Published On: Sat, Mar 7th, 2020

ಮಾ.6ರಿಂದ 14, ಇರುವೈಲು ಜಾತ್ರೆ.

ಕುಪ್ಪೆಪದವು: ಇರುವೈಲು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದಲ್ಲಿ ಮಾರ್ಚ್ 6ರ ಶುಕ್ರವಾರ ಬೆಳಿಗ್ಗೆ ಕುಂಟ ಮುಹೂರ್ತದೊಂದಿಗೆ ವಾರ್ಷಿಕ ಜಾತ್ರಾ ಮಹೋತ್ಸವ ಪ್ರಾರಂಭ ವಾಗಿದ್ದು ಮಾರ್ಚ್ 14 ರ ಶನಿವಾರದವರೆಗೆ ನಡೆಯಲಿದೆ.7 ರ ಶನಿವಾರ ವಿಶೇಷ ಪೂಜೆ,ಉತ್ಸವ ಬಲಿ.
8 ರ ಆದಿತ್ಯವಾರ,ಬೆಳಿಗ್ಗೆ 8 ರಿಂದ ನಾಗದೇವರಿಗೆ ತಂಬಿಲ ಸೇವೆ,ಮಹಾಪೂಜೆ,ಸಂಜೆ 5 ರಿಂದ ಉತ್ಸವಬಲಿ,ಅಂಕುರಾರೋಪಣ.
ಮಾ.9 ರ ಸೋಮವಾರ ಮಧ್ಯಾಹ್ನ 12-05 ಕ್ಕೆ ಧ್ವಜಾರೋಹಣ,ಮಹಾಪೂಜೆ ನಂತರ ಅನ್ನಸಂತರ್ಪಣೆ.ರಾತ್ರಿ ಉತ್ಸವ ಬಲಿ ,ಕಂಚಿಲಾಲೆ,9-30ರಿಂದ ದುರ್ಗಾಪರಮೇಶ್ವರಿ ದಶಾವತಾರ ಯಕ್ಷಗಾನ ಮಂಡಳಿ ಇರುವೈಲು ಇವರಿಂದ ಯಕ್ಷಗಾನ ಬಯಲಾಟ.
10 ರ ಮಂಗಳವಾರ ನವಕಕಲಶಾಭಿಷೇಕ,ಸಾಮೂಹಿಕ ಸತ್ಯನಾರಾಯಣ ಪೂಜೆ ,ಅನ್ನಸಂತರ್ಪಣೆ,ರಾತ್ರಿ 6-30ರಿಂದ ಕಟ್ಟೆಪೂಜೆ,ಶ್ರೀದೇವಿಯ ಆದಿಸ್ಥಳದಲ್ಲಿ ಕಟ್ಟೆಪೂಜೆ,ಕೆರೆ ದೀಪೋತ್ಸವ,ಸಾಂಸ್ಕ್ರತಿಕ ಕಾರ್ಯಕ್ರಮ ನಮ್ಮ ಜವನೆರ್ ಇರುವೈಲು ಇವರಿಂದ.
11.ಬುಧವಾರ ಬೆಳಿಗ್ಗೆ 8ರಿಂದ ನವಕ ಕಲಶ ಪ್ರದಾನ ಹೋಮ,ಮಹಾಪೂಜೆ,ಅನ್ನಸಂತರ್ಪಣೆ,ರಾತ್ರಿ 8 ರಿಂದ ಧಾರ್ಮಿಕ ಸಭೆ,9-30ರಿಂದ ಭೇರಿತಾಡನೆ,ನಡುಬಲಿ ಉತ್ಸವ ,ಚಂದ್ರಮಂಡಲ ಸೇವೆ,ಬಾಕಿಮಾರು ದೀಪೋತ್ಸವ,ಕಟ್ಟೆಪೂಜೆ .
12.ಗುರುವಾರ,11-10ಕ್ಕೆ ಮಹಾ ರಥೋತ್ಸವ,ಮಧ್ಯಾಹ್ನ ಅನ್ನಸಂತರ್ಪಣೆ,ರಾತ್ರಿ 7 ರಿಂದ ರಥೋತ್ಸವ,ಶ್ರೀಭೂತಬಲಿ ,ಶಯನೋತ್ಸವ ,ಕವಾಟ ಬಂಧನ.
13 ರ ಶುಕ್ರವಾರ,ಬೆಳಿಗ್ಗೆ 7 ಕ್ಕೆ ಕವಾಟ ಉದ್ಘಾಟನೆ,ಪಲ್ಲಪೂಜೆ,ತುಲಾಭಾರ ಸೇವೆ,ಕಲಶಾಭಿಷೇಕ,ಚೂರ್ಣೋತ್ಸವ,ಚಂದ್ರಮಂಡಲ ಸೇವೆ,ಮಹಾಪೂಜೆ,1-30ರಿಂದ ಮಹಾಅನ್ನಸಂತರ್ಪಣೆ,ರಾತ್ರಿ 7 ಕ್ಕೆ ಬ್ರಹ್ಮ ತಂಬಿಲ,ಗಂಟೆ 10 ರಿಂದ ಉತ್ಸವ,ಕಟ್ಟೆಪೂಜೆ,ಓಕುಳಿ,ಅವಭ್ರತ,ಮಾಡ್ಲಾಯಿ ದೈವ ದೇವರ ಭೇಟಿ,ಮಾಡ್ಲಾಯಿ ದೈವದ ನೇಮ,ಧ್ವಜಾವರೋಹಣ,ರಾತ್ರಿ ಫಲ್ಗುಣಿ ಯುವಕ ಮಂಡಲ(ರಿ)ಇವರಿಂದ ಸಾಂಸ್ಕ್ರತಿಕ ಕಾರ್ಯಕ್ರಮ.
14 ರ ಶನಿವಾರ,ಬೆಳಿಗ್ಗೆ 8 ರಿಂದ ಮಂಗಳ ಗಣಯಾಗ,ಸಂಪ್ರೋಕ್ಷಣೆ,ಮಹಾಪೂಜೆ,12 ಗಂರೆಗೆ ಮಂತ್ರಾಕ್ಷತೆ ,ಅನ್ನಸಂತರ್ಪಣೆ,ಸಂಜೆ 5 ಗಂಟೆಗೆ ಹೊಸಮರಾಯ ದೈವದ ಭಂಡಾರ ಇಳಿಸುವುದು,ರಾತ್ರಿ 8 ಗಂಟೆಯಿಂದ ಹೊಸಮರಾಯ ದೈವದ ನೇಮ,ಮೊದಲಾದ ಕಾರ್ಯಕ್ರಮಗಳು ನಡೆಯಲಿವೆ.
ReplyForward

Leave a comment

XHTML: You can use these html tags: <a href="" title=""> <abbr title=""> <acronym title=""> <b> <blockquote cite=""> <cite> <code> <del datetime=""> <em> <i> <q cite=""> <strike> <strong>

Get Immediate Updates .. Like us on Facebook…

Visitors Count Visitor Counter