Published On: Wed, Apr 1st, 2020

ಮುಂಬಯಿ: ದೈನಂದಿನವಾಗಿ ಸಾವಿರಾರು ಜನತೆಗೆ ಆಹಾರ ಕನ್ನಡಿಗ ಬಿ.ಆರ್ ಶೆಟ್ಟಿ

ಮುಂಬಯಿ: ವಿಶ್ವದಾದ್ಯಂತ ತಾಂಡವವಾಡುತ್ತಿರುವ ಕೊರೋನಾ ಮಹಾ ಮಾರಿಯಿಂದ ಸ್ತಂಭಗೊಂಡಿರುವ ರಾಷ್ಟ್ರದ ಆರ್ಥಿಕ ರಾಜಧಾನಿ ಮುಂಬಯಿನಲ್ಲಿಉಪನಗರ ಅಂಧೇರಿಯಲ್ಲಿನ ಹೆಸರಾಂತ ಬಿ.ಆರ್ ಹೊಟೇಲು ಸಮೂಹವು ದೈನಂದಿನವಾಗಿ ಲಕ್ಷಾಂತರ ಮೊತ್ತದ ಆಹಾರ ಪೊಟ್ಟಣಗಳ ಉಪಚರಗೈದು ಸೇವೆಯಲ್ಲಿ ತೊಡಗಿಸಿದೆ.B R Shetty Help A3

ಬೃಹನ್ಮುಂಬಯಲ್ಲಿನ ಹೆಸರಾಂತ ಉದ್ಯಮಿ, ಕೊಡುಗೈದಾನಿ, ಸಮಾಜ ಸೇವಕ, ಉಡುಪಿ ಮೂಲದ ಮುಂಬಯಿವಾಸಿ ಬಿ.ಆರ್ ರೆಸ್ಟೋರೆಂಟ್ಸ್ ಪ್ರೈವೇಟ್ ಲಿಮಿಟೆಡ್‍ನಆಡಳಿತ ನಿರ್ದೇಶಕ ಬಿ.ಆರ್ ಶೆಟ್ಟಿ ಮತ್ತು ಸೇವಾಕರ್ತರು ಆಹಾರ ಸಿದ್ಧಪಡಿಸಿ ಜನತೆಗೆ ಪೂರೈಕೆ ಮಾಡುತ್ತಿರುವ ಸುದ್ದಿ ತಿಳಿದು ಸಾಮ್ನಾ ಮರಾಠಿ ದೈನಿಕದ ಪ್ರಧಾನ ಸಂಪಾದಕ, ಶಿವಸೇನಾ ಪಕ್ಷದ ಧುರೀಣ, ಲೋಕಸಭಾಸದಸ್ಯ ಸಂಜಯ್ ರಾವುತ್ ಅವರು ಅಂಧೇರಿ ಪಶ್ಚಿಮದ ಇರ್ಲಾ ಇಲ್ಲಿನ ಶ್ರೀ ಅದಮಾರು ಮಠದಲ್ಲಿ ಮತ್ತು ಚೆಂಬೂರು ಇಲ್ಲಿನ ಗುರುಕೃಪಾ ಸಭಾಗೃಹದಲ್ಲಿನ ತಲ್ವಾರ್ ಕ್ಯಾಟರರ್ಸ್ ಸಿದ್ಧ ಪಡಿಸಲಾಗುತ್ತಿರುವ ಆಹಾರದ ಬಗ್ಗೆ ಮಾಹಿತಿ ಪಡೆದು ಬಿ.ಆರ್ ಶೆಟ್ಟಿಅವರ ಅನುಪಮ ಸೇವೆಗಾಗಿ ಶ್ಲಾಘನೆ ವ್ಯಕ್ತಪಡಿಸಿದರು.B R Shetty Help B2 (1)

