Published On: Sat, May 9th, 2020

ರೈಡರ್ಸ್ ಫ್ರೆಂಡ್ಸ್ ಕ್ಲಬ್ ವತಿಯಿಂದ ಸ‍್ಥಳೀಯ ನಾಗರಿಕರಿಗೆ ಹಾಲು ವಿತರಣೆ

ಕೈಕಂಬ: ಅಡ್ಡೂರು ಕಾಂಜೀಲಕೊಡಿ ರೈಡರ್ಸ್ ಫ್ರೆಂಡ್ಸ್ ಕ್ಲಬ್  ಇದರ ವತಿಯಿಂದ ಕೋವಿಡ್-19 ಎಂಬ ಮಹಾಮಾರಿ ವಿರುದ್ದ ಹೋರಾಡುತ್ತಿರುವ ನಾಗರಿಕರಿಗೆ ಮೇ 8ರಂದು ಶುಕ್ರವಾರ  ಹಾಲು ವಿತರಣಾ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.069d4607-ede1-4ae8-8dd9-7b4449e12709 (1)

ರೈಡರ್ಸ್ ಫ್ರೆಂಡ್ಸ್ ಕ್ಲಬ್ ಅಧ್ಯಕ್ಷ  ಸುಭಾಶ್ಚಂದ್ರರವರ ಮನೆಯ ವಠಾರದಲ್ಲಿ ಕಾರ್ಯಕ್ರಮವನ್ನು  ಹಮ್ಮಿಕೊಂಡಿದ್ದು  ಅಧ್ಯಕ್ಷತೆಯನ್ನು ರೈಡರ್ಸ್ ಫ್ರೆಂಡ್ಸ್ ಕ್ಲಬ್ ಇದರ ಅಧ್ಯಕ್ಷ ಸುಭಾಶ್ಚಂದ್ರ ಅವರು ವಹಿಸಿದರು.

ff887082-3ea6-404c-86d2-63ed9e691311ಹಾಗೂ ಬದ್ರುಲ್ ಹುದಾ ಜುಮ್ಮಾ ಮಸೀದಿ ಕಾಂಜೀಲಕೊಡಿ ಗೌರವ ಅಧ್ಯಕ್ಷ  ಹಾಜಿ M.H ಮೈಯದಿ ಹಾಗೂ ಬದ್ರುಲ್ ಹುದಾ ಜುಮ್ಮಾ ಮಸೀದಿ ಅಧ್ಯಕ್ಷ  ಅಹ್ಮದ್  ಬಾವ , ಪದ್ಮನಾಭ ಶೆಟ್ಟಿ  ಪೊನ್ನೆಲ   ಹಾಲು ವಿತರಣಾ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.  ಈ ಸಂದರ್ಭದಲ್ಲಿ ರೈಡರ್ಸ್ ಫ್ರೆಂಡ್ಸ್ ಕ್ಲಬ್  ಇದರ ಸರ್ವಸದಸ್ಯರು ಇದ್ದರು. ಸುಮಾರು 280 ಮನೆಗಳಿಗೆ ಪ್ರತಿ ಮನೆಗೆ 1 ಲೀ ನಂತೆ ಹಾಲು ವಿತರಿಸಲಾಯಿತು.

 ಹಾಲು ವಿತರಣಾ ಕಾರ್ಯಕ್ರಮಕ್ಕೆ  ಸ್ಪಂದಿಸಿದ  ಊರಿನ ಎಲ್ಲಾ ನಾಗರಿಕರಿಗೆ ರೈಡರ್ಸ್ ಫ್ರೆಂಡ್ಸ್ ಕ್ಲಬ್ ಕಾಂಜಿಲಕೋಡಿ ಇದರ ಅಧ್ಯಕ್ಷ ಮತ್ತು ಸರ್ವ ಸದಸ್ಯರು ಅಭಿನಂದಿಸಿದ್ದಾರೆ.

Leave a comment

XHTML: You can use these html tags: <a href="" title=""> <abbr title=""> <acronym title=""> <b> <blockquote cite=""> <cite> <code> <del datetime=""> <em> <i> <q cite=""> <strike> <strong>

Get Immediate Updates .. Like us on Facebook…

Visitors Count Visitor Counter