Published On: Sun, Mar 22nd, 2020

ಕರೋನಾ ವೈರಸ್ ತಡೆಗಟ್ಟುವ ನಿಟ್ಟಿನಲ್ಲಿ ಬಂಟ್ವಾಳದಲ್ಲು ಸ್ತಬ್ದ

ಬಂಟ್ವಾಳ:ಜಗತ್ತಿನಲ್ಲಿ ನಿದ್ದೆಗೆಡಿಸಿರುವ  ಕರೋನಾ ವೈರಸ್ ತಡೆಗಟ್ಟುವ ನಿಟ್ಟಿನಲ್ಲಿ  ಭಾರತದ ಪ್ರಧಾನಿ ನರೇಂದ್ರ ಮೋದಿ ಯವರು ನೀಡಿದ ಜನತಾಕರ್ಪ್ಯೂ ಕರೆಗೆ ಜನತೆ ಸ್ಪಂದಿಸಿರುವುದರಿಂದ ಭಾನುವಾರ ಬಂಟ್ವಾಳ ತಾಲೂಕಿನಲ್ಲಿಯು ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದ್ದು, ಎಲ್ಲಾ ಚಟುವಟಿಕೆಗಳು  ಸಂಪೂರ್ಣ ಸ್ತಬ್ದವಾಗಿತ್ತು.ಪ್ರಧಾನಿಯವರ ಕರೆಯನ್ನು ಜನತಾ ಕಪ್ಯೂ೯ ಕರೆಯನ್ನು ಸ್ವೀಕರಿಸಿದ ಜನತೆ ಮನೆಯಿಂದ ಹೊರಬಾರದೆ ಕರೋನಾ ಜಾಗೃತಿಗಾಗಿ ಬೆಂಬಲಿಸಿದರು.IMG_20200322_181305

ಸದಾ ಬಿಝಿಯಾಗಿರುತ್ತಿದ್ದ ಪ್ರಮುಖ ನಗರಗಳಾದ ಬಿ.ಸಿ.ರೋಡು, ಬಂಟ್ವಾಳ,ಕಲ್ಲಡ್ಕ,ಮೆಲ್ಕಾರ್, ಸಿದ್ದಕಟ್ಟೆ ,ವಾಮದಪದವು,ಪುಂಜಾಲಕಟ್ಟೆ ಪೇಟೆಯಲ್ಲಿ ಜನಸಂಚಾರವಿಲ್ಲದೆ  ಸೊರಗಿತ್ತು.ಮುಂಜಾನೆಯೇ ರಸ್ತೆಗಿಳಿಯುವ ಅಟೋ ರಿಕ್ಷಾಗಳು, ಖಾಸಗಿ,ಸರ್ವಿಸ್ ,ಸರಕಾರಿ ಬಸ್ ಗಳ್ಯಾವುದು ರಸ್ತೆಗಿಳಿಯಲಿಲ್ಲ, ಅಂಗಡಿ ಮುಂಗಟ್ಟುಗಳು,ಹೊಟೇಲ್ ಗಳು    ಸ್ವಯಂಪ್ರೇರಿತವಾಗಿ ಬಂದ್ ಮಾಡಿ ಪ್ರತಿಯೊಬ್ಬರು ಮನೆಯಲ್ಲಿದ್ದು ಮೋದಿಯವರ ಜನತಾಕರ್ಪ್ಯೂಗೆ ಬೆಂಬಲಿಸಿದರು. ಇದೇ ಮೊದಲ ಬಾರಿಗೆ ಪೊಲೀಸ್ ಬಂದೋಬಸ್ತ್ ಇಲ್ಲದೆ ಬಂದ್ ಯಶಸ್ವಿಯಾಗಿದ್ದು, ಬಲವಂತದಿಂದ ಬಂದ್ ನಡೆಸುವುದಾಗಲೀ ಕಂಡಬರಲಿಲ್ಲ, ಪ್ರತಿನಿತ್ಯ ಗಿಜಿಗುಡುತ್ತಿದ್ದ ಬಿ.ಸಿ.ರೋಡ್ ಬಸ್ ನಿಲ್ದಾಣ,ಮೆಲ್ಕಾರ್ ,ಕಲ್ಲಡ್ಕ,ಬಂಟ್ವಾಳ,ಸಿದ್ದಕಟ್ಟೆ,ಪುಂಜಾಲಕಟ್ಟೆ ಪೇಟೆಚ ಜನ,ವಾಹನ ಸಂಚಾರವಿಲ್ಲದೇ  ಬಿಕೋ ಅನ್ನುತ್ತಿತ್ತು.IMG-20200322-WA0095

