Published On: Fri, Mar 6th, 2020

ಕಲ್ಲಡ್ಕ ಶ್ರೀರಾನ ವಿದ್ಯಾ ಕೇಂದ್ರದಲ್ಲಿ ಗುರುಕುಲದ ನಿಜ ದರ್ಶನ : ತಹಶೀಲ್ದಾರ್ ರಶ್ಮೀ

ಗುರುಕುಲ ಹಿಂದೆ ಹೇಗಿತ್ತುಎಂಬುದರ ನಿಜದರ್ಶನ ನಮಗಿಂದುಕಲ್ಲಡ್ಕದ ಶ್ರೀರಾಮ ವಿದ್ಯಾಕೇಂದ್ರದಲ್ಲಿಆಗಿದೆ, ನಮಗೂ ಇಂತಹ ಶಿಕ್ಷಣ ಪಡೆಯುವ ಅವಕಾಶ ಸಿಗಬೇಕಿತ್ತು ಎಂದು ಬಂಟ್ವಾಳ ತಾಲೂಕಿನ ತಹಶೀಲ್ದಾರ್ ರಶ್ಮಿ ಇವರುಕಲ್ಲಡ್ಕದ ಶ್ರೀರಾಮ ಪ್ರೌಢಶಾಲೆಯಲ್ಲಿ 10ನೇ ತರಗತಿಯ ವಿದ್ಯಾರ್ಥಿಗಳ ದೀಪಪ್ರದಾನಕಾರ್ಯಕ್ರಮದಲ್ಲಿ ಮಾತನಾಡಿದರು.

1

ಪ್ರತಿಯೊಬ್ಬರಲ್ಲೂಒಂದೊಂದು ಪ್ರತಿಭೆಇದ್ದೇಇದೆ, ಹಾಗೂ ಅದನ್ನು ಸರಿಯಾಗಿ ಉಪಯೋಗಿಸಿಕೊಳ್ಳುವತ್ತ ನಾವಿಂದುಗಮನಹರಿಸಬೇಕಿದೆ. ನಾವೇನು ಕೆಲಸ ಮಾಡುತ್ತೇವೋಅದನ್ನುಇಚ್ಚೆಯಿಂದ ಮಾಡಿದಾಗ ಮಾತ್ರ ಪ್ರತಿಫಲ ಸಿಗುತ್ತದೆ. ಬದುಕಿನಯಾವ ಸಮಯದಲ್ಲೂ ವಿಶ್ವಾಸ ಕಳೆದುಕೊಳ್ಳದೆ ಪೂರ್ಣ ಪ್ರಯತ್ನದಿಂದ ಕೆಲಸ ಮಾಡಿದಾಗ ವೈಫಲ್ಯತೆಎಂಬುದುಎದುರಾಗುವುದಿಲ್ಲ ಈ ರೀತಿ ಸಾಧನೆಯ ಹಾದಿಯಲ್ಲಿ ಮುನ್ನಡೆಯಿರಿಎಂದು ಹೇಳುತ್ತಾ ವಿದ್ಯಾರ್ಥಿಗಳ ಮುಂದಿನ ಭವಿಷ್ಯಕ್ಕೆ ಶುಭ ಹಾರೈಸಿದರು.

2ವಿವೇಕಾನಂದ ವಿದ್ಯಾವರ್ಧಕ ಸಂಘದಅಧ್ಯಕ್ಷರಾದಡಾ||ಪ್ರಭಾಕರ ಭಟ್‍ಕಲ್ಲಡ್ಕ ಮಾತನಾಡಿ ವೈಜ್ಞಾನಿಕಯುಗಕ್ಕೆ ಹಾರುವ ಭರದಲ್ಲಿ ಭಾರತೀಯ ಮೂಲ ಚಿಂತನೆಗಳನ್ನು ನಾವಿಂದು ಮರೆಯುತ್ತಿದ್ದೇವೆ. ಧರ್ಮ,ಸಂಸ್ಕøತಿ,ಜೀವನ ಮೌಲ್ಯಗಳು ನಮ್ಮಜೀವನದಆಧಾರ. ಇವುಗಳನ್ನು ಉಳಿಸಿಕೊಂಡು ಸಮಾಜದ ನಡುವೆಆದರ್ಶ ವ್ಯಕ್ತಿಗಳಾಗಿ ಬದುಕಬೇಕುಎಂದರು.

4ವೇದಿಕೆಯಲ್ಲಿ ಮುಖ್ಯ ಅತಿಥಿಗಳಾಗಿ ಮಂಗಳೂರು ವಿಶ್ವವಿದ್ಯಾಲಯದಡೀನ್ ಹಾಗೂ ಮುಖ್ಯ ಹಣಕಾಸುಅಧಿಕಾರಿ ಶ್ರೀ ಶ್ರೀಪತಿ ಕಲ್ಲೂರಾಯ,ಬೆಂಗಳೂರಿನ ಗಮ್ಯ ಫೌಂಡೇಶನ್‍ನಅಧ್ಯಕ್ಷರುಗೌತಮ್‍ಜೀ,ಬೆಂಗಳೂರಿನ ನೆಪ್ರೋ ಸಂಸ್ಥೆಯಸಹಾಯಕಉಪನ್ಯಾಸಕಿಡಾ|| ಲೀಲಾವತಿ,ಹೆಣ್ಮಕ್ಕಳ ಸರಕಾರಿ ಪದವಿಪೂರ್ವ ವಿದ್ಯಾಲಯಉಡುಪಿ ಇಲ್ಲಿನಸಹಾಯಕಉಪನ್ಯಾಸಕ ಶ್ರೀಲಕ್ಷ್ಮೀಕಾಂತ್ ಕಾಪು,ಶ್ರೀರಾಮ ವಿದ್ಯಾಕೇಂದ್ರದ ಅಧ್ಯಕ್ಷರಾದ ಶ್ರೀ ನಾರಾಯಣ ಸೋಮಯಾಜಿ, ಸಂಚಾಲಕರಾದ ವಸಂತ ಮಾಧವ, ಸಹ ಸಂಚಾಲಕರಾದರಮೇಶ್‍ಎನ್, ಪ್ರೌಡಶಾಲಾ ಮುಖ್ಯೋಪಾಧ್ಯಾಯರು ವಸಂತಿಕುಮಾರಿ ಉಪಸ್ಥಿತರಿದ್ದರು.

5 (1) ಸೌಮ್ಯ ಪಿ. ಮಾತಾಜಿ ವಿದ್ಯಾರ್ಥಿಗಳಿಗೆ ಶುಭ ಹಾರೈಸಿದರು. 10ನೇ ವಿದ್ಯಾರ್ಥಿಗಳು 9ನೇ ವಿದ್ಯಾರ್ಥಿಗಳಿಗೆ ದೀಪ ಪ್ರದಾನ ಮಾಡಿತಮ್ಮಕೊಡುಗೆಯನ್ನುಶಾಲೆಗೆ ಸರ್ಮಪಿಸಿದರು. ಅತಿಥಿಗಳು ವಿದ್ಯಾರ್ಥಿಗಳಿಗೆ ತಿಲಕಧಾರಣೆ ಮಾಡಿ ಆಶೀರ್ವದಿಸಿದರು. ವಿದ್ಯಾರ್ಥಿನಿ ಶಿವಾನಿ 9ನೇ ಕಾರ್ಯಕ್ರಮ ನಿರೂಪಿಸಿ, ಶಿಕ್ಷಕಿ ಶ್ರೀಮತಿ ಶಾಂಭವಿ ಸ್ವಾಗತಿಸಿ ಶ್ರೀ ಪ್ರಶಾಂತ್ ವಂದಿಸಿದರು.

3

Leave a comment

XHTML: You can use these html tags: <a href="" title=""> <abbr title=""> <acronym title=""> <b> <blockquote cite=""> <cite> <code> <del datetime=""> <em> <i> <q cite=""> <strike> <strong>

Get Immediate Updates .. Like us on Facebook…

Visitors Count Visitor Counter