Published On: Thu, Mar 26th, 2020

ತಹಶೀಲ್ದಾರ್ ಕಚೇರಿಯಲ್ಲಿ ಕಂಟ್ರೋಲ್ ರೂಂ ಒಪನ್

ಬಂಟ್ವಾಳ: ಜಿಲ್ಲಾಧಿಕಾರಿಯವರ ಸೂಚನೆಯಂತೆ ಕೋವಿಡ್-19 ನ ಕುರಿತು ಹೆಚ್ಚುವರಿಯಾಗಿ ತಾಲೂಕು ಆಡಳಿತ ವತಿಯಿಂದ ತಹಶೀಲ್ಧಾರ್ ಬಂಟ್ವಾಳ ಅವರ ಕಚೇರಿಯಲ್ಲಿ ಕಂಟ್ರೋಲ್ ರೂಂ ತೆರೆಯಲಾಗಿದೆ ದೂರವಾಣಿ ಸಂಖ್ಯೆ 08255- 232120 ಕ್ಕೆ ಸಾರ್ವಜನಿಕರು ಕರೆ ಮಾಡಬಹುದಾಗಿದ್ದು, ಮಾ. 31ರ ಮಧ್ಯ ರಾತ್ರಿಯವರೆಗೆ 24 ಗಂಟೆಯು ನಿರಂತರ ಸೇವೆಯಲ್ಲಿ ತೊಡಗಿಸಲಾಗಿದೆ.IMG-20200325-WA0026

ಜಿಲ್ಲಾ ವಿಪತ್ತು ನಿರ್ವಹಣಾ ಘಟಕ ಕಂಟ್ರೋಲ್ ರೂಂ. ಟೋಲ್ ಫ್ರೀ ನಂಬರ್ 1077,  ಉಚಿತ ಅರೋಗ್ಯ ಸಹಾಯವಾಣಿ 104 ಮತ್ತು 080-22208541 ಅಥವಾ ಕೇಂದ್ರ ಅರೋಗ್ಯ ಸಚಿವಾಲಯದ ಉಚಿತ ಅರೋಗ್ಯ ಸಹಾಯವಾಣಿ 9111-ಲ23978046 ಅಥವಾ ಇಮೇಲ್ – ncov2019@gmail.com ಸಂಪರ್ಕಿಸಬಹುದು.  ಕೊರೋನಾ ಸೋಂಕು ಸಂಬಂದಿಸಿದ ರೋಗ ಲಕ್ಷಣಗಳು ಕಂಡು ಬಂದಲ್ಲಿ ಸಾರ್ವಜನಿಕರು ಮೇಲಿನ ದೂರವಾಣಿ ಕೇಂದ್ರಗಳನ್ನು ಸಂಪರ್ಕಿಸಿದರೆ ಆ ತಕ್ಷಣ ಸೇವೆಗೆ ವ್ಯವಸ್ಥೆಯನ್ನು ತಾಲ್ಲೂಕು ಆಡಳಿತ ವತಿಯಿಂದ ಕ್ರಮ ಕೈಗೊಳ್ಳಲಾಗುವುದು ಎಂದು ತಹಶೀಲ್ಧಾರ್ ತಿಳಿಸಿದ್ದಾರೆ. ಈ ನಡುವೆ ತಹಶೀಲ್ದಾರ್ ರಶ್ಮೀ ಹಾಗೂ ಆರೋಗ್ಯಾಧಿಕಾರಿ ಡಾ.ದೀಪಾ ಪ್ರಭು ಅವರ ಉಪಸ್ಥಿತಿಯಲ್ಲಿ ತಾಲೂಕು ಮಟ್ಟದ ಅಧಿಕಾರಿಗಳ ಸಭೆ ನಡೆಸಿ ಮುನ್ನಚ್ಚರಿಕಾ ಕ್ರಮಗಳ ಬಗ್ಗೆ ಮಾಹಿತಿ ನೀಡಿದರು.

Leave a comment

XHTML: You can use these html tags: <a href="" title=""> <abbr title=""> <acronym title=""> <b> <blockquote cite=""> <cite> <code> <del datetime=""> <em> <i> <q cite=""> <strike> <strong>

Get Immediate Updates .. Like us on Facebook…

Visitors Count Visitor Counter