Published On: Fri, Mar 20th, 2020

ಮನೆಗೆ ತಾಗಿ ತಂಗುದಾಣ ನಿರ್ಮಾಣ ವಿವಾದ: ಸುಖಾಂತ್ಯ

ಬಂಟ್ವಾಳ: ತಾಲೂಕಿನ ಪಿಲಿಮೊಗರು ಗ್ರಾಮದ ವಾಮದಪದವಿನಲ್ಲಿ ಮನೆಯೊಂದಕ್ಕೆ ತಾಗಿಕೊಂಡೆ ಸ್ಥಳೀಯ ಗ್ರಾಪಂ ಬಸ್ ತಂಗುದಾಣ ನಿರ್ಮಿಸಿರುವುದು ವಿವಾದಕ್ಕೆಡೆ ಮಾಡಿದ್ದು,ಬಂಟ್ವಾಳ ತಾಪಂ ಇಒ,ಜಿಪಂ ಸದಸ್ಯರ ಸ್ಥಳೀಯ ಪ್ರಮುಖರ ಮಧ್ಯಪ್ರವೇಶದಿಂದ ವಿವಾದ ಸುಖಾಂತ್ಯಗೊಂಡಿದೆ.

14-04-10-IMG-20200320-WA0008-1068x553
ಚೆನೈತ್ತೋಡಿ ಗ್ರಾ.ಪಂ. ವ್ಯಾಪ್ತಿಯ ಪಿಲಿಮೊಗರು ಗ್ರಾಮದ ವಾಮದಪದವು ಎಂಬಲ್ಲಿ  ಈ ಹಿಂದೆ ಇದ್ದ ಸೈಕಲ್ ರಿಪೇರಿ ಅಂಗಡಿಯನ್ನು ತೆರವುಗೊಳಿಸಿದ ಗ್ರಾಪಂ ಆದೇ ಸ್ಥಳದಲ್ಲಿ ಬಸ್ ತಂಗುದಾಣವನ್ನು ನಿರ್ಮಿಸಿತ್ತು. ಈ ತಂಗುದಾಣ    ಮಹಿಳೆಯೋರ್ವರ  ಮನೆಗೆ ತಾಗಿಕೊಂಡೆ ನಿರ್ಮಿಸಿರುವುದು ವಿವಾದಕ್ಕೆಡೆ ಮಾಡಿತ್ತು. ಈ ರೀತಿ ಬಸ್ ತಂಗುದಾಣ ನಿರ್ಮಾಣದಿಂದಾಗುವ ತೊಂದರೆಯ ಬಗ್ಗೆ ಮನೆಯೊಡತಿ ಆಕ್ಷೇಪಿಸಿದ್ದಾರೆ.ಈ ಬಗ್ಗೆ ಮಾಹಿತಿ ಪಡೆದ ಜಿಪಂ ಸದಸ್ಯ ತುಂಗಪ್ಪ ಬಂಗೇರ,ಗ್ರಾ.ಪಂ.ಸದಸ್ಯ ವಿಶ್ವನಾಥ ಶೆಟ್ಟಿ, ಪ್ರಮುರಾದ ಪುರುಷೋತ್ತಮ ಶೆಟ್ಟಿ ವಾಮದಪದವು, ಯಶೋಧರ ಶೆಟ್ಟಿ, ದಿನೇಶ್ ಶೆಟ್ಟಿ ದಂಬೆದಾರ್, ಗೋಪಾಲಕೃಷ್ಣ ಚೌಟ, ತಿಮ್ಮಪ್ಪ ಪೂಜಾರಿ, ಪ್ರಭಾಕರ ಶೆಟ್ಟಿ, ಸಂತೋಷ್ ಜೈನ್, ಪ್ರತಾಪ್ ಶೆಟ್ಟಿ ಕಕ್ಕಿಬೆಟ್ಟು ಮಾದಲಾದವರು ಸ್ಥಳಕ್ಕಾಗಮಿಸಿ ಪರಿಶೀಲಿಸಿ ತಾಪಂ ಕಾರ್ಯನಿರ್ವಹಣಾಧಿಕಾರಿಯವರಿಗೂ ದೂರು ನೀಡಿದರು. ತಕ್ಷಣ ಸ್ಥಳಕ್ಕಾಗಮಿಸಿದ ಇಒ ರಾಜಣ್ಣ ಅವರು ಸ್ಥಳ ಪರಿಶೀಲಿಸಿ ಬಸ್ ತಂಗುದಾಣವನ್ನು ಮನೆಯ ಗೋಡೆಯನ್ನು ಬಿಟ್ಟು ಅನತಿ ದೂರದಲ್ಲಿ ನಿರ್ಮಿಸುವಂತೆ ಸೂಚಿಸಿದ್ದಾರೆ.ಇದರೊಂದಿಗೆ ಬಸ್ ತಂಗುದಾಣದ ವಿವಾದ ಬಗೆಹರಿದಿದೆ. ಸಾರ್ವಜನಿಕ ಉಪಯೋಗಕ್ಕೆ ತಂಗುದಾಣ:  ಪಂಚಾಯತ್ ಗೆ ಸೇರಿದ್ದ ಕಟ್ಟಡವನ್ನು ತೆರವುಗೊಳಿಸಿ ಸಾರ್ವಜನಿಕರ ಉಪಯೋಗಕ್ಕಾಗಿ ಬಸ್ ತಂಗುದಾಣವನ್ನು ನಿರ್ಮಿಸಲಾಗಿದೆ.ಈ ಹಿಂದೆ ಇಲ್ಲಿದ್ದ ಕಟ್ಟಡಕ್ಕೆ ತಾಗಿಕೊಂಡೆ ಮನೆ ನಿರ್ಮಿಸಲಾಗಿತ್ತು.ಇದೀಗ ತಾಪಂ ಕಾರ್ಯ ನಿರ್ವಹಣಾಧಿಕಾರಿಯವರ ನಿರ್ದೇಶನದಂತೆ ಬಸ್ ತಂಗುದಾಣದ ಕಬ್ಬಿಣದ ಕಂಬಗಳನ್ನು ತೆರವುಗೊಳಿಸಿ ಮುಂದಕ್ಕೆ ಸ್ಥಳಾಂತರಿಸಲಾಗುವುದು.ಹಾಗೆಯೇ ಈ ಮನೆ ಸರಕಾರಿ ಜಾಗದಲ್ಲಿಯೇ ನಿರ್ಮಿಸಲಾಗಿದ್ದು,ರೋಡ್ ಮಾರ್ಜಿನ್ ನಲ್ಲಿದೆ.ಮನೆಯವರು 94ಸಿ ಯಲ್ಲಿ ಅರ್ಜಿ ಸಲ್ಲಿಸಿರುವ ಬಗ್ಗೆ ಮಾಹಿತಿ ಇಲ್ಲ.

Leave a comment

XHTML: You can use these html tags: <a href="" title=""> <abbr title=""> <acronym title=""> <b> <blockquote cite=""> <cite> <code> <del datetime=""> <em> <i> <q cite=""> <strike> <strong>

Get Immediate Updates .. Like us on Facebook…

Visitors Count Visitor Counter