ಸಾಂತಾಕ್ರೂಜ್ ಪೂರ್ವದಲ್ಲಿನ ಪೇಜಾವರ ಮಠ, ಅಂಧೇರಿ ಪಶ್ಚಿಮದ ಇರ್ಲಾ ಇಲ್ಲಿನಶ್ರೀ ಅದಮಾರು ಮಠ, ಎರ್ಮಾಳ್ ಹರೀಶ್ ಶೆಟ್ಟಿ(ಬೋರಿವಿಲಿ), ಎನ್.ಬಿ ಶೆಟ್ಟಿ (ಕ್ಲಾಸಿಕ್ ಹೊಟೇಲ್ ಮಾಟುಂಗಾ), ಸಚ್ಚು ಶೆಟ್ಟಿ(ಸುಂದರ್’ಸ್ ಹೊಟೇಲ್ ಮಧ್ಯ ರೈಲ್ವೇ, ಮಾಟುಂಗಾ), ನಿತೀಶ್ ಶೆಟ್ಟಿ (ವಿಶ್ವಮಹಲ್ ದಾದರ್ ಪೂರ್ವ),ಸುಭಾಷ್ ತಲ್ವಾರ್ (ತಲ್ವಾರ್ ಕ್ಯಾಟರರ್ಸ್) ತಮ್ಮ ಸಾರಥ್ಯದಲ್ಲಿ ಆಹಾರವನ್ನು ತಯಾರಿಸಿ ವಿತರಿಸುತ್ತಿದ್ದಾರೆ.

ಸರಕಾರ, ಬಿಎಂಸಿ,  ಪೊಲೀಸ್ ಅಧಿಕಾರಿಗಳ ಸಹಯೋಗದಿಂದ ನಿತ್ಯ ಈ ವ್ಯವಸ್ಥೆ ಮಾಡಿ ಅನಾಥಾಶ್ರಮ, ಅಲ್ಲಲ್ಲಿ ಸಿಕ್ಕಾಕಿ ಕೊಂಡಿರುವ ಹೊರ ರಾಜ್ಯಗಳ ಜನತೆಗೆ, ರಸ್ತೆ ಪಕ್ಕಗಳಲ್ಲಿ ನೆಲೆಬಿಟ್ಟಿರುವ ಭಿಕ್ಷುಕರು, ಅನಾಥವ್ಯಕ್ತಿಗಳು, ವಸತಿಗೃಹಗಳಿಗೆ ಆಹಾರ ಪೊಟ್ಟಣಗಳನ್ನು ಆಯ್ದ ಸೇವಕರುಗಳಿಂದ ವಿತರಿಸುತ್ತಿದ್ದಾರೆ. ದೈವಕ್ಯ ಪೇಜಾವರಶ್ರೀ ವಿಶ್ವೇಶತೀರ್ಥ ಶ್ರೀಪಾದರ ಅನ್ನದಾಸೋಹದ ಕನಸಿನಂತೆ, ಪೇಜಾವರ ಮಠಾಧೀಶ ಶ್ರೀ ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿ ಇವರ ಅನುಗ್ರಹ ಮತ್ತು ಮಾರ್ಗದರ್ಶನದಂತೆ ಸಾಂತಾಕ್ರೂಜ್ ಪೂರ್ವದಲ್ಲಿನ
ಪ್ರಭಾತ್ ಕಾಲೋನಿಯಲ್ಲಿರುವ ಉಡುಪಿ ಶ್ರೀ ಪೇಜಾವರ ಮಠದ ಮುಂಬಯಿ ಶಾಖೆಯಲ್ಲೂ ಪೇಜಾವರ ಮಠದ ವ್ಯವಸ್ಥಾಪಕರಾದ ಡಾ| ರಾಮದಾಸ ಉಪಾಧ್ಯಾಯ ರೆಂಜಾಳ, ಪ್ರಕಾಶ್ ಆಚಾರ್ಯ ರಾಮಕುಂಜ, ಶ್ರೀಹರಿಭಟ್ ಪುತ್ತಿಗೆ,ನಿರಂಜನ ಜೆ.ಗೋಗಟೆ ಇವರಮುಂದಾಳುತ್ವದಲ್ಲಿನಿತ್ಯ 1,000 ಆಹಾರ ಪೊಟ್ಟಣಗಳವ್ಯವಸ್ಥೆ ಮಾಡಲಾಗುತ್ತಿದೆ.

ಉಡುಪಿ ಶ್ರೀ ಅದಮಾರು ಮಠದ ಶ್ರೀ ಅದಮಾರು ಮಠದ ಮಠಾಧೀಶ 108 ಶ್ರೀ ವಿಶ್ವಪ್ರಿಯ ತೀರ್ಥ ಶ್ರೀಪಾದರ ಮತ್ತು ಪರ್ಯಯ ಪಟ್ಟಾಧೀಶ ಶ್ರೀ ಈಶ ಪ್ರಿಯತೀರ್ಥ ಶ್ರೀಪಾದರ ಆಶೀರ್ವಚನ, ಆದೇಶದಂತೆ ಶ್ರೀ ಅದಮಾರು ಮಠ ಮುಂಬಯಿ ಶಾಖೆಯ ದಿವಾನ ಲಕ್ಷ್ಮೀನಾರಾಯಣ ಮುಚ್ಚಿಂತ್ತಾಯ, ವ್ಯವಸ್ಥಾಪಕ ಪಡುಬಿದ್ರಿ ವಿ.ರಾಜೇಶ್ ರಾವ್ ಸಹಕಾರದಲ್ಲಿ ವೆಂಕಟೇಶ್ ಭಟ್ ಕಟಪಾಡಿ ಮತ್ತು ಅನೂಪ್ ಶೆಟ್ಟಿ ಮುಂದಾಳುತ್ವದಲ್ಲಿನಿತ್ಯ 2,000 ಆಹಾರ ಪೊಟ್ಟಣಗಳನ್ನು ಸಿದ್ಧಪಡಿಸಲಾಗುತ್ತಿದೆ. ದೈನಂದಿನವಾಗಿ ಸುಮಾರು 3.25 ಲಕ್ಷ ಮೊತ್ತದ ಅಕ್ಕಿ, ತರಕಾರಿ, ಎಣ್ಣೆ, ದಿನಸಿ ಪದಾರ್ಥಗಳೊಂದಿಗೆ ಆಹಾರ ಸಿದ್ಧಪಡಿಸಿ ಮುಂಬಯಿನಾದ್ಯಂತದ ಅಗ್ನಿಶಾಮಕದಳಕ್ಕೆ 1,250 ಪೊಟ್ಟಣಗಳು, ರೈಲ್ವೇ  ಪೊಲೀಸ್ ತಂಡಗಳಿಗೆ 1,500 ಪೊಟ್ಟಣಗಳು, ಪಶ್ಚಿಮ ಉಪನಗರದ ಪೊಲೀಸ್ ಸಿಬ್ಬಂದಿಗಳಿಗೆ 1,500  ಪೊಟ್ಟಣಗಳು, ನವಿಮುಂಬಯಿ ಪೊಲೀಸ್ ಆಯುಕ್ತರಿಗೆ 2,500  ಪೊಟ್ಟಣಗಳು (ತಮ್ಮತಮ್ಮ ಅಧೀನದಲ್ಲಿನ ಸೇವಾಕರ್ತರಿಗೆ, ಅವಶ್ಯಕರಿಗೆವಿತರಿಸುವರು), ಭಾಂಡೂಪ್, ಕುರ್ಲಾ ಮತ್ತಿತರ ಕೊಳೆಗೇರಿ ಪ್ರದೇಶವಾಸಿಗಳಿಗೆ 1,650  ಪೊಟ್ಟಣಗಳು,ಬಿಎಂಸಿ ಸೇವಾಕರ್ತರಿಗೆ, ನೌಕರರಿಗೆ, ಆಸ್ಪತ್ರೆ ಸಿಬ್ಬಂದಿಗಳಿಗೆ 4,000 ಪೊಟ್ಟಣಗಳು ವಿತರಿಸಲಾಗುತ್ತಿದೆ. ಈ ವರೆಗೆ ದೈನಂದಿನವಾಗಿ 13,000 ಪೊಟ್ಟಣಗಳಂತೆ ಸಿದ್ಧಪಡಿಸಿ ಬಿ.ಆರ್ ಶೆಟ್ಟಿ ಅವರು ಆಪತ್ಕಾಲದಲ್ಲಿ ಮಾನವೀಯತೆ ಮೆರೆಯುತ್ತಿದ್ದಾರೆ. ಈ ಸಂದರ್ಭದಲ್ಲಿ ಡಾ| ಚಿರಂಜೀವಿ ಆರ್.ಶೆಟ್ಟಿ ಮತ್ತಿತರರು ಉಪಸ್ಥಿತರಿದ್ದರು.

ಚಿತ್ರ ವರದಿ : ರೋನ್ಸ್ ಬಂಟ್ವಾಳ್

Leave a comment

XHTML: You can use these html tags: <a href="" title=""> <abbr title=""> <acronym title=""> <b> <blockquote cite=""> <cite> <code> <del datetime=""> <em> <i> <q cite=""> <strike> <strong>

Get Immediate Updates .. Like us on Facebook…

Visitors Count Visitor Counter