ಕೆಲವೊಮ್ಮೆಸಂಘಟನೆಗಳು ಕರೆಕೊಡುವ ಬಂದ್ ಗಿಂತ ಈ ಬಂದ್ ವಿಭಿನ್ನವಾಗಿದ್ದು, ಪ್ರತಿಯೊಬ್ಬ ಜನತೆಯು ಈ ಜನತಾಕಪ್ಯೂ೯  ಸ್ಪಂದಿಸಿದ್ದು ವಿಶೇಷವಾಗಿದೆ.  ಸ್ವಂತ ವಾಹನ ಹೊಂದಿರುವವರು,ಕೆಲ ದ್ವಿಚಕ್ರ ಸವಾರರು ಮೋಜಿಗಾಗಿ ಸುತ್ತಾಡುತ್ತಿರುವುದು ಬಿಟ್ಟರೆ ಎಲ್ಲವು ಸ್ತಬ್ದವಾಗಿತ್ತು.

ಶಾಸಕರ ಪ್ರವಾಸ ರದ್ದು:

ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ಉಳಿಪಾಡಿಯವರು ಭಾನುವಾರದ ತಮ್ಮ ಎಲ್ಲಾ ಪ್ರವಾಸವನ್ನು ರದ್ದುಗೊಳಿಸಿ,ಮನೆಯಲ್ಲಿ ಕುಟುಂಬದ ಸದಸ್ಯರೊಂದಿಗೆ ದಿನ ಕಳೆದರು.ಇಲ್ಲಿನ ಬಹುತೇಕ ಜನಪ್ರತಿನಿಧಿಗಳು ಯಾರು ಕೂಡ ಮನೆಯಿಂದ ಹೊರಗೆ ಬಂದಿರಲಿಲ್ಲ.ಎರಡು ದಿನಗಳ ಮುಂಚಿತವಾಗಿ ಜನತಾಕರ್ಪ್ಯೂ ಗೆ ಕರೆ ನೀಡಿದ್ದರ ಹಿನ್ನೆಲೆಯಲ್ಲಿ ಜನರು ಒಂದು ವಾರಕ್ಕೆ  ಬೇಕಾಗುವಷ್ಟು ಎಲ್ಲಾ ಅಗತ್ಯ ವಸ್ತುಗಳನ್ನು ಶನಿವಾರ ರಾತ್ರಿ  ಖರೀದಿಸುವ ಭರಾಟೆ ಕಂಡು ಬಂದಿತ್ತು.

 ಕೆಲ ಖಾಸಗಿ ಹಾಗೂ ಸರಕಾರಿ ಆಸ್ಪತ್ರೆಗಳೂ ಸೇವೆಗೆ ಲಭ್ಯವಿದ್ದು,ಅಗತ್ಯ ಸೇವೆ ಹೊರತುಪಡಿಸಿದರೆ,  ಬೇರೆಲ್ಲಾ ರೀತಿಯ ಸೇವೆಗಳೂ ಸಂಪೂರ್ಣ ಬಂದ್ ಆಗಿತ್ತು .ಭಾನುವಾರ ಬಿ.ಸಿ.ರೋಡಿನಲ್ಲಿ ಬೀದಿ ಬದಿ ವ್ಯಾಪಾರಿಗಳ ವ್ಯಾಪಾರ, ವಹಿವಾಟು ನಡೆಸಲಿಲ್ಲ. ಬೆಳಗ್ಗೆಯೇ ಹಾಲು, ಪತ್ರಿಕಾ ವಿತರಕರು ಸುಮಾರು ಆರು ಗಂಟೆ ಒಳಗೇ ಕರ್ತವ್ಯ ಮುಗಿಸಿದ್ದು, ಜನತಾ ಕರ್ಫ್ಯೂಗೆ ಬೆಂಬಲ ಸೂಚಿಸಿದರು. ಬಂಟ್ವಾಳದಲ್ಲಿ ಮಧ್ಯಾಹ್ನದವರೆಗೆ ಮೆಡಿಕಲ್ ಶಾಪ್ ತೆರದಿದ್ದು,ಬಳಿಕ ಅದು ಮುಚ್ಚಿತ್ತು.

