Published On: Fri, Mar 20th, 2020

ವಿಧಾನಸಭೆಯಲ್ಲು ಪ್ರತಿಧ್ವನಿಸಿದ ಕಂಚಿನಡ್ಕಪದವು ತ್ಯಾಜ್ಯ ಸಂಸ್ಕರಣ ಘಟಕ

ಬಂಟ್ವಾಳ: ಸಜೀಪನಡುಗ್ರಾಮದ ಕಂಚಿನಡ್ಕ ಪದವಿನಲ್ಲಿರುವ ತ್ಯಾಜ್ಯ ಸಂಸ್ಕರಣ ಘಟಕದಲ್ಲಿ ಬಂಟ್ವಾಳ ಪುರಸಭೆ ಬುಧವಾರ ಒಣಕಸವನ್ನು  ವಿಲೇ ಮಾಡಿರುವ ಪ್ರಕರಣ ರಾಜ್ಯ ವಿಧಾನಸಭೆಯಲ್ಲು ಗುರುವಾರ ಪ್ರತಿಧ್ವನಿಸಿತು. ಶೂನ್ಯವೇಳೆಯಲ್ಲಿ ವಿಷಯ ಪ್ರಸ್ತಾವಿಸಿದ ಶಾಸಕ ಯು.ಟಿ.ಖಾದರ್ ಅವರು, ಸ್ಥಳೀಯ ಪಂಚಾಯತ್ ಮತ್ತು ಗ್ರಾಮಸ್ಥರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳದೆ ಮತ್ತು ಗ್ರಾಮಸ್ಥರ ಬೇಡಿಕೆಯನ್ನು ಈಡೇರಿಸದೆ ಬಂಟ್ವಾಳ ಪುರಸಭೆ ಏಕಾಏಕಿಯಾಗಿ ಕಂಚಿನಡ್ಕಪದವಿನಲ್ಲಿ ತ್ಯಾಜ್ಯವಿಲೇಮಾಡಿದೆ.
IMG-20200319-WA0071 (2)ಈ ಸಂದರ್ಭದಲ್ಲಿ ವಿರೋಧ ವ್ಯಕ್ತಪಡಿಸಿದ ಪಂಚಾಯತ್ ಅಧ್ಯಕ್ಷರ ಸಹಿತ ಹಲವರನ್ನು ಪೊಲೀಸರು ಬಲವಂತವಾಗಿ ಬಂಧಿಸಿದ್ದಾರೆ.ಈ ರೀತಿ ದಬ್ಬಾಳಿಕೆಯಿಂದ ಕಸವಿಲೇವಾರಿ ನಡೆಸುವುದು ಸರಿಯಲ್ಲ,ಹಾಗಾಗಿ ತಕ್ಷಣ ಅಲ್ಲಿ ಕಸವಿಲೇವಾರಿಯನ್ನು ಸ್ಥಗಿತಗೊಳಿಸಬೇಕು ಎಂದು ಶಾಸಕ ಯು.ಟಿ.ಖಾದರ್ ಸರಕಾರವನ್ನು ಆಗ್ರಹಿಸಿದರು.   12ವರ್ಷದಿಂದ ಸಾಧ್ಯವಾಗಿಲ್ಲ: ಶಾಸಕ ಖಾದರ್ ಅವರ ಮಾತಿಗೆ ಕೂಡಲೇ ಪ್ರತಿಕ್ರಿಯಿಸಿದ ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ಉಳಿಪಾಡಿ ಅವರು,2007-08 ರಲ್ಲಿಯೇ  ಅಲ್ಲಿ ವೈಜ್ಙಾನಿಕ ರೀತಿಯ ತ್ಯಾಜ್ಯ ಸಂಸ್ಕರಣ ಘಟಕ ನಿರ್ಮಿಸಲಾಗಿದೆ.ಆದರೆ ಸುಮಾರು 12 ವರ್ಷದಿಂದ ಕೆಲವೊಂದು ಗೊಂದಲದ ಕಾರಣದಿಂದ ತ್ಯಾಜ್ಯ ವಿಲೇಗೆ ಸಾಧ್ಯವಾಗಿಲ್ಲ,ಸದನ ಸಮಿತಿ,ಪರಿಸರ ಇಲಾಖೆಯ ಅನುಮತಿ ದೊರೆತ ಹಿನ್ನಲೆ ಮತ್ತು ರಾಜ್ಯ ಉಚ್ಚ ನ್ಯಾಯಾಲಯವು ಆದೇಶವನ್ನು ಪಾಲಿಸುವ ಉದ್ದೇಶದಿಂದ ಒಣಕಸವನ್ನು ವಿಲೇ ಮಾಡಲಾಗುತ್ತಿದೆ ಎಂದರು.
