Published On: Thu, Apr 9th, 2020

ಬಿರುವೆರ್ ಕುಡ್ಲ ಬಜಪೆ ಘಟಕದ ವತಿಯಿಂದ  ಆಶಾ ಕಾರ್ಯಕರ್ತೆಯರಿಗೆ ಮತ್ತು ಆರೋಗ್ಯ ಸಿಬ್ಬಂದಿಗಳಿಗೆ ಸಹಾಯಹಸ್ತ

ಬಜಪೆ: ಕೊರೊನಾ ಸೋಂಕಿನ ವಿರುದ್ಧದ ಹೋರಾಟದಲ್ಲಿ ಆಶಾ ಕಾರ್ಯಕರ್ತೆಯರು ಮತ್ತು ಆರೋಗ್ಯ ಸಿಬ್ಬಂದಿಗಳ ಸೇವೆ ಅನನ್ಯವಾಗಿದೆ. ಜೀವದ ಹಂಗು ತೊರೆದು ಪ್ರತಿನಿತ್ಯ ಸಾವಿರಾರು ಜನ ಹೋಂ ಕ್ವಾರಂಟೈನ್‌ಗಳ ಮನೆಗಳಿಗೆ ಭೇಟಿ ನೀಡಿ ಆರೋಗ್ಯದ ವರದಿ ದಾಖಲಿಸುತ್ತಿರುವ ಆಶಾ ಕಾರ್ಯಕರ್ತೆಯರಿಗೆ ಧೈರ್ಯ ತುಂಬುವ ಸಹಾಯಹಸ್ತವನ್ನು ನೀಡಿದರು.c1393615-64a6-4c7d-91a1-6b18a89da6c9

ಎ.8ರಂದು ಬುಧವಾರ  ಬಜಪೆ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಬಿರುವೆರ್ ಕುಡ್ಲ ಬಜಪೆ ಘಟಕದ ವತಿಯಿಂದ ಬಜಪೆ ವಲಯದ ಆಶಾ ಕಾರ್ಯಕರ್ತೆಯರು ಮತ್ತು ವೈದ್ಯಕೀಯ ಸಿಬ್ಬಂದಿಗಳಿಗೆ ದೈನಂದಿನ ಬಳಕೆಯ(ಅಕ್ಕಿ ಮತ್ತು ಸಾಂಬಾರ ವಸ್ತುಗಳ) ಕಿಟ್ ಗಳನ್ನು ವಿತರಿಸಲಾಯಿತು.f3e5800f-e028-4ccf-9b99-58827271a802

c3e73367-6f42-44a6-8c33-0dac8b856403ಈ ಸಂದರ್ಭದಲ್ಲಿ ಮೂಲ್ಕಿ- ಮೂಡಬಿದ್ರೆ ಕ್ಷೇತ್ರದ ಜನಪ್ರಿಯ ಶಾಸಕ  ಉಮಾನಾಥ್ ಕೋಟ್ಯಾನ್, ಬಜಪೆ ಗ್ರಾಮ ಪಂಚಾಯತ್ ಸದಸ್ಯ  ಲೋಕೆಶ್ ಪೂಜಾರಿ ಬಜಪೆ, ದುರ್ಗಾಪ್ರಸಾದ್ ಮಡಿವಾಲ, ಬಿರುವೆರ್ ಕುಡ್ಲ ಬಜಪೆ ಘಟಕದ ಅಧ್ಯಕ್ಷ  ಪ್ರಶಾಂತ್ ಕುಮಾರ್ ಕೆಂಜಾರು ಕಾನ, ಗೌರವಾಧ್ಯಕ್ಷ   ಶರತ್ ಪೂಜಾರಿ, ಬಿರುವೆರ್ ಕುಡ್ಲ (ರಿ) ಕೇಂದ್ರ ಸಮಿತಿ ಮಂಗಳೂರು ಇದರ ಸಂಘಟನಾ ಅಧ್ಯಕ್ಷ   ವಕೀಲ ಚಂದ್ರಶೇಖರ್ ಅಮೀನ್ , ಕಾರ್ಯಾಧ್ಯ   ಗಣೇಶ್‌ ಪೂಜಾರಿ ಬಜಪೆ, ಕೋಶಾಧಿಕಾರಿ ರಾಕೇಶ್‌ ಅಂಚನ್‌ ಬಜಪೆ, ಸಂಘಟನಾ‌ ಕಾರ್ಯದರ್ಶಿ ಶಿವಾನಂದ್ ಕಟೀಲು, ವಲಯ ಸಂಚಾಲಕರುಗಳಾದ ರಮಾನಂದ ಪೂಜಾರಿ ಕಟೀಲು ಮತ್ತು ಜೀವನ್ ಕರ್ಕೇರ ಕೆಂಜಾರು ಕಾನ, ಕಿರಣ್ ಪೂಜಾರಿ ದುರ್ಗಾ ನಗರ ಎಕ್ಕಾರು, ಶಶಿಧರ್ ಕೆಂಜಾರು‌ ಕಾನ, ಸಂಪತ್ ಕೆಂಜಾರು‌ ಕಾನ, ಹಾಗೂ ಘಟಕದ ಸದಸ್ಯರು ಉಪಸ್ಥಿತರಿದ್ದರು.

Leave a comment

XHTML: You can use these html tags: <a href="" title=""> <abbr title=""> <acronym title=""> <b> <blockquote cite=""> <cite> <code> <del datetime=""> <em> <i> <q cite=""> <strike> <strong>

Get Immediate Updates .. Like us on Facebook…

Visitors Count Visitor Counter