 ದೇವಸ್ಥಾನ ಬಂದ್ : ಬಂಟ್ವಾಳ ಶ್ರೀ ತಿರುಮಲ ವೆಂಕಟರಮಣ ದೇವಸ್ಥಾನ ಹಾಗೂ ಶ್ರೀ ಮಹಾಲಿಂಗೇಶ್ವರ ದೇವಳದಲ್ಲಿ ಬೆಳಗ್ಗಿನ ದೇವರ ಪೂಜೆ ನಡೆದು ಬಳಿಕ ದೇವಸ್ಥಾನದ ಬಾಗಿಲು ಮುಚ್ಚಲಾಗಿತ್ತು.ಮಹಾಲಿಂಗೇಶ್ವರ ದೇವಳದಲ್ಲಿ ಸಾರ್ವಜನಿಕರಿಗೆ ದೇವರದರ್ಶನಕ್ಕು ಅವಕಾಶ ಇರಲಿಲ್ಲ.ಹಾಗಯೇ ತಿರುಮಲ  ವೆಂಕಟರಮಣ ದೇವಳದಲ್ಲಿ ದೇವರದರ್ಶನಕ್ಕೆ ಮಾತ್ರ ಅವಕಾಶ ಕಲ್ಪಿಸಿದ್ದು,ಉಳಿದಂತೆ ಎಲ್ಲಾ ಸೇವೆಯನ್ನು ರದ್ದುಗೊಳಿಸಲಾಗಿದೆ ಎಂದು ದೇವಳದ ಪ್ರಕಟಣೆ ತಿಳಿಸಿದೆ.

IMG_20200322_113148
ನಡೆಯದ ದಿವ್ಯಬಲಿಪೂಜೆ:
ಬಂಟ್ವಾಳ ತಾಲೂಕಿನ ಎಲ್ಲ ಚರ್ಚ್ ಗಳಲ್ಲಿ ಪ್ರತಿ ಭಾನುವಾರ ನಡೆಯುವ ವಿಶೇಷ ಪ್ರಾರ್ಥನೆ ನಡೆಯಲಿಲ್ಲ. ಚರ್ಚ್ ಗಳ ದ್ವಾರವೇ ಬಂದ್ ಆಗಿತ್ತು. ಬಂಟ್ವಾಳ ತಾಲೂಕಿನ ಸೂರಿಕುಮೇರುವಿನಲ್ಲಿರುವ ಬೊರಿಮಾರ್ ಚರ್ಚ್ ನ 126 ವರ್ಷಗಳ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ಕೊರೊನಾ ಹಿನ್ನೆಲೆಯಲ್ಲಿ ಬಂದ್ ನಡೆಸಿದ ಕಾರಣ ದಿವ್ಯಬಲಿಪೂಜೆ ನಡೆದಿಲ್ಲ.  ಕೊರೊನಾ ವೈರಸ್ ನಿಯಂತ್ರಿಸುವ ಹಿನ್ನೆಲೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ನೀಡಿದ್ದ ಜನತಾ ಕರ್ಫ್ಯೂ ಕರೆ ಬೆಂಬಲಿಸಿ, ಮಂಗಳೂರು ಧರ್ಮಪ್ರಾಂತ್ಯದ ಧರ್ಮಾಧ್ಯಕ್ಷರಾದ  ಬಿಷಪ್ ಪೀಟರ್ ಪಾವ್ಲ್ ಸಲ್ಡಾನ್ಹಾ ಅವರ ಆದೇಶದಂತೆ ಬಾಗಿಲು ಹಾಕಲಾಗಿತ್ತು.

