“ಬಲಿಷ್ಠ ಬಿಲ್ಲವೆರ್” ವಾಟ್ಸಾಪ್ ತಂಡದ “ಹೃದಯ ಸ್ಪಂದನೆ”ಯ 10ನೇ ಸೇವಧನ ಹಸ್ತಾಂತರ
ವೇಣೂರು: ಪಣಪಿಲ ಗ್ರಾಮದ ಬೂತೊಟ್ಟು ಮನೆಯ ಸಿದ್ದಮ್ಮ ಪೂಜಾರ್ತಿ ಇವರ ಮಗನಾದ ದಯಾನಂದ ಪೂಜಾರಿ ಇವರು ಕಳೆದ 11 ತಿಂಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದು ತನ್ನ ದೇಹದ ಸಂಪೂರ್ಣ ಬಲವನ್ನು ಕಳೆದುಕೊಂಡು ಮಲಗಿದ್ದಲ್ಲೇ ಇದ್ದಾರೆ.
ಇದುವರೆಗೆ 4 ಲಕ್ಷಕ್ಕಿಂತಲೂ ಅಧಿಕವಾಗಿ ಖರ್ಚಾಗಿದ್ದು ಇವರ ಆರೋಗ್ಯದಲ್ಲಿ ಯಾವುದೇ ರೀತಿ ಚೇತರಿಕೆ ಕಂಡಿಲ್ಲ, ಮನೆಯ ಆಧಾರಸ್ತಂಭವಾಗಿದ್ದ ಒಬ್ಬನೇ ಮಗನು ಈ ರೀತಿ ಆಗಿರುವುದರಿಂದ ಈಗ ಇವರ ಜೀವನವು ತುಂಬಾ ಕಷ್ಟಕರವಾಗಿದೆ ತೀವ್ರ ಬಡತನದಲ್ಲಿರುವ ಕುಟುಂಬದವರಾಗಿದ್ದು ಈಗಾಗಲೇ ಸಾಲ ಮೂಲ ಮಾಡಿ ಖರ್ಚು ಮಾಡಿರುತ್ತಾರೆ. ಮುಂದಿನ ಚಿಕಿತ್ಸೆಗೆ ಆರ್ಥಿಕ ನೆರವಿಗಾಗಿ “ಬಲಿಷ್ಠ ಬಿಲ್ಲವೆರ್” ತಂಡದ “ಹೃದಯ ಸ್ಪಂದನೆ” ಯೋಜನೆಯ 10ನೇ ಸೇವಾ ಕಾರ್ಯವಾಗಿ 10,000 ರೂಪಾಯಿ ಧನಸಹಾಯ ನೀಡಲಾಯಿತು.
ಈ ಸಂಧರ್ಭದಲ್ಲಿ “ಬಲಿಷ್ಠ ಬಿಲ್ಲವೆರ್” ವಾಟ್ಸಾಪ್ ತಂಡದ ಸಂಪತ್ ಅಂಚನ್ ಕುಕ್ಕೆಡಿ, ಕಂಬಳ ಕೋಣಗಳ ಓಟಗಾರ ಪಣಪಿಲ ಪ್ರವೀಣ್ ಕೋಟ್ಯಾನ್ , ಸತೀಶ್ ಬುನ್ನಾನ್ ಅಳಿಯೂರ್, ಸಂದೇಶ್ ಸುವರ್ಣ ಕುಕ್ಕೇಡಿ, ಅನುಸ್ಕನ್ ಪೂಜಾರಿ ಮಾಂಟ್ರಾಡಿ, ಸಚಿನ್ ಪೂಜಾರಿ ನಾರವಿ, ಹರೀಶ್ ಪೂಜಾರಿ ಅಲಿಯೂರು ಉಪಸ್ಥಿತರಿದ್ದರು.