ಕುಂಪನಮಜಲು:ಮನೆಗೆ ನುಗ್ಗಿ ಹಲ್ಲೆ
ಬಂಟ್ವಾಳ : ಕೌಟುಂಬಿಕ ಕಲಹ ವಿಚಾರಕ್ಕೆ ಸಂಬಂಧಿಸಿ ತಂಡವೊಂದು ಮನೆಗೆ ನುಗ್ಗಿ ಮನೆ ಮಂದಿಗೆ ಮಾರಣಾಂತಿಕವಾಗಿ ಹಲ್ಲೆ ನಡೆಸಿರುವ ಘಟನೆ ತಾಲೂಕಿನ ಫರಂಗಿಪೇಟೆ ಸಮೀಪದ ಕುಂಪನಮಜಲು ಎಂಬಲ್ಲಿ ನಡೆದಿದ್ದು ಬಗ್ಗೆ ಬಂಟ್ವಾಳ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಹಲ್ಲೆ ಆರೋಪಕ್ಕೆ ಸಂಬಂಧಿಸಿ ಸವಾದ್ ಕುಕ್ಕಾಜೆ, ತಸ್ಲೀಮ್ ಅಮೆಮ್ಮಾರ್, ಮುಸ್ತಾಕ್ ಅಮೆಮ್ಮಾರ್, ಶಾಕಿರ್ ಅಮೆಮ್ಮಾರ್, ಝೈನುದ್ದೀನ್ ಅಮೆಮ್ಮಾರ್ ಎಂಬವರ ಮೇಲೆ ಪ್ರಕರಣ ದಾಖಲಾಗಿದೆ.
ಹಲ್ಲೆಯಿಂದ ಕುಂಪನಮಜಲು ನಿವಾಸಿ ಕೆ.ಮುಹಮ್ಮದ್(65), ಅವರ ಮಕ್ಕಳಾದ ಅಬ್ದುಲ್ ಲತೀಫ್(48), ಹಕೀಮ್(30), ಸಲೀಂ ಮಲಿಕ್(26), ಸೊಸೆ ರಶೀದಾ ಬಾನು(28), ಅವರ ಪುತ್ರಿ ಆಯಿಷಾ ರಿಮಿಶಾ(8) ಗಾಯಗೊಂಡಿದ್ದು ಇವರನ್ನು ಮಂಗಳೂರು ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.
ಕುಕ್ಕಾಜೆ ಮತ್ತು ಕುಂಪನಮಜಲಿನ ಎರಡು ಕುಟುಂಬಗಳ ನಡುವೆ ಹಲವು ಸಮಯದಿಂದ ಕೌಟುಂಬಿಕ ವಿಚಾರದಲ್ಲಿ ಆಗಾಗ ಕಲಹ ನಡೆಯುತ್ತಿದ್ದು ಇತ್ತೀಚೆಗೆ ಕಲಹ ಹೆಚ್ಚಾಗಿ ಕುಕ್ಕಾಜೆಯ ಕುಟುಂಬದವರು ಕುಂಪನಮಜಲು ಕುಟುಂಬದವರ ಮೇಲೆ ಹಲ್ಲೆ ಮಾಡಿದ್ದಾರೆ ಎಂದು ಪೊಲೀಸರಿಗೆ ನೀಡಿರುವ ದೂರಿನಲ್ಲಿ ಆರೋಪಿಸಲಾಗಿದೆ.ಈ ಬಗ್ಗೆ ಪ್ರಕರಣ ದಾಖಲಿಸಿರುವ ಪೊಲೀಸರು ಮುಂದಿನ ಕ್ರಮ ಕೈಗೊಂಡಿದ್ದಾರೆ.