋರಾಟಗಾರ ಕೆಟ್ಟ ಪದಗಳ ಬಳಕೆ ಮಾಡಿರುವುದನ್ನು ನೋಡಿದರೆ, ಎಲ್ಲೋ ಮಾಧುಸ್ವಾಮಿರವರಿಗೆ ಬುದ್ದಿಬ್ರಮಣೆಯಾದಂತಿದೆ. ಆದ್ದರಿಂದ ಘನ ಸರ್ಕಾರವು ಅವರನ್ನು ಸಂಪುಟದಿಂದ ಕೈಡಬೇಕು. ಕೂಡಲೇ ನಿಮಾನ್ಸ್ ಆಸ್ಪತ್ರೆ ದಾಖಲಿಸಿ. ಕಾರಣ ಕಾನೂನು ಅರಿವಿಲ್ಲದೆ ಕಾನೂನು ಸಚಿವರಾದ ಮಾಧಸ್ವಾಮಿರವರು ಈ ರೀತಿ ಮುಂದೆಯೂ ಸಹ ಕೆಟ್ಟದಾದ ಪದಬಳಕೆ ಮಾಡಿದರೆ ಸರ್ಕಾರಕ್ಕೆ ಕೆಟ್ಟ ಹೆಸರು ಬರುವುದಲ್ಲದೆ. ಕರ್ನಾಟಕ ಸರ್ಕಾರದ ಮಾನ ಮರ್ಯಾಧೆಯನ್ನು ರಾಷ್ಟ್ರಮಟ್ಟದಲ್ಲಿ ಹರಾಜು ಹಾಕುವುದರಲ್ಲಿ ಅನುಮಾನವಿಲ್ಲ ಎಂದು ಸಂಘಟನೆ ತಿಳಿಸಿದೆ.

ಮಾನ್ಯ ಮುಖ್ಯಮಂತ್ರಿಗಳು ಇದನ್ನು ಗಂಭೀರವಾಗಿ ಪರಿಗಣಿಸಿ ಈ ಹಿಂದೆ ರೈತರನ್ನು, ರೈತ ಮುಖಂಡರನ್ನು, ರೈತ ಸಂಘಟನೆಯನ್ನು ಕೆಟ್ಟದಾಗಿ ನಡೆಸಿಕೊಂಡ ಸರ್ಕಾರಗಳು ಇದುವರೆಗೂ ಉಳಿದಿದ್ದು ಇತಿಹಾಸದಲ್ಲೇ ಇಲ್ಲ. ಉದಾರಹಣೆಗೆ ರೈತರ ಮೇಲೆ ಗೋಲಿಬಾರ್, ಲಾಟಿಚಾರ್ಜ್ ಹಾಗೂ ಕೆಟ್ಟದಾಗಿ ಪದಬಳಕೆ ಮಾಡಿದ ಸರ್ಕಾರಗಳು 1980ರಿಂದ ಇಲ್ಲಿಯರೆಗೂ ಗುಂಡುರಾವ್ ರವರ ಸರ್ಕಾರ, ಕುಮಾರಸ್ವಾಮಿ ಸರ್ಕಾರ, ಯಡಿಯೂರಪ್ಪನವರ ಸರ್ಕಾರ ಪತನವಾಗಿದ್ದು ಕಾಣಬಹುದಾಗಿದೆ. ಈ ಸಚಿವರನ್ನು ಸಂಪುಟದಿಂದ ಕೈಬಿಡದಿದ್ದರೆ ವಿಧಾನಸೌಧ ಮುತ್ತಿಗೆ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗುವುದೆಂದು ಎಚ್ಚರಿಕೆ ನೀಡಿದೆ.

ಈ ಸಂದರ್ಭದಲ್ಲಿ ಪ್ರೊ.ಎಂ.ಡಿ. ನಂಜುಂಡಸ್ವಾಮಿ ಸ್ತಾಪಿತ ಕರ್ನಾಟಕ ರಾಜ್ಯ ರೈತ ಸಂಘ ಮತ್ತು ಹಸಿರು ಸೇನೆ ಜಿಲ್ಲಾಧ್ಯಕ್ಷ ಕಲ್ಪಮಂಜಲಿ ರಾಮುಶಿವಣ್ಣ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಜಿ. ನಾರಾಯಣಸ್ವಾಮಿ, ನೀರಾವರಿ ಹೋರಾಟ ಸಮಿತಿಯ ಕುರುಬರಪೇಟೆ ವೆಂಕಟೇಶ್, ಚಿನ್ನಿ ಶ್ರೀನಿವಾಸ್, ಚರ್ಚ್ ಛೇರ್ಮನ್ ಸುದೀರ್, ತೇರಹಳ್ಳಿ ಚಂದ್ರಪ್ಪ, ದೊಡ್ಡ ಕುರುಬರಹಳ್ಳಿ ಶಂಕರ್, ಜಬೀ, ಪಿರೋಜ್, ಮುಳಬಗಿಲು ಬಾಬು, ನಂದಕುಮಾರ್, ಶಿಳ್ಳಂಗೆರೆ ವೇಣು, ಗುಟ್ಟಹಳ್ಳಿ ಚಿದಾನಂದ, ಸೂಲೂರು ಮುರಳಿ, ತಳಗವಾರ ರಾಜೇಶ್, ಪೆಮ್ಮಶೆಟ್ಟಿಹಳ್ಳಿ ಮುನಿರಾಜು ಮತ್ತಿತರರು ಉಪಸ್ಥಿತರಿದ್ದರು.

Leave a comment

XHTML: You can use these html tags: <a href="" title=""> <abbr title=""> <acronym title=""> <b> <blockquote cite=""> <cite> <code> <del datetime=""> <em> <i> <q cite=""> <strike> <strong>

Get Immediate Updates .. Like us on Facebook…

Visitors Count Visitor Counter