Published On: Mon, May 11th, 2020

ವಾರಸುದಾರರು ಇಲ್ಲದ ಎರಡು ಶವಗಳ ಅಂತ್ಯಸಂಸ್ಕಾರ.

ಉಡುಪಿ: ಜಿಲ್ಲಾಸ್ಪತ್ರೆಯ ಶವಾಗಾರದಲ್ಲಿ ರಕ್ಷಿಸಿಡಲಾಗಿದ್ದ ಎರಡು ಅನಾಥ ಶವಗಳ ಅಂತ್ಯಸಂಸ್ಕಾರನ್ನು ಸಮಾಜಸೇವಕರಾದ ನಿತ್ಯಾನಂದ ಒಳಕಾಡು, ತಾರಾನಾಥ್ ಮೇಸ್ತ ಶಿರೂರು, ಇವರು ಇರ್ವರು ಸೇರಿಕೊಂಡು ಕಾನೂನು ಪ್ರಕ್ರಿಯೆಗಳು ನಡೆದ ಬಳಿಕ, ಬೀಡಿನಗುಡ್ಡೆ ಹಿಂದು ರುದ್ರಭೂಮಿಯಲ್ಲಿ ಸೋಮವಾರ ನಡೆಸಿದರು.48ee0e82-c72d-440d-85f5-3e12c434dc1e

ಕಿನ್ನಿಮೂಲ್ಕಿಯ ನಿವಾಸಿಯಾದ ವೃದ್ಧೆ ರಾಧ ಶೆಟ್ಟಿಗಾರ್ತಿ (82ವ) ಅವರು ಅನಾರೋಗ್ಯದ ಕಾರಣದಿಂದ ಕಳೆದ ವರ್ಷದ ಏ.2, ರಂದು ಅಜ್ಜರಕಾಡು ಜಿಲ್ಲಾಸ್ಪತ್ರೆಯಲ್ಲಿ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದರು. ಬಹು ತಿಂಗಳುಗಳಿಂದ ಚಿಕಿತ್ಸೆ ಪಡೆಯುತ್ತಿದ್ದ ವೃದ್ಧೆಯು ಚಿಕಿತ್ಸೆಗೆ ಸ್ಪಂದಿಸದೆ, ಕಳೆದ ಫೆ-2 ರಂದು ಆಸ್ಪತ್ರೆಯಲ್ಲಿ ಮೃತಪಟ್ಟರು. ಅವರ ಶವವನ್ನು ಜಿಲ್ಲಾಸ್ಪತ್ರೆಯ ಶವಾಗಾರದಲ್ಲಿ ವಾರಸುದಾರರ ಬರುವಿಕೆಗಾಗಿ ರಕ್ಷಿಸಿಡಲಾಗಿತ್ತು. ವೃದ್ಧೆ ಮೃತಪಟ್ಟು 71 ದಿನಗಳು ಕಳೆದರೂ ಸಂಬಂಧಿಕರು ಸಂಪರ್ಕಿಸಿರಲಿಲ್ಲ.c1ca69e5-a48f-4976-b513-191046640aaa

