ಸವಿತಾ ಸಮಾಜದ ವತಿಯಿಂದ ಆಹಾರ ಧಾನ್ಯ ಸಾಮಾಗ್ರಿಗಳ ಕಿಟ್ ವಿತರಣೆ
ಮಂಗಳೂರು: ಕರ್ನಾಟಕ ರಾಜ್ಯ ಸವಿತಾ ಸಮಾಜದ ವತಿಯಿಂದ ನಮ್ಮ ಜಿಲ್ಲೆಯ ಸಮಾಜದ ತೀರಾ ಬಡವರಿಗೆ ಕಿಂಚಿತ್ ಆಹಾರ ಧಾನ್ಯ ಸಾಮಾಗ್ರಿಗಳ 70 ಕಿಟ್ ಗಳನ್ನು ಕಳುಹಿಸಿದ್ದು ಜತೆಗೆ ನಮ್ಮ ಜಿಲ್ಲಾ ಸಮಿತಿಯ ವತಿಯಿಂದಲೂ 90 ಕಿಟ್ ಗಳನ್ನು ತಯಾರಿಸಿ ಜಿಲ್ಲೆಯ ಒಟ್ಟು 160 ತೀರಾ ಬಡವರಿಗೆ ದೊರಕುವಂತೆ ವ್ಯವಸ್ಥೆ ಮಾಡಲಾಗಿದೆ. ದಯಮಾಡಿ ಯಾರೂ ಕೂಡ ಕಿಟ್ ಗಳನ್ನು ನೀಡುವಾಗ ಫಲಾನುಭವಿಗಳ ಫೋಟೊ ತೆಗೆಯಬಾರದಾಗಿ ವಿನಂತಿ. ಕೇವಲ ಹೆಸರು ಮತ್ತು ದೂರವಾಣಿ ಸಂಖ್ಯೆಯನ್ನು ಸಂಬಂಧ ಪಟ್ಟವರಿಗೆ ನೀಡುವುದು.
ವಿಶೇಷವಾಗಿ ಎಡಪದವು ವಲಯ ಸಮಿತಿಯವರು ಸುಮಾರು 50 ಮಂದಿಗೆ ಹಾಗು ಉಳ್ಳಾಲ ವಲಯ ಸಮಿತಿಯವರು ಸುಮಾರು 40 ಮಂದಿಗೆ ತಂತಮ್ಮ ಸಮಿತಿಯ ವತಿಯಿಂದ ನೀಡಿರುವುದು ಸಂತೋಷದ ಸಂಗತಿ, ಈಗಾಗಲೇ ವಿವಿಧ ತಾಲೂಕು ಹಾಗು ವಲಯ ಸಮಿತಿಯವರು ಕೂಡ ತಂತಮ್ಮ ಸಮಿತಿಯ ವತಿಯಿಂದ ಕಿಟ್ ಗಳನ್ನು ನೀಡಲಿದ್ದಾರೆಂಬುದು ಒಳ್ಳೆಯ ವಿಚಾರ. ಒಟ್ಟಿನಲ್ಲಿ ಕಷ್ಟದಲ್ಲಿದ್ದವರಿಗೆ ಯಾವುದೇ ಮೂಲಗಳಿಂದಾದರು ಸಿಗುವಂತಾಗಲಿ ಎಂಣದು ಸವಿತಾ ಸಮಾಜದ ಆಶಯ.