Published On: Wed, Mar 4th, 2020

ಸಮಾಜದ ಹಿಂದುಳಿದ ವ್ಯಕ್ತಿಯು ಇಂದು ಅಧಿಕಾರ ಪಡೆಯುವಂತಾಗಿದೆ:ರಮಾನಾಥ್ ರೈ.

ಮುತ್ತೂರು,ಉಚಿತ ಸಾಮೂಹಿಕ ವಿವಾಹ,ಸಭಾಕಾರ್ಯಕ್ರಮ

ಕುಪ್ಪೆಪದವು: ರಾಷ್ಟ್ರೀಯ ಮಟ್ಟದಲ್ಲಿ ಪಂಚಾಯತ್ ರಾಜ್ ಕಾಯಿದೆ ತಿದ್ದುಪಡಿ ಮಾಡಿದ ಪರಿಣಾಮವಾಗಿ ಇಂದು ಹಿಂದುಳಿದ ವರ್ಗದ ಮಹಿಳೆ ಅಧಿಕಾರಕ್ಕೇರಲು ಸಾಧ್ಯವಾಗಿದೆ,ಅಂದು ತಿದ್ದುಪಡಿಯನ್ನು ಕೆಲವು ಪಕ್ಷಗಳು ವಿರೋಧಿಸಿದ್ದವು, ತಿದ್ದುಪಡಿಗಿಂತ ಮೊದಲು ಹಣಬಲವಿದ್ದ ಬಲಿಷ್ಠ ಸಮುದಾಯ ಮಾತ್ರ ಅಧಿಕಾರ ಪಡೆಯುತ್ತಿತ್ತು ