Published On: Thu, Mar 26th, 2020

ಪತ್ರಕರ್ತರಿಗೆ ನೆರವಾದ ಪತ್ರಿಕಾಭವನ ಟ್ರಸ್ಟ್

ಮಂಗಳೂರು: ಕೊರೊನಾ ಮಾಹಾಮಾರಿಯ ಎಫೆಕ್ಟ್ ಎಲ್ಲೆಡೆ ತಟ್ಟಿದ್ದು, ಈ ಬಗ್ಗೆ  ಸಮಾಜಕ್ಕೆ ಜನಜಾಗೃತಿ ಮೂಡಿಸುವ ಕೆಲಸವನ್ನು ಪತ್ರಕರ್ತರು ಮಾಡುತ್ತಿದ್ದಾರೆ. ತಮ್ಮ ಬಿಡುವಿಲ್ಲದ ಕೆಲಸದಲ್ಲಿರುವ ಪತ್ರಕರ್ತರಿಗೆ ನೆರವಾಗುವ ದೃಷ್ಟಿಯಿಂದ ಪತ್ರಿಕಾ ಭವನ ಟ್ರಸ್ಟ್‌ನಿಂದ ಪ್ರೆಸ್‌ಕ್ಲಬ್ ಮತ್ತು ದ.ಕ. ಜಿಲ್ಲಾ ಪತ್ರಕರ್ತರ ಸಂಘದ ಸಹಭಾಗಿತ್ವದಲ್ಲಿ ಉಚಿತ ಅಕ್ಕಿ, ಗೋಧಿ ಹಾಗೂ ಮಾಸ್ಕ್ ವಿತರಣೆ ನಡೆಯಿತು.IMG-20200326-WA0035
ಪತ್ರಿಕಾ ಭವನ ಟ್ರಸ್ಟ್ ಅಧ್ಯಕ್ಷ ಆನಂದ್ ಶೆಟ್ಟಿವರು ಅಕ್ಕಿ ವಿತರಣೆ ಮಾಡಿ ಮಾತನಾಡಿ, ಪತ್ರಕರ್ತರು ಯಾವತ್ತೂ ಕ್ರಿಯಾಶೀಲರಾಗಿ, ಸದಾ ಚಟುವಟಿಕೆಯಲ್ಲಿರುವವರು. ಯಾವುದೇ ದುರ್ಘಟನೆ, ಸಮಾಜ ಘಾತುಕ ಘಟನೆ, ಸಾಂಕ್ರಾಮಿಕ ರೋಗಗಳು ಬಂದಾಗ ಪತ್ರಕರ್ತರೇ ನಿರಂತರ ಸುದ್ದಿಯ ಬೆನ್ನುಬೀಳುವವರು. ಕೊರೊನಾ ಮಾಹಾಮಾರಿ ಎಲ್ಲೆಡೆ ಪಸರಿಸುವ ಪ್ರಸ್ತುತ ಕಾಲಘಟ್ಟದಲ್ಲಿ ಕರ್ತವ್ಯವನ್ನೇ ಧ್ಯೇಯವಾಗಿಸಿಕೊಂಡು ದುಡಿಯುವ ಪತ್ರಕರ್ತರಿಗೆ ತಮ್ಮ ಮನೆಯ ಬಗ್ಗೆಯೂ ಚಿಂತೆಯಿರುವುದಿಲ್ಲ. ಕೊರೊನಾ ಮಾಹಾಮಾರಿ ಈಗ ಎಲ್ಲೆಡೆ ವ್ಯಾಪಿಸುತ್ತಿದ್ದು ಆ ಬಗ್ಗೆ ಸಮಾಜಕ್ಕೆ ಜಾಗೃತಿ ಮೂಡಿಸುವ ಕೆಲಸವನ್ನು ಪತ್ರಕರ್ತರು ಮಾಡುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಪತ್ರಕರ್ತರ ಸಂಘದ ಸದಸ್ಯರಿಗೆ ಅಕ್ಕಿ, ಗೋಧಿ, ಮಾಸ್ಕ್ ವಿತರಣೆ ಮಾಡಲು ಉದ್ದೇಶಿಸಿ ನೆರವು ನೀಡಲಾಗುತ್ತಿದೆ ಎಂದರು.
ದಕ್ಷಿಣ ಕನ್ನಡ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಶ್ರೀನಿವಾಸ್ ನಾಯಕ್ ಇಂದಾಜೆ ಮಾತನಾಡಿ ಪತ್ರಕರ್ತ ಸದಾ ಸುದ್ದಿಯ ಬೆನ್ನತ್ತಿ ಹೋಗುವ ಪತ್ರಕರ್ತರಲ್ಲಿ  ಮಾನಸಿಕ ಸ್ಥೈರ್ಯ ತುಂಬಿಸುವ ನಿಟ್ಟಿನಲ್ಲಿ ಅಕ್ಕಿ, ಗೋಧಿ, ಮಾಸ್ಕ್ ವಿತರಣೆ ಮಾಡಲಾಗಿದೆ. ಈ ಯೋಜನೆ ರೂಪಿಸಿದ ಪತ್ರಿಕಾ ಭವನ ಟ್ರಸ್ಟ್‌ಗೆ ಮತ್ತು ಪ್ರೆಸ್‌ಕ್ಲಬ್‌ಗೆ ಸಂಘದಿಂದ ಧನ್ಯವಾದಗಳು ಎಂದರು.
ಪ್ರೆಸ್‌ಕ್ಲಬ್ ಅಧ್ಯಕ್ಷ ಅನ್ನು ಮಂಗಳೂರು ಮಾತನಾಡಿ, ಕೊರೊನಾ ಸುದ್ದಿಯ ಬೆನ್ನತ್ತಿ ಹೋಗುವ ಪತ್ರಕರ್ತರು ತಮ್ಮ ಆರೋಗ್ಯ, ಕುಟುಂಬದ ಬಗ್ಗೆ ಎಚ್ಚರವಹಿಸಬೇಕು. ಕೊರೊನಾ ನಿಯಂತ್ರಣ ತರಬೇಕಾದರೆ ಜಾಗೃತಿಯೇ ಪ್ರಧಾನವಾಗಿದ್ದು, ಕೆಲಸದ ಜತೆ ಎಚ್ಚರಿಕೆ ಕ್ರಮಗಳನ್ನು ಅನುಸರಿಸಿ ಎಂದರು.
ದಕ್ಷಿಣ ಕನ್ನಡ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ 280 ಸದಸ್ಯರಿಗೆ ತಲಾ 25ಕೆ.ಜಿ. ಅಕ್ಕಿ, 5 ಕೆ.ಜಿ. ಗೋಧಿ, ಮಾಸ್ಕ್‌ನ್ನು ಗುರುವಾರ ವಿತರಿಸಲಾಯಿತು. ಬಂಟ್ವಾಳ ಪ್ರೆಸ್ ಕ್ಲಬ್ ನಲ್ಲು ಬಂಟ್ವಾಳ ಮತ್ತು ವಿಟ್ಲದ ಒಟ್ವು 18 ಮಂದಿ ವರದಿಗಾರರಿಗೆ ತಲಾ 25ಕೆ.ಜಿ. ಅಕ್ಕಿ, 5 ಕೆ.ಜಿ. ಗೋಧಿ, ಮಾಸ್ಕ್‌ನ್ನು  ವಿತರಿಸಲಾಯಿತು.

Leave a comment

XHTML: You can use these html tags: <a href="" title=""> <abbr title=""> <acronym title=""> <b> <blockquote cite=""> <cite> <code> <del datetime=""> <em> <i> <q cite=""> <strike> <strong>

Get Immediate Updates .. Like us on Facebook…

Visitors Count Visitor Counter