ಇನ್ನೊಂದು ಪ್ರಕರಣದಲ್ಲಿ ನಗರದ ಹೊರ ವಲಯದ, ಸಂತೆಕಟ್ಟೆಯ ಮೀನು ಮಾರುಕಟ್ಟೆ ವಠಾರದಲ್ಲಿ ಅರೆ ಪ್ರಜ್ಞಾಹೀನ ಸ್ಥಿತಿಯಲ್ಲಿದ್ದ, ಅಪರಿಚಿತ ರೋಗಿಯನ್ನು ಕಳೆದ ಮಾ.7 ರಂದು, ಅಜ್ಜರಕಾಡು ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿತ್ತು. ಚಿಕಿತ್ಸೆಗೆ ಸ್ಪಂದಿಸದೆ ರೋಗಿಯು ಮಾ.10 ರಂದು ಮರಣಹೊಂದಿದ. ಮರಣ ಪೂರ್ವದಲ್ಲಿ ಮೃತ ರೋಗಿಯು ಸುರೇಶ್ ಶೆಟ್ಟಿ (56 ವ) ತಂದೆ ಗೋಪಾಲ ಶೆಟ್ಟಿ, ಬೆಳಿಂಜೆ, ಹೆಬ್ರಿ ಎಂದು ಅಸ್ವಷ್ಟ ಮಾಹಿತಿ ನೀಡಿದ್ದನು. ಮೃತನ ಶವವನ್ನು ಜಿಲ್ಲಾಸ್ಪತ್ರೆಯ ಶವಾಗಾರಲ್ಲಿ ರಕ್ಷಿಸಿಡಲಾಗಿತ್ತು. ವ್ಯಕ್ತಿ ಮೃತಪಟ್ಟು 62 ದಿನಗಳು ಕಳೆದರೂ ಸಂಬಂಧಿಕರು ಸಂಪರ್ಕಿಸಿರಲಿಲ್ಲ.

ಎರಡು ಶವಗಳ ವಾರಸುದಾರರ ಪತ್ತೆಗೊಳಿಸಲು ಪೊಲೀಸರು ಸಾಮಾಜಿಕ ಜಾಲತಾಣ, ಮಾಧ್ಯಮಗಳಲ್ಲಿ ಪ್ರಕಟಣೆ ನೀಡಿದ್ದರು. ಆದರೆ ಕಾಯುವಿಕೆ ಕಾಲಮಿತಿ ಕಳೆದರೂ, ಯಾರೂ ಬಾರದ ಕಾರಣದಿಂದ, ಎರಡು ಕಳೇಬರಗಳ ಅಂತ್ಯಸಂಸ್ಕಾರವನ್ನು ಪೊಲೀಸರು ಸಮಾಜಸೇವಕರಾದ ನಿತ್ಯಾನಂದ ಒಳಕಾಡು, ತಾರಾನಾಥ್ ಮೇಸ್ತ ಶಿರೂರು ಅವರ ಸಹಕಾರದಿಂದ ನಡೆಸಿದರು. ಅಂತಿಮ ನಮನ, ಹೂಹಾರ ಸಮರ್ಪಿಸಿ, ಕಾನೂನಿನಂತೆ ದಫನ ರೂಪದಲ್ಲಿ ಅಂತ್ಯಸಂಸ್ಕಾರವನ್ನು, ನಗರ ಠಾಣೆಯ ತನಿಖಾ ಸಹಾಯಕ ವಿಶ್ವನಾಥ್ ಶೆಟ್ಟಿ ಅಮಾಸೆಬೈಲು ಅವರ ಸಮಕ್ಷಮದಲ್ಲಿ ಗೌರವಯುತವಾಗಿ ಬೀಡಿನಗುಡ್ಡೆ ಹಿಂದು ರುದ್ರಭೂಮಿಯಲ್ಲಿ ನಡೆಸಲಾಯಿತು. ಅಣ್ಣಪ್ಪ ಕರಂಬಳ್ಳಿ ಅವರು ಆರ್ಥಿಕ ನೆರವು ಒದಗಿಸಿ ಸಹಕರಿಸಿದರು. ಶವಗಳ ಸಾಗಿಸಲು ಉಡುಪಿ ಜಿಲ್ಲಾ ನಾಗರಿಕ ಸಮಿತಿ ಉಚಿತ ಅಂಬುಲೇನ್ಸ್ ಸೇವೆ ಒದಗಿಸಿತು.

Leave a comment

XHTML: You can use these html tags: <a href="" title=""> <abbr title=""> <acronym title=""> <b> <blockquote cite=""> <cite> <code> <del datetime=""> <em> <i> <q cite=""> <strike> <strong>

Get Immediate Updates .. Like us on Facebook…

Visitors Count Visitor Counter