Published On: Thu, Mar 26th, 2020

ಯುವತಿಯರನ್ನು ಸೇಫ್ ಆಗಿ ಮನೆ ತಲುಪಿಸಿದ ಬಂಟ್ವಾಳ ಶಾಸಕರ ವಿಶೇಷ ತಂಡ

ಬಂಟ್ವಾಳ: ಕರೋನಾ ವೈರಸ್ ತಡೆಗಟ್ಟುವ ನಿಟ್ಟಿನಲ್ಲಿ  ದೇಶದಾದ್ಯಂತ ಜನತಾ ಕಪ್ಯೂ೯ ವಿಧಿಸಿರುವ ಹಿನ್ನಲೆಯಲ್ಲಿ ಊರಿಗೆ ಬರಲು ಸಾಧ್ಯವಾಗದೆ ಚಡಪಡಿಸುತ್ತಿದ್ದ ಇಬ್ಬರು ಯುವತಿಯರನ್ನು ಸೇಫ್ ಆಗಿ ಮೈಸೂರಿನಿಂದ ಕರೆತರುವಲ್ಲಿ ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ಉಳಿಪಾಡಿ ಅವರ ನೇತೃತ್ವದಲ್ಲಿ ರಚನೆಯಾದ  ವಿಶೇಷ ತಂಡದ ಸದಸ್ಯರು ಯಶಸ್ವಿಯಾಗಿದ್ದಾರೆ.ರಾಯರಪಾದೆ ಮತ್ತು ಪುತ್ತೂರುಪರಿಸರದ ಯುವತಿಯರಿಬ್ಬರು ಉದ್ಯೋಗದ ನಿಮಿತ್ತ ಮೈಸೂರಲ್ಲಿದ್ದು, ಜನತಾ ಕಪ್ಯೂ೯ ನಿಂದಾಗಿ ವಾಹನ ವ್ಯವಸ್ಥೆಯಿಲ್ಲದೆ  ಈ ಯುವತಿಯರು ಪರದಾಡುತ್ತಿದ್ದರೆ, ಮತ್ತೊಂದು ಕಡೆಯಿಂದ ಅವರಿದ್ದ ಪಿ. ಜಿ.ಯವರಿಂದಲೂ   ರೂಂ ಖಾಲಿ ಮಾಡುವಂತೆ ಒತ್ತಡ ಹಾಕುತ್ತಿದ್ದರಿಂದ ಆಲ್ಲಿನ ಅತಂತ್ರ ಪರಿಸ್ಥಿತಿಯನ್ನು ಹೆತ್ತವರಿಗೆ ಕರೆ ಮಾಡಿ   ತಿಳಿಸಿದ್ದರು.

IMG-20200326-WA0048

ತಕ್ಷಣ ಯುವತಿಯರ ಪೋಷಕರು ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ರವರು ತಮ್ಮ ಕಚೇರಿಯಲ್ಲಿ ರಚಿಸಿದ್ದ ಸಹಾಯವಾಣಿ ಗೆ ಕರೆಮಾಡಿ ಕ್ಷೇತ್ರ ಬಿಜೆಪಿ ಅದ್ಯಕ್ಷ ದೇವಪ್ಪ ಪೂಜಾರಿ  ಇವರಲ್ಲಿ ಹೆಣ್ಣು ಮಕ್ಕಳ ಅಸಹಾಯಕ ಸ್ಥಿತಿಯನ್ನು ವಿವರಿಸಿದರು. ಅವರು ತಕ್ಷಣ ಕ್ಷೇತ್ರ ಬಿಜೆಪಿ ಉಪಾದ್ಯಕ್ಷ ವಜ್ರನಾಥ ಕಲ್ಲಡ್ಕ ಇವರನ್ನು ಸಂಪರ್ಕಿಸಿ ಈ ಬಗ್ಗೆ ಮಾಹಿತಿ ನೀಡಿದರು. ಈ ಸಂದರ್ಭ ಅವರ ಪತ್ರಕರ್ತ ರಾಜ ಬಂಟ್ವಾಳ ಜೊತೆ ಮೈಸೂರಿಗೆ ಆಗಮಿಸಿ ವಾಪಾಸಾಗುತಿದ್ದರು.

ಸುಮಾರು 50 ಕಿ.ಮೀ. ದೂರವನ್ನು ಕ್ರಮಿಸಿದ್ದರು.  ಶಾಸಕರ ಕಚೇರಿಯ ಸಹಾಯವಾಣಿ ಕರೆ ಬರುತ್ತಿದ್ದಂತೆ   ಯುವತಿಯರನ್ನು ದೂರವಾಣಿ ಮೂಲಕ ಸಂಪರ್ಕಿಸಿದ ವಜ್ರನಾಥ ಕಲ್ಲಡ್ಕರವರು  ಆರ್ಧ ತಾಸಿನೊಳಗೆ ರೂಂನತ್ತ ಬರುವುದಾಗಿ ತಿಳಿಸಿ ರೆಡಿಯಾಗಿರುವಂತೆ ಸೂಚಿಸಿದರು. ತಮ್ಮ ವಾಹನವನ್ನು ಅಲ್ಲಿಂದಲೇ ತಿರುಗಿಸಿ ಮೈಸೂರಿನತ್ತ ಹೊರಟರು‌ ಯುವತಿಯರು ವಾಸ್ತವ್ಯವಿದ್ದ ವಿಳಾಸ ಪತ್ತೆ ಹಚ್ಚಿ ಅವರನ್ನು ಸೇಫ್ ಆಗಿ   ಮನೆಯವರೆಗೆ ತಲುಪಿಸಿದರು.

  ಶಾಸಕರ ಸಹಾಯವಾಣಿ ಹಾಗೆಯೇ ಮನೆ ತಲುಪಿಸುವಲ್ಲಿ ಸಹಕರಿಸಿದ ವಿಶೇಷ ತಂಡಕ್ಕೆ ಯುವತಿಯರು ಕೃತಜ್ಞತೆ ಸಲ್ಲಿಸಿದ್ದಾರೆ.   ಕಳೆದ ಮೂರು ದಿನಗಳಿಂದ ಬಿ.ಸಿ.ರೋಡಿನಲ್ಲಿರುವ ಶಾಸಕ ರಾಜೇಶ್ ನಾಯ್ಕ್ ಅವರ ಕಚೇರಿಯಲ್ಲಿ  ವಿಶೇಷ ನೆರವು ತಂಡ 24 ತಾಸುಗಳ ಕಾಲ ಕಾರ್ಯನಿರ್ವಹಿಸುತ್ತಿದ್ದು,ಕರೆ ಮಾಡಿದವರಿಗೆ    ತುರ್ತು ನೆರವನ್ನು ಒದಗಿಸಲಾಗುತ್ತಿದೆ.

Leave a comment

XHTML: You can use these html tags: <a href="" title=""> <abbr title=""> <acronym title=""> <b> <blockquote cite=""> <cite> <code> <del datetime=""> <em> <i> <q cite=""> <strike> <strong>

Get Immediate Updates .. Like us on Facebook…

Visitors Count Visitor Counter