ಸೂರಿಕುಮೇರು ಚರ್ಚ್ ನ 126 ವರ್ಷಗಳ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ದಿವ್ಯ ಬಲಿಪೂಜೆಯನ್ನು ನಡೆಸಲಾಗಿಲ್ಲ ಎಂದು ಚರ್ಚ್ ನ ಧರ್ಮಗುರು ಫಾ.ಗ್ರೆಗರಿ ಪಿರೇರಾ ತಿಳಿಸಿದ್ದಾರೆ. ಚರ್ಚ್ ಪ್ರವೇಶ ದ್ವಾರದಲ್ಲಿರುವ ಗೇಟನ್ನು ಮುಚ್ಚುವ ಮೂಲಕ ವಂದನೀಯ ಫಾದರ್ ಗ್ರೆಗರಿ ಪಿರೇರಾ, ಚರ್ಚ್ ಪಾಲನಾ ಸಮಿತಿ ಮತ್ತು ಸಮಸ್ತ ಕ್ರೈಸ್ತ ಬಾಂಧವರು ತಮ್ಮ ಬೆಂಬಲವನ್ನು ವ್ಯಕ್ತಪಡಿಸಿದರು.

ಸೂರಿಕುಮೇರು ಬೊರಿಮಾರ್ ಚರ್ಚ್ ನ 126 ವರ್ಷದ ಇತಿಹಾಸದಲ್ಲಿ ಇದೇ  ಮೊದಲ ಬಾರಿಗೆ ದಿವ್ಯ ಬಲಿಪೂಜೆಯು ನಡೆದಿರುವುದಿಲ್ಲ, ಕೊರೊನಾ ವೈರಸ್ ವಿರುದ್ಧ ಹೋರಾಟ ನಡೆಸುತ್ತಿರುವವರನ್ನು ಅಭಿನಂದಿಸಲು ಭಾನುವಾರ ಸಂಜೆ 5 ಗಂಟೆಗೆ ಸರಿಯಾಗಿ ಚರ್ಚ್ ಗಂಟೆಯನ್ನು ಬಾರಿಸಲಾಯಿತು. ಎಂದು ಹೇಳಿರುವ ಫಾ.ಗ್ರೆಗರಿ ಪಿರೇರಾ, ಮಾರ್ಚ್ 31 ರ ತನಕ ಯಾವುದೇ ಕಾರ್ಯಕ್ರಮಗಳು, ಇತರ ಚಟುವಟಿಕೆಗಳು ಚರ್ಚ್ ಆವರಣದಲ್ಲಿ ನಡೆಯುವುದಿಲ್ಲ ಎಂದು ತಿಳಿಸಿದ್ದಾರೆ.

ಜಾಗಟೆ ಬಾರಿಸಿದರು,ಚಪ್ಪಾಳೆ ತಟ್ಟಿದರು:  ಸಂಜೆ 5 ಗಂಟೆಯಾಗುತ್ತಿದ್ದಂತೆ ಪ್ರಧಾನಿ ಮೋದಿಯವರ ಕರೆಯಂತೆ ಬಂಟ್ವಾಳದಾದ್ಯಂತ ಮನೆಮಂದಿ ರಸ್ತೆಗೆ ಬಂದು ಚಪ್ಪಾಳೆ ತಟ್ಟಿದ್ದಲ್ಲದೆ,ಜಾಗಟೆ ಬಾರಿಸಿ,ಶಂಖ ಊದಿ ಕೃತಜ್ಞತೆ ಸಲ್ಲಿಸಿದರು. ಕೈಕುಂಜೆ ಪೂರ್ವ ಬಡಾವಣೆಯಲ್ಲಿ ನಾಗರಿಕರೆಲ್ಲರೂ ಕೊರೊನಾ ವೈರಸ್ ಗೆ ಶ್ರಮಿಸಿದವರಿಗೆ ಬೆಂಬಲ ಸೂಚಕವಾಗಿ ಭಾನುವಾರ ಸಂಜೆ ಚಪ್ಪಾಳೆ ತಟ್ಟಿ ಪ್ರೋತ್ಸಾಹಿಸುವ ಮೂಲಕ ಗಮನ ಸೆಳೆದರು.

Leave a comment

XHTML: You can use these html tags: <a href="" title=""> <abbr title=""> <acronym title=""> <b> <blockquote cite=""> <cite> <code> <del datetime=""> <em> <i> <q cite=""> <strike> <strong>

Get Immediate Updates .. Like us on Facebook…

Visitors Count Visitor Counter