Published On: Mon, May 11th, 2020

ಲಾಕ್ ಡೌನ್ ಸಂದರ್ಭದಲ್ಲಿ ಕನ್ನಡಿಗ ಸಹೋದರರ ಸಮಾಜ ಸೇವೆ

 ಮುಂಬಯಿ :ರಾಜು ಮೊಗವೀರ ಹಾಗೂ ಸತೀಶ  ಮೊಗವೀರ  ಇವರ ಅಂದೇರಿಯ ಅಂಬಿಕಾ ಫುಡ್  & ಹಾಸ್ಪಿಟಾಲಿಟಿ  ಸರ್ವಿಸಸ್ ಇದರ  ಪ್ರಾಯೋಜಕತ್ವದಲ್ಲಿ  ಕೊರೊನ  ಸಂತ್ರಸ್ತರಿಗೆ  ಮುಂಬೈ  ಮಹಾನಗರ ಪಾಲಿಕೆ  ವತಿಯಿಂದ  ಪ್ರತಿ ದಿನ ಹದಿನೈದು ಸಾವಿರ ದಿಂದ  ಇಪತ್ತು  ಸಾವಿರ  ಊಟದ  ಪ್ಯಾಕೆಟ್  ಗಳನ್ನು  ವಿತರಿಸಲಾಗುತ್ತಿದೆ. ದಿನಾಲೂ  ಬೇರೆ ಬೇರೆ ರೀತಿಯ  ಪುಲಾವ್, ಬಿರಿಯಾನಿ, ಕಿಚಡಿ, ಮಸಾಲಾ ಬಾತ್, ಹಾಗೂ ಪಾವ್ ಬಾಜಿ  ಯನ್ನು  ವಿತರಿಸುತ್ತಿದ್ದಾರೆ.87c9ca68-5944-45ab-8c8d-99939a7ffa25
99c45e11-6cbb-41c2-a1e1-2dc5512568cbಹಾಗೂ ಅಲ್ಲಿನ  ಹತ್ತಿರದ  ನಿವಾಸಿಗಳಿಗೂ, ಕಾರ್ಮಿಕರಿಗೂ, ಊಟವಿಲ್ಲದೆ  ಪರದಾಡುತ್ತಿದ್ದವರಿಗೆ   ಉಚಿತ  ಊಟದ  ವೆವಸ್ಥೆಗಳನ್ನು  ಮಾಡುತ್ತಿದ್ದಾರೆ. ಹಾಗೂ ಅನಾಥ ಆಶ್ರಮಕ್ಕೂ  ಬೇಟಿ  ನೀಡಿ ಅಲ್ಲಿನ ಮಕ್ಕಳಿಗೂ ಊಟದ  ವೆವಸ್ಥೆಯನ್ನು  ಮಾಡುತ್ತಿದ್ದಾರೆ. ಇವರ ಅಂಬಿಕಾ ಫುಡ್  & ಹಾಸ್ಪಿಟಾಲಿಟಿ  ಸರ್ವಿಸಸ್ ಇದು ಅಂದೇರಿಯ ಎಮ್ ಐ ಡಿ ಸಿ ಯ  ಕೊಂಡಿವಿಟಾ  ರೋಡ್  ಇಲ್ಲಿ ಇದೆ. ಜನ ಸೇವೆಯೇ ಜನಾರ್ದನ ಸೇವೆ  ಎಂದು  ತಮ್ಮ  ಕೈಲಾದಷ್ಟು ಸಹಾಯವನ್ನು  ಮಾಡುತ್ತಿದ್ದಾರೆ. ಇವರ ಮೆನೇಜ್ಮೆಂಟ್  ಪಾಲುದಾರರಾದ  ಶಿವರಾಮ ನಾಯ್ಕ್, ಹಾಗೂ ಸುರೇಶ ವೀರಮಲ್ಲ  ಇವರು ಸಹಕರಿಸುತ್ತಿದ್ದಾರೆ. 5ff9c0e3-afdb-42e4-a507-7040b5e20bfb
5923f4f4-4b46-4d5b-b219-87a1a7f9fe5f1950 ರಲ್ಲಿ  ಮುಂಬೈಗೆ  ಆಗಮಿಸಿದ ರಾಜು ಮೊಗವೀರ ಮತ್ತು ಸತೀಶ ಮೊಗವೀರ  ಇವರ  ಹುಟ್ಟೂರು ಕುಂದಾಪುರದ  ತಗ್ಗರ್ಸೆಯ  ಉದ್ದಬೆಟ್ಟು ಗ್ರಾಮ. ಸಹೋದರರು ಹೋಟೆಲ್ ನಲ್ಲಿ  ಸಣ್ಣ  ಕೆಲಸದಿಂದ  ಹಿಡಿದು ಡೆಲಿವರಿ ಬಾಯ್  ಆಗಿ , ವೈಟರ್  ಆಗಿ ಒಂದೊಂದೇ  ಮೆಟ್ಟಿಲನ್ನು  ಏರುತ್ತ  1995 ರಲ್ಲಿ  ಸ್ವಂಥ  ಉದ್ಯಮವನ್ನು  ಸ್ತಾಪಿಸಿದರು   ಕೊಲ್ಲೂರು  ಮೂಕಾಂಬಿಕೆಯ  ಆಪಾರ  ಭಕ್ತರಾಗಿರುವ  ಇವರು  ತಮ್ಮ  ಉದ್ಯಮಕ್ಕೆ  ಅಂಬಿಕಾ ಫುಡ್  & ಹಾಸ್ಪಿಟಾಲಿಟಿ  ಸರ್ವಿಸಸ್  ಎನ್ನುವ ಹೆಸರಿಟ್ಟು  ಅಲ್ಲಿಂದ  ಕಾರ್ಪೊರೇಟ್  ಆಫೀಸ್, ಬ್ಯಾಂಕ್, ನ್ಯೂಸ್ ಚಾನಲ್, ಹಾಗೂ  ಸರಕಾರಿ  ಆಫೀಸುಗಳಿಗೆ ಮಧ್ಯಾಹ್ನ ದ ಊಟ  ಸಪ್ಲಯ್  ಮಾಡತೊಡಗಿದರು. ಕೆಲವೊಮ್ಮೆ  ವ್ಯಾಪಾರ ದಲ್ಲಿ  ಏರಿಳಿತ  ವನ್ನು  ಕಂಡರೂ  ಎದೆಗುಂದದೆ  ಮಾಡು ಇಲ್ಲವೇ  ಮಡಿ ಎನ್ನುವ  ಗಾದೆಯೆಂತೆ  ತನ್ನ  ವ್ಯಾಪಾರ ವನ್ನು  ಮುನ್ನೆಡೆಸುತ್ತ  ಇದ್ದಾರೆ. ಈಗ  ಮತ್ತೆಲ್ಲ  ವ್ಯಾಪಾರವು  ಬಂದ್ ಸ್ಥಿತಿಯಲಿದ್ದರು  ಕೊಡುವ  ದೇವರು ಯಾವುದರಲ್ಲಿಯಾದರು  ಕೊಟ್ಟು  ಕಾಪಾಡುತ್ತಾರೆ  ಎನ್ನುತ್ತಾರೆ.e8b8e87d-d9ac-4c1a-8267-93a907a1345d
ಇವರು  ಮುಂಬೈ ಸಮೀಪ ಕಲ್ಯಾಣ ದಲ್ಲಿ ಗುರುದಾಮ್ ಲಂಚ್ ಹೋಮ್ ಮತ್ತು  ಅಂದೇರಿಯಲಿ  ಅಂಬಿಕಾ  ಲಂಚ್ ಹೋಮ್  ಗಳನ್ನು  ನಡೆಸುತ್ತಿದ್ದಾರೆ. ಮುಂದೆಯು  ಸಹ  ಇವರಿಗೆ  ಇನ್ನಷ್ಟು ಸೇವೆಗಳನ್ನು  ಮಾಡುವ  ಶಕ್ತಿಯು  ದೇವರು  ಕರುಣಿಸಲಿ.  ಇವರ ಸಮಾಜ ಸೇವೆಯನ್ನು ಮುಂಬಯಿಯ ಅನೇಕ ಗಣ್ಯರು ಮೆಚ್ಚಿ ಶುಭ ಹಾರೈಸಿದ್ದಾರೆ.

Leave a comment

XHTML: You can use these html tags: <a href="" title=""> <abbr title=""> <acronym title=""> <b> <blockquote cite=""> <cite> <code> <del datetime=""> <em> <i> <q cite=""> <strike> <strong>

Get Immediate Updates .. Like us on Facebook…

Visitors Count Visitor Counter