ಹತ್ತೂರಿನ ದೊರೆ ಪುತ್ತೂರಿನ ಡಾನ್ ಮುತ್ತಪ್ಪ ರೈ ಇನ್ನಿಲ್ಲ
ಪುತ್ತೂರು: ಜಯ ಸಂಘಟನೆಯ ಸ್ಥಾಪಕ ಮುತ್ತಪ್ಪ ರೈ ನಿಧನ.ಕೆಲವು ಸಮಯದಿಂದ ಕ್ಯಾನ್ಸರ್‌ನಿಂದ ಬಳಲುತ್ತಿದ್ದ ಮಾಜಿ ಅಂಡರ್ ವರ್ಲ್ಡ್ ಡಾನ್ ಜಯಕರ್ನಾಟಕ ಸಂಘಟನೆ ಸಂಸ್ಥಾಪಕ ಮುತ್ತಪ್ಪ ರೈ (68) ಆಸ್ಪತ್ರೆಯಲ್ಲೇ ಕೊನೆಯುಸಿರೆಳೆದಿದ್ದಾರೆ.
ಕಳೆದ ಕೆಲವು ತಿಂಗಳಿನಿಂದ ತೀವೃ ಅನಾರೋಗ್ಯಕ್ಕೆ ತುತ್ತಾಗಿದ್ದ ಅವರು ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ ಎನ್ನಲಾಗಿದೆ. ಇಬ್ಬರು ಪುತ್ರರು ಮೂವರು ಸಹೋದರರು ಒಬ್ಬ ಸಹೋದರಿ ಹಾಗೂ ಕುಟುಂಬ ವರ್ಗ ಸೇರಿದಂತೆ ಸಾವಿರಾರು ಅಭಿಮಾನಿಗಳನ್ನು ಅಗಲಿದ್ದಾರೆ.