FB_IMG_1583752959550ಈ ಘಟಕವನ್ನು ಮುಂದಿನ ದಿನಗಳಲ್ಲಿ ಇನ್ನಷ್ಟು ಅಭಿವೃದ್ದಿ ಪಡಿಸುವ ದೆಸೆಯಲ್ಲಿ ಶಾಸಕ ಖಾದರ್ ಮತ್ತು ತಾನು ಕಳಿತು ಮಾತುಕತೆ ನಡೆಸುತ್ತೆವೆ ಆದರೆ ಶಾಸಕ ಖಾದರ್ ಹೇಳಿದಂತೆ ಕಸ ವಿಲೇವಾರಿ ಸ್ಥಗಿತಗೊಳಿಸುವುದು ಸಾಧ್ಯವಿಲ್ಲ  ಎಂದು ಶಾಸಕ ರಾಜೇಶ್ ನಾಯ್ಕ್ ಅವರು ಶಾಸಕ ಖಾದರ್ ಅವರ ಮರು ಪ್ರಶ್ನೆಗೆ ಸ್ಪಷ್ಟಪಡಿಸಿದರು. ಈ ವೇಳೆ ಸಭಾಧ್ಯಕ್ಷ ಕಾಗೇರಿಯವರ ಸೂಚನೆಯಂತೆ ಗೃಹ ಸಚಿವ ಬೊಮ್ಮಾಯಿ ಅವರು ಮಾತನಾಡಿ ಕಸವಿಲೇವಾರಿ ಸ್ಥಳೀಯಾಡಳಿತ ಮತ್ತು ತಾಲೂಕಾಡಳಿತಕ್ಕೆ ಸೇರಿದ್ದಾಗಿದೆ.
FB_IMG_1584618854424ಇದರಲ್ಲಿ ಪೊಲೀಸರ ಪಾತ್ರವಿಲ್ಲ,ಸ್ಥಳದಲ್ಲಿ ಕಾನೂನು ಸುವ್ಯವಸ್ಥೆ ಕಾಪಾಡುವುದು ಮತ್ತು ಸಂಭವಿಸಬಹುದಾದ ಘರ್ಷಣೆಯನ್ನು ತಡೆಯುವ ನಿಟ್ಟಿನಲ್ಲಿ ಪೊಲೀಸರು ಮಧ್ಯಪ್ರವೇಶಿಸಿದ್ದಾರಷ್ಟೆ ಎಂದು ಸದನದ ಗಮನಕ್ಕೆ ತಂದಾಗ ಚರ್ಚೆಗೆ ತೆರೆಬಿತ್ತು. ಆರೋಗ್ಯ ಸಚಿವರಾಗಿದ್ದಾಗ ಸುಮ್ಮನಿದ್ದರು: ಸಜೀಪನಡುಗ್ರಾಮದ  ಕಂಚಿನಡ್ಕಪದವು ಬಂಟ್ವಾಳ ತಾಲೂಕಿನಲ್ಲಿದ್ದರೂ ಶಾಸಕ ಯು.ಟಿ.ಖಾದರ್ ಅವರ ಮಂಗಳೂರು ವಿಧಾನಸಭಾ ಕ್ಷೇತ್ರಕ್ಕೊಳಪಟ್ಟಿದ್ದಾಗಿದೆ. ಖಾದರ್‌ ಅವರು ರಾಜ್ಯದ ಆರೋಗ್ಯ ಸಚಿವರಾಗಿದ್ದ ಕಾಲದಲ್ಲಿಯೇ ಕಂಚಿನಡ್ಕಪದವಿನಲ್ಲಿ  ಪುರಸಭೆಯ ತ್ಯಾಜ್ಯ ವಿಲೇವಾರಿ ಸಂಸ್ಕರಣ ಘಟಕ ನಿರ್ಮಾಣವಾಗಿತ್ತು.ಆರಂಭಿಕ ಹಂತದಲ್ಲಿ ಇಲ್ಲಿದ್ದ ಬೆರಳೆಣಿಕೆಯ ಮನೆಗಳು ಈಗ ಐವತ್ತಕ್ಕು ಹೆಚ್ಚಾಗಿರುವುದು ಖಾದರ್ ಅವರಿಗೆ ಗೊತ್ತಿರುವ ಸಂಗತಿ ಮಾತ್ರವಲ್ಲ ,ಅವೆಲ್ಲವು ಆಕ್ರಮ ಮನೆಗಳು ಎಂಬುದು ಸ್ಪಷ್ಟವಾಗಿ ತಿಳಿದೆ ಇದೆ.