Published On: Wed, May 20th, 2020

ಕುಪ್ಪೆಪದವು, ಫ್ಯಾನ್ಸಿ ಅಂಗಡಿಗೆ ನುಗ್ಗಿದ ಕಳ್ಳರು. ನಗದು ಸಹಿತ ಬಟ್ಟೆ ಕಳವು. 

ಕುಪ್ಪೆಪದವು: ಇಲ್ಲಿನ ಭಜನಾ ಮಂದಿರದ ಕಟ್ಟಡದಲ್ಲಿರುವ ಫ್ಯಾನ್ಸಿ ಅಂಗಡಿಯ ಕಿಟಕಿಯ ಸರಳುಗಳನ್ನು ತುಂಡು ಮಾಡಿ ಒಳ ನುಗ್ಗಿದ ಕಳ್ಳರು ನಗದು ಸಹಿತ ಬಟ್ಟೆಗಳನ್ನು ಕಳವು ಮಾಡಿದ ಘಟನೆ ಮಂಗಳವಾರ ರಾತ್ರಿ ನಡೆದಿದೆ. ಸುಮಿತ್ರಾ ಎಂಬವರಿಗೆ ಸೇರಿದ ಸಿರಿ ಫ್ಯಾನ್ಸಿ &ಗಿಫ್ಟ್ ಸೆಂಟರ್ ನ ಹಿಂಭಾಗದ ಕಿಟಕಿಯ ಸರಳುಗಳನ್ನು ತುಂಡು ಮಾಡಿ ಒಳ ನುಗ್ಗಿದ ಕಳ್ಳರು ಅಂದಾಜು10 ಸಾವಿರ  ನಗದು ಹಾಗೂ 7 ಸಾವಿರ ಮೌಲ್ಯದ ಮಹಿಳೆಯರ ಮತ್ತು ಮಕ್ಕಳ ಬಟ್ಟೆಗಳನ್ನು ಎಗರಿಸಿದ್ದಾರೆ.20200520_171556
ಅಂಗಡಿಯ ಹಿಂಭಾಗದ ಕಿಟಕಿಯು  ಇಲ್ಲಿನ ಶಾಲೆಯ ಕಡೆಗಿದ್ದು ಕಳ್ಳರು ಶಾಲೆ ಕಂಪೌಂಡ್ ಮೂಲಕ ಬಂದು ಕಿಟಕಿಯ ಸರಳು ಮುರಿದು ಒಳ ನುಗ್ಗಿದ್ದಾರೆ.ಸುಮಿತ್ರಾ ಅವರು ಬುಧವಾರ  ಬೆಳಿಗ್ಗೆ ಅಂಗಡಿ ತೆರೆದಾಗ ಕಳವು ಪ್ರಕರಣ ಗಮನಕ್ಕೆ ಬಂತು.20200520_105827
ಮಂಗಳವಾರ ರಾತ್ರಿ ಸುಮಾರು 12 ಗಂಟೆಗೆ ಯಾರೋ ಅಂಗಡಿ ಎದುರುಗಡೆ ಇರುವ ಮನೆಯ ಕಿಟಕಿ ಬಡಿದಿದ್ದು, ಪಂಚಾಯತ್ ನ ಪಂಪ್ ಆಪರೇಟರ್ ಯಾವಾಗಲೂ ಈ ರೀತಿ ಕಿಟಕಿ ಬಡಿದು ನೀರು ಬಂದ ಬಗ್ಗೆ ಸೂಚನೆ ಕೊಡುತ್ತಿದ್ದು, ಮಂಗಳವಾರವೂ ಅವರೇ ಕಿಟಕಿ ಬಡಿದಿರಬೇಕೆಂದು ಭಾವಿಸಿ ಮನೆ ಮಂದಿ ಬಾಗಿಲು ತೆರೆಯದೆ ಸುಮ್ಮನಿದ್ದರೆನ್ನಲಾಗಿದೆ.ಬಜಪೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿದ್ದು ಹತ್ತಿರದ ಸಿ ಸಿ ಟಿವಿ ದ್ರಶ್ಯಗಳನ್ನು ಪರಿಶೀಲನೆ ನಡೆಸಿದ್ದಾರೆ.

Leave a comment

XHTML: You can use these html tags: <a href="" title=""> <abbr title=""> <acronym title=""> <b> <blockquote cite=""> <cite> <code> <del datetime=""> <em> <i> <q cite=""> <strike> <strong>

Get Immediate Updates .. Like us on Facebook…

Visitors Count Visitor Counter