Published On: Mon, May 18th, 2020

ಮುತ್ತೂರು, ಕುಡಿಯುವ ನೀರಿನ ಯೋಜನೆ ಉದ್ಘಾಟನೆ.

ಕುಪ್ಪೆಪದವು: ಮುತ್ತೂರು ಗ್ರಾಮ ಪಂಚಾಯತ್ ವ್ಯಾಪ್ತಿಯ ತಾರೆಮಾರ್ ಸೈಟ್, ಕುಳವೂರು, ಮುತ್ತೂರು, ಮಾರ್ಗದಂಗಡಿ ಮತ್ತು ಶಾಂತಿಪಲ್ಕೆ ಪ್ರದೇಶಗಳಿಗೆ ಅಂದಾಜು 15 ಲಕ್ಷ ರೂಪಾಯಿ ವೆಚ್ಚದ ಕುಡಿಯುವ ನೀರು ಸರಬರಾಜು ವ್ಯವಸ್ಥೆಯನ್ನು ಶಾಸಕ ಭರತ್ ಶೆಟ್ಟಿಯವರು ಆದಿತ್ಯವಾರ ಉದ್ಘಾಟಿಸಿದರು.

IMG-20200517-WA0026ಇದುವರೆಗೂ ಈ ಪ್ರದೇಶಗಳಿಗೆ ಪಲ್ಗುಣಿ ನದಿಯ ನೀರನ್ನು ಬಳಸಲಾಗುತ್ತಿತ್ತು, ಇಲ್ಲಿಗೆ ಸಮರ್ಪಕ ಕುಡಿಯುವ ನೀರಿನ ವ್ಯವಸ್ಥೆಗಾಗಿ ಸಾರ್ವಜನಿಕರು ಕಳೆದ ಮೂವತ್ತು ವರ್ಷಗಳಿಂದ ಬೇಡಿಕೆ ಸಲ್ಲಿಸುತ್ತಿದ್ದರು. ಇದೀಗ ಶಾಸಕರು, ಜಿಪಂ.ಸದಸ್ಯರು, ತಾಪಂ.ಸದಸ್ಯರ ಮುತುವರ್ಜಿಯಿಂದ ಎರಡು ಕೊಳವೆ ಬಾವಿ ಸಹಿತ ನೀರು ಸರಬರಾಜು ವ್ಯವಸ್ಥೆ ಮಾಡಲಾಗಿದ್ದು ಇಲ್ಲಿನ ದಶಕಗಳ ಬೇಡಿಕೆ ಈಡೇರಿದಂತಾಗಿದೆ.

IMG-20200517-WA0011ತಾಲೂಕು ಪಂಚಾಯತ್ ಸದಸ್ಯ ನಾಗೇಶ್ ಶೆಟ್ಟಿ, ಮುತ್ತೂರು ಪಂಚಾಯತ್ ಅಧ್ಯಕ್ಷೆ ನಾಗಮ್ಮ, ಉಪಾಧ್ಯಕ್ಷೆ ಪ್ರಭಾವತಿ, ಸದಸ್ಯರುಗಳಾದ ತಾರಾನಾಥ್ ಕುಲಾಲ್, ಪ್ರವೀಣ್ ಆಳ್ವ,ಜಗದೀಶ್ ದುರ್ಗಾಕೊಡಿ, ಜೆರಾಲ್ಡ್ ಪಿಂಟೋ,ಇಲಾಖಾ ಅಧಿಕಾರಿಗಳು, ಪಿಡಿಓ ರಾಜೀವಿ, ಕಾರ್ಯದರ್ಶಿ ವಸಂತಿ, ಎಡಪದವು ಮಹಾಶಕ್ತಿ ಕೇಂದ್ರದ ಕಾರ್ಯದರ್ಶಿ ಗಣೇಶ್ ಪಾಕಾಜೆ, ಸ್ಥಳೀಯ ಮುಖಂಡರು, ಬಿಜೆಪಿಯ ಮುಖಂಡರುಗಳು ಈ ಸಂದರ್ಭದಲ್ಲಿ ಹಾಜರಿದ್ದರು.

IMG-20200517-WA0009

Leave a comment

XHTML: You can use these html tags: <a href="" title=""> <abbr title=""> <acronym title=""> <b> <blockquote cite=""> <cite> <code> <del datetime=""> <em> <i> <q cite=""> <strike> <strong>

Get Immediate Updates .. Like us on Facebook…

Visitors Count Visitor Counter