ಸದ್ಯ ಜಿಲ್ಲಾಡಳಿತ ಇವರೆಲ್ಲರಿಗೂ ಇರಾ ಗ್ರಾಮದಲ್ಲಿ ನಿವೇಶನ ಗುರುತಿಸಿದೆ. ಅವರು ಆರೋಗ್ಯ ಸಚಿವರಾಗಿದ್ದಾಗಲೇ ಇಲ್ಲಿರುವ ಎಲ್ಲಾ ಸಮಸ್ಯೆಯನ್ನು ಪರಿಹರಿಸಬಹುದಾಗಿತ್ತು.ಪಕ್ಕದ ಬಂಟ್ವಾಳ ಕ್ಷೇತ್ರದಲ್ಲಿ ಪರಿಸರ ಸಚಿವರಾಗಿದ್ದ ರಮಾನಾಥ ರೈ ಅವರಿದ್ದರು,ಇವರಿಬ್ಬರು ಕೂತು ಚರ್ಚಿಸಿ ಇದಕ್ಕೊಂದು ಪರಿಹಾರ ಕಂಡುಕೊಳ್ಳಬಹುದಾಗಿತ್ತು. ಆದರೆ ಆಗ ಖಾದರ್ ಅವರು ಮನಸ್ಸು ಮಾಡಿರಲಿಲ್ಲ.ಸ್ಥಳೀಯರನ್ನು,ತಮ್ಮ ಪಕ್ಷದ ಕಾರ್ಯಕರ್ತರನ್ನೇ ಛೂಬಿಟ್ಟು ಘಟಕವನ್ನು ವಿರೋಧಿಸಿ ಪ್ರತಿಭಟನೆ ನಡೆಸಿದ್ದರು ಎಂಬ ಆರೋಪ ಸಾರ್ವಜನಿಕ ವಲಯದಿಂದ ವ್ಯಕ್ತವಾಗಿತ್ತು.ಈಗ‌ ಪುರಸಭೆ ಕೋಟ್೯ ಆದೇಶ ಪಾಲಿಸುವ ನಿಟ್ಟಿನಲ್ಲಿ ದಿಟ್ಟ ನಿರ್ಧಾರ ಕೈಗೊಂಡು ಒಣಕಸ ಮಾತ್ರ ಕಂಚಿನಡ್ಕ ಪದವಿನಲ್ಲಿ ವಿಲೇವಾರಿಗೆ ಮುಂದಾಗಿದ್ದು, ಈ ಕ್ರಮಕ್ಕೆ ಪುರವಾಸಿಗಳಿಂದಲೂ ವ್ಯಾಪಕ ಪ್ರಶಂಸೆ ವ್ಯಕ್ತವಾಗಿದೆ.                            ನೈತಿಕತೆ ಇದೆಯೇ? : ಈ ನಡುವೆ                                    ಮಂಗಳೂರು ಶಾಸಕ ಯು.ಟಿ.ಖಾದರ್ ಅವರ ಕ್ಷೇತ್ರ ಫರಂಗಿಪೇಟೆಯ ರಾ.ಹೆ.ಯಲ್ಲಿಯೇ   ಕಸದ ರಾಶಿ ಬಿದ್ದರೂ, ಇದಕ್ಕೊಂದು ವ್ಯವಸ್ಥೆ ಕಲ್ಪಿಸಲು ಸಾಧ್ಯವಾಗಿಲ್ಲ.‌ ಇನ್ನು ಬಂಟ್ವಾಳ ಪುರಸಭೆ ಕಸ ವಿಲೇವಾರಿಯ ಬಗ್ಗೆ ಮಾತನಾಡುವ ನೈತಿಕತೆ ಇದೆಯೇ? ಎಂಬ ಪ್ರಶ್ನೆಯನ್ನು ಪುರವಾಸಿಗಳು ಕೇಳಿದ್ದಾರೆ.

Leave a comment

XHTML: You can use these html tags: <a href="" title=""> <abbr title=""> <acronym title=""> <b> <blockquote cite=""> <cite> <code> <del datetime=""> <em> <i> <q cite=""> <strike> <strong>

Get Immediate Updates .. Like us on Facebook…

Visitors Count Visitor Counter