Published On: Wed, Mar 18th, 2020

ಗಂಜಿಮಠ ಒಡ್ಡೂರು, ಯುವಕೇಸರಿ ಘಟಕ   ಶನೀಶ್ವರ ಪೂಜೆ, ಧಾರ್ಮಿಕ ಸಭೆ. 

ಕುಪ್ಪೆಪದವು: ವಿಶ್ವಹಿಂದೂ ಪರಿಷತ್ ಭಜರಂಗದಳ ಯುವಕೇಸರಿ ಘಟಕ ಒಡ್ಡೂರು ಇದರ ವತಿಯಿಂದ ಪ್ರಥಮ ವರ್ಷದ ಸಾಮೂಹಿಕ ಶನೀಶ್ವರ ವ್ರತ ಕಲ್ಪೋಕ್ತ, ಶನೀಶ್ವರ ಮಹಾಪೂಜೆ, ಧಾರ್ಮಿಕ ಸಭೆ ಶನಿವಾರ ರಾತ್ರಿ ಜರಗಿತು. ಬೆಳಿಗ್ಗೆ 8 ಕ್ಕೆ ದೇವತಾ ಪ್ರಾರ್ಥನೆ, ಗಣಹೋಮ ನಡೆಯಿತು. ರಾತ್ರಿ 7:30 ಕ್ಕೆ ಶನೀಶ್ವರ ಪೂಜೆ, ಪ್ರಸಾದ ವಿತರಣೆ ನಡೆದು ಅನ್ನಸಂತರ್ಪಣೆ ನಡೆಯಿತು.
20200315_211635
8 ಗಂಟೆಗೆ ನಡೆದ ಧಾರ್ಮಿಕ ಸಭೆಯಲ್ಲಿ ಆಶೀರ್ವಚನ ನೀಡಿದ ಗುರುಪುರ ವಜ್ರದೇಹಿ ಮಠದ ಶ್ರೀ ಶ್ರೀ ರಾಜಶೇಖರಾನಂದ ಸ್ವಾಮೀಜಿ ಯವರು ಸನಾತನ ಹಿಂದೂ ಧರ್ಮದ ಜಾಗ್ರತಿಯಾಗಬೇಕಾಗಿದೆ, ಅಸ್ಪ್ರಶ್ಯತೆ, ಲವ್ ಜಿಹಾದ್ ವಿರುದ್ಧ ಹೋರಾಡಬೇಕಿದೆ, ಹಿಂದೂ ಹೆಣ್ಮಕ್ಕಳನ್ನು ಮರುಳು ಮಾಡಿ ಮತಾಂತರಕ್ಕೆ ಯತ್ನಿಸುವವರ ಬಗ್ಗೆ ಜಾಗ್ರತರಾಗಿರಬೇಕು ಸಂಘಟನೆಗಳು ಹಿಂದೂ ಧರ್ಮವನ್ನು ಕಾಡುತ್ತಿರುವ ಅಸ್ಪ್ರಶ್ಯತೆ, ಲವ್ ಜಿಹಾದ್ ನಂತಹ ಪಿಡುಗುಗಳ ಬಗ್ಗೆ ಜಾಗ್ರತಿ ಮೂಡಿಸುವ ಮೂಲಕ ಧರ್ಮ ಜಾಗ್ರತಿಯ ಕೆಲಸ ಮಾಡ್ಬೇಕು ಈ ನಿಟ್ಟಿನಲ್ಲಿ ಯುವಕೇಸರಿ ಘಟಕ ಶ್ಲಾಘನೀಯ ಕಾರ್ಯ ಮಾಡುತ್ತಿದೆ ಎಂದರು. ಉದ್ಯಮಿ ಚಂದ್ರಹಾಸ್ ನಾರಳ ಸಭೆಯ ಅಧ್ಯಕ್ಷತೆ ವಹಿಸಿದ್ದರು.ಒಡ್ಡೂರಿನ ನಾಟಿ ವೈದ್ಯ ಸುರೇಶ್ ಪಂಡಿತ್, ಒಡ್ಡೂರು ಶಾಲೆಯಲ್ಲಿ 22 ವರ್ಷಗಳಿಂದ ಪ್ರಭಾರ ಮುಖ್ಯೋಪಾಧ್ಯಾಯಿನಿಯಾಗಿ ಕಾರ್ಯನಿರ್ವಹಿಸುತ್ತಿರುವ ಲಿಡ್ವಿನ್ ನೊರೊನ್ನಾ, ಶಿಕ್ಷಣ ಮತ್ತು ಕ್ರೀಡೆಯಲ್ಲಿ ವಿಶೇಷ ಸಾಧನೆಗೈದ ಒಡ್ಡೂರಿನ ಕು|ಪ್ರೀತಿ, ಕು|ವಿನಿತಾ, ಕು|ಗೌತಮಿ ಹಾಗೂ ಹರ್ಷಿತ್ ಅವರನ್ನು ವೇದಿಕೆಯಲ್ಲಿ ಗೌರವಿಸಲಾಯಿತು. ವಿಹೆಚ್ ಪಿ ಮಂಗಳೂರು ವಿಭಾಗ ಕಾರ್ಯದರ್ಶಿ ಶರಣ್ ಪಂಪ್ ವೆಲ್, ದಿಕ್ಸೂಚಿ ಭಾಷಣಗೈದರು, ಶಾಸಕ ಡಾ. ಭರತ್ ಶೆಟ್ಟಿ, ದುರ್ಗಾವಾಹಿನಿ ಪ್ರಾಂತ ಸಂಯೋಜಕಿ ಶ್ರೀಮತಿ ವಿದ್ಯಾ ಮಲ್ಯ, ಭಜರಂಗದಳ ವಿಭಾಗ ಸಂಯೋಜಕ್ ಭುಜಂಗ ಕುಲಾಲ್, ಭಜರಂಗದಳ ಜಿಲ್ಲಾ ಸಹಸಂಯೋಜಕ್ ನವೀನ್ ಮೂಡುಶೆಡ್ಡೆ, ವಿ ಹೆಚ್ ಪಿ ಗುರುಪುರ ಪ್ರಖಂಡ ಅಧ್ಯಕ್ಷ ವಿಷ್ಣು ಕಾಮತ್ ಗುರುಪುರ,   ಕಾರ್ಯದರ್ಶಿ ಸುನೀಲ್ ಪೆರಾರ, ಭಜರಂಗದಳ ಗುರುಪುರ ಪ್ರಖಂಡ ಸಂಯೋಜಕ್ ವಸಂತ ಸುವರ್ಣ ಗುರುಪುರ, ಜಿಲ್ಲಾಪಂಚಾಯತ್ ಸದಸ್ಯ ಜನಾರ್ಧನ ಗೌಡ ಮುಚ್ಚೂರು, ತಾಲೂಕುಪಂಚಾಯತ್ ಸದಸ್ಯ ನಾಗೇಶ್ ಶೆಟ್ಟಿ ಮುತ್ತೂರು, ಉದ್ಯಮಿ ಭಾಸ್ಕರ್ ಕುಲಾಲ್ ಕುಕ್ಕಟ್ಟೆ, ಘಟಕದ ಅಧ್ಯಕ್ಷ ಸದಾಶುವ ಕೊಟ್ಟಾರಿ, ಸಂಚಾಲಕ ಜನಾರ್ಧನ್ ಒಡ್ಡೂರು ಮೊದಲಾದವರು ವೇದಿಕೆಯಲ್ಲಿ ಉಪಸ್ಥಿತರಿದ್ದರು. ರಂಜಿತ್ ಒಡ್ಡೂರು ಸ್ವಾಗತಿಸಿದರು ವಿಕ್ರಂ ಒಡ್ಡೂರು ನಿರ್ವಹಿಸಿದ ಕಾರ್ಯಕ್ರಮದ ಕೋನೆಯಲ್ಲಿ ರಾಜೇಶ್ ಚಂದ್ರಮಜಲ್ ವಂದಿಸಿದರು. ನಂತರ ಸಂದೇಶ್ ನೀರುಮಾರ್ಗ ಮತ್ತು ಬಳಗದವರಿಂದ ಭಕ್ತಿರಸಮಂಜರಿ ನಡೆಯಿತು.

 

Leave a comment

XHTML: You can use these html tags: <a href="" title=""> <abbr title=""> <acronym title=""> <b> <blockquote cite=""> <cite> <code> <del datetime=""> <em> <i> <q cite=""> <strike> <strong>

Get Immediate Updates .. Like us on Facebook…

Visitors Count Visitor Counter