Published On: Fri, Mar 20th, 2020

ಇಲಾಖೆ ಜೊತೆ ಸಹಕರಿಸಿ ಯುವಮೋರ್ಚಾ ಅಧ್ಯಕ್ಷ ಪ್ರದೀಪ್ ಮನವಿ

 ಬಂಟ್ವಾಳ;  ಕೊರೊನಾ ವೈರಸ್ ನ್ನು  ಸಮರೋಪಾದಿಯಲ್ಲಿ ಹತೋಟಿಗೆ ತರುವ ದೆಸೆಯಲ್ಲಿ ಇಲಾಖೆಯ ಜೊತೆ ಸಹಕರಿಸುವಂತೆ ಬಂಟ್ವಾಳ ಕ್ಷೇತ್ರ  ಬಿ.ಜೆ.ಪಿ ಯುವ ಮೋರ್ಚಾ ಅಧ್ಯಕ್ಷ  ಪ್ರದೀಪ್ ಅಜ್ಜಿಬೆಟ್ಟು ಅವರು ಯುವ ಮೋರ್ಚಾ ಕಾರ್ಯಕರ್ತರಿಕೆ ಕರೆ ನೀಡಿದ್ದಾರೆ.
IMG-20200320-WA0111

.ಜಗತ್ತೀನಾದ್ಯಂತ ಜನ ಸಮುದಾಯವನ್ನು ಬೆಚ್ಚಿ ಬೀಳಿಸಿದ  ಕೊರೊನಾ ವೈರಸ್ ಮಾನವ ಜನಾಂಗಕ್ಕೆ ಒಂದು ಸವಾಲಾಗಿ ಪರಿಣಮಿಸಿರುವುದರಿಂದ  ಮನುಷ್ಯನ ಸ್ವಯಂ ಆಧಾರಿತ ಪ್ರಕಾರಗಳಲ್ಲಿಯೇ ಹತೋಟಿಗೆ ತಂದು ಅದನ್ನು ಹಿಮ್ಮೆಟ್ಟಿಸುವ ಬಹುಪಾಲು ಜವಬ್ದಾರಿ ನಮ್ಮ ಮೇಲಿದೆ. ಹಾಗಾಗಿ  ಸರ್ಕಾರದ ವಿವಿಧ ಇಲಾಖೆಯಡಿಯಲ್ಲಿ ಬರುವ ಅಧಿಕಾರಿಗಳೊಂದಿಗೆ ತಮ್ಮ, ತಮ್ಮ ಊರಿನ ಸಂಘ,ಸಂಸ್ಥೆಗಳೊಂದಿಗೆ ಬಿ.ಜಿ.ಪಿ ಯುವ ಕಾರ್ಯಕರ್ತರು  ನಿಕಟವಾಗಿ ಸಂಪರ್ಕ ಇಟ್ಟುಕೊಂಡು ಸಮರೋಪಾದಿಯಲ್ಲಿ  ಈ ಭಯಾನಕ ವೈರಸ್  ಹತೋಟಿಗೆ ಶ್ರಮಿಸುವಂತೆ ಅವರು ಪ್ರಕಟಣೆಯಲ್ಲಿ ಮನವಿ ಮಾಡಿದ್ದಾರೆ.  ಎಲ್ಲಾ ಯುವ ಬಿ.ಜೆ.ಪಿ ಕಾರ್ಯಕರ್ತರು ತಕ್ಷಣದಿಂದಲೇ ಪ್ರಧಾನ ಮಂತ್ರಿ ನರೇಂದ್ರ ಮೋದಿಯವರ ಅಶಯದಂತೆ ಜನತಾ ಕರ್ಪ್ಯೂ ಗೆ ಸನ್ನದರಾಗಿ ಕೆಲ ದಿನಗಳ ಮಟ್ಟಿಗೆ  ಮನೆಯಲ್ಲಿಯೇ ಇದ್ದುಕೊಂಡು ವಿದೇಶದಿಂದ ಬಂದವರ ಬಗ್ಗೆಯ  ನಿಗಾ ವಹಿಸುವಂತೆಯೂ ಅವರು ಮನವಿ ಮಾಡಿದ್ದಾರೆ.

Attachments area

 

Leave a comment

XHTML: You can use these html tags: <a href="" title=""> <abbr title=""> <acronym title=""> <b> <blockquote cite=""> <cite> <code> <del datetime=""> <em> <i> <q cite=""> <strike> <strong>

Get Immediate Updates .. Like us on Facebook…

Visitors Count Visitor Counter