Published On: Sat, May 9th, 2020

ಚಿನ್ನ – ಬೆಳ್ಳಿ ಕೆಲಸಗಾರ ನೆರವಿಗೆ ಬಂದ ಶಾಸಕ ಸುನಿಲ್ ಕುಮಾರ್.

ಕಾರ್ಕಳ : ಕೊರೊನಾ ಎಂಬ ಮಹಾಮಾರಿಯು ಇಡೀ ಪ್ರಪಂಚವನ್ನೇ ತಲ್ಲಣಗೊಳಿಸಿರುವ ಈ ಸಂಧರ್ಭದಲ್ಲಿ ಕೆಲಸವಿಲ್ಲದೆ ಕಂಗಾಲಾಗಿರುವ ವಿಶ್ವಕರ್ಮ ಸಮುದಾಯದ ಚಿನ್ನ ಬೆಳ್ಳಿ ಕೆಲಸಗಾರರ ಸಹಾಯಕ್ಕೆ ಕಾರ್ಕಳ ವಿಧಾನಸಭಾ ಕ್ಷೇತ್ರದ ಶಾಸಕರಾದ ವಿ. ಸುನೀಲ್ ಕುಮಾರ್ ರವರು ಧಾವಿಸಿದ್ದಾರೆ.da5cb5bf-6df1-4f17-a7f7-b4d2bc236b3e

ಇಂದು ದಿನಾಂಕ 08-05-2020 ರಂದು ಕಾರ್ಕಳ ತಾಲೂಕಿನ ಸುಮಾರು 300 ಕ್ಕೂ ಅಧಿಕ ಚಿನ್ನ ಹಾಗೂ ಬೆಳ್ಳಿ ಕೆಲಸಗಾರರ ಕುಟುಂಬಗಳಿಗೆ ಆಹಾರ ಕಿಟ್ ಅಕ್ಕಿಯನ್ನು ಶಾಸಕ ವಿ ಸುನೀಲ್ ಕುಮಾರ್ ವಿತರಿಸಿದರು.

ಈ ಸಂದರ್ಭದಲ್ಲಿ ಬಿಜೆಪಿ ತಾಲೂಕು ಪ್ರಧಾನಕಾರ್ಯದರ್ಶಿ ನವೀನ್ ನಾಯಕ್ , ಬಿಜೆಪಿ ನಗರ ಅಧ್ಯಕ್ಷ ಅನಂತಕೃಷ್ಣ ಶೆಣೈ , ಚಿನ್ನ-ಬೆಳ್ಳಿ ಕೆಲಸಗಾರರ ಸಂಘದ ಅಧ್ಯಕ್ಷರು ಹಾಗೂ ಪದಾಧಿಕಾರಿಗಳು ಉಪಸ್ಥಿತರಿದ್ದರು.

Leave a comment

XHTML: You can use these html tags: <a href="" title=""> <abbr title=""> <acronym title=""> <b> <blockquote cite=""> <cite> <code> <del datetime=""> <em> <i> <q cite=""> <strike> <strong>

Get Immediate Updates .. Like us on Facebook…

Visitors Count Visitor Counter