Published On: Fri, Apr 24th, 2020

ಸ್ಪೂರ್ತಿ ಭಿನ್ನ ಸಾಮರ್ಥ್ಯದ ಮಕ್ಕಳ ಶಾಲೆ ಮತ್ತು ತರಬೇತಿ ಕೇಂದ್ರ

ನಮ್ಮ ಸ್ಪೂರ್ತಿ ವಿಶೇಷ ಮಕ್ಕಳ ಶಾಲಾ ಆಡಳಿತ ಮಂಡಳಿ ಹಾಗೂ ಶಾಲಾ ಹಿತೈಷಿಗಳ ಸಹಕಾರದೊಂದಿಗೆ ಈ ಸಮಯದಲ್ಲಿ ಬಡವರು ,ಅಸಹಾಯಕರು ಕೊರೋನ ಎಂಬ ರೋಗದಿಂದ ಅಲ್ಲ ಹೊಟ್ಟೆಗೆ ಅನ್ನವಿಲ್ಲದೆ ಹಸಿವಿನಿಂದ ಸಾಯಬಾರದು ಎಂಬ ಚಿಂತನೆಯೊಂದಿಗೆ ಅಸಹಾಯಕರಿಗಾಗಿ ತುರ್ತು ಸೇವಾ ಯೋಜನೆ ಎನ್ನುವ ವಿಭಿನ್ನ ಯೋಚನೆಯಿಂದ ಕಳೆದ 30 ದಿನಗಳಿಂದ ಮೂಡುಬಿದಿರೆ ಹಾಗೂ ಆಸುಪಾಸಿನ ಗ್ರಾಮಾಂತರ ಪ್ರದೇಶದ ಸುಮಾರು 600 ಕ್ಕೂ ಹೆಚ್ಚು ಅಶಕ್ತ ಕುಟುಂಬಗಳಿಗೆ ನಮ್ಮಿಂದಾದ ನೆರವನ್ನು ನೀಡುವುದರೊಂದಿಗೆ ಅವರ ಕಷ್ಟಗಳನ್ನು ವಿಚಾರಿಸುವಾಗ ನಮ್ಮನ್ನು ನಾವೇ ನಂಬದಂತಹ ಕೆಲವು ಸಂಗತಿಗಳು ತಿಳಿದುಬಂತು.f1b52f0b-dbde-499a-b2e3-7509a3e3adb1

ಅದೇನೆಂದರೆ ಶೌಚಾಲಯವೇ ಇಲ್ಲದ ಮನೆಗಳು ,ಕೆಲವು ಕಡೆಗಳಲ್ಲಿ ನೀರಿನ ವ್ಯವಸ್ಥೆ ಇಲ್ಲ ,ಕೆಲವು ಮನೆಗೆ ಮೇಲೆ ಟರ್ಪಾಲ್ ಹೊದಿಸಲಾಗಿದ್ದರೆ ಕೆಲವು ಮನೆಯಲ್ಲಿ ಒಳಗೆ ಮಲಗಿಕೊಂಡು ನಕ್ಷತ್ರಗಳನ್ನು ಲೆಕ್ಕ ಹಾಕಬಹುದು ,ಕೆಲವು ಇಂದೋ ನಾಳೆಯೋ ಬೀಳುವ ಪರಿಸ್ಥಿತಿಯಲ್ಲಿ ಇರುವ ಮನೆಗಳು ,ಕೆಲವು ವಯೋವ್ರದ್ದರಿದ್ದು ಯಾರೂ ದಿಕ್ಕಿಲ್ಲದ ಮನೆಗಳು ,ಪಡಿತರ ಸಿಗದ ಮನೆಗಳು, ಔಷದಕ್ಕಾಗಿ ಹಣವಿಲ್ಲದೆ ಪರದಾಡುತ್ತಿರುವ ಮನೆಗಳು, ವಿಕಲಚೇತನರು, ಹೀಗೆ ನಮ್ಮನ್ನು ನಾವೇ ನಂಬದಂತಹ ಪರಿಸ್ಥಿತಿಯಲ್ಲಿ ಇರುವ ಮನೆಗಳು

ಇದನ್ನೆಲ್ಲಾ ಗಮನಿಸಿದ ನಾವು ದಿನಸಿ ಸಾಮಾಗ್ರಿಗಳೊಂದಿಗೆ ಅಗತ್ಯವಿರುವವರಿಗೆ ಆಸ್ಪತ್ರೆ ಗೆ ದಾಖಲಿಸಿ ಚಿಕಿತ್ಸೆ, ಅಸಹಾಯಕ ರೋಗಿಗಳಿಗೆ ಉಚಿತವಾಗಿ ಔಷಧ, ಸಂಬಂಧಿಸಿದ ಇಲಾಖೆಗಳಿಗೆ ಅಸಹಾಯಕರ ಅಗತ್ಯವಿರುವ ಮಾಹಿತಿ ನೀಡಿ ಅವರಿಂದ ಸೂಕ್ತ ಭರವಸೆ ,ಜನಪ್ರತಿನಿಧಿಗಳಿಗೆ ಅಸಹಾಯಕರ ದಾರುಣ ಪರಿಸ್ಥಿತಿಯನ್ನು ತಿಳಿಸಿ ಅವರಿಂದಲೂ ಸೂಕ್ತ ಭರವಸೆ ,ಹೀಗೆ ಕಳೆದ 30 ದಿನಗಳಿಂದ ಅಸಹಾಯಕರಿಗೆ ನಮ್ಮಿಂದಾದ ಸಹಾಯವನ್ನು ಮಾಡುವುದರೊಂದಿಗೆ ಈ ಕಷ್ಟಕರ ಪರಿಸ್ಥಿತಿಯಲ್ಲಿ ಅವರಿಗೆ ಸಾಂತ್ವನ ನೀಡುತ್ತಾ ಈ ನಮ್ಮ ತುರ್ತು ಸೇವಾ ಯೋಜನೆಯು ನಿರಂತರವಾಗಿ ಮುನ್ನಡೆಯುತ್ತಿದೆ

ನಮ್ಮ ಪುಣ್ಯ ಸೇವಾ ಕಾರ್ಯವು ನಿರಂತರವಾಗಿ ಮುನ್ನಡೆಯಲು ನಮಗೆ ಸಹಕರಿಸಿದ ನಮ್ಮ ಸ್ಪೂರ್ತಿ ವಿಶೇಷ ಶಾಲಾ ಹಿತೈಷಿಗಳಿಗೆ , ದಾನಿಗಳಿಗೆ ,ನಮ್ಮೊಂದಿಗೆ ಪ್ರತ್ಯಕ್ಷವಾಗಿ ಹಾಗೂ ಪರೋಕ್ಷವಾಗಿ ಸಹಕರಿಸಿದ ತಮಗೆಲ್ಲರಿಗೂ ನಮ್ಮ ಸಂಸ್ಥೆಯ ಪರವಾಗಿ ಹ್ರತ್ಪೂರ್ವಕ ಧನ್ಯವಾದಗಳು

ಪ್ರಕಾಶ್ ಜೆ ಶೆಟ್ಟಿಗಾರ್
ಸಂಸ್ಥಾಪಕರು
ಸ್ಪೂರ್ತಿ ಭಿನ್ನ ಸಾಮರ್ಥ್ಯದ ಮಕ್ಕಳ ಶಾಲೆ ಮತ್ತು ತರಬೇತಿ ಕೇಂದ್ರ
ಮೂಡುಬಿದಿರೆ
9900710209

Leave a comment

XHTML: You can use these html tags: <a href="" title=""> <abbr title=""> <acronym title=""> <b> <blockquote cite=""> <cite> <code> <del datetime=""> <em> <i> <q cite=""> <strike> <strong>

Get Immediate Updates .. Like us on Facebook…

Visitors Count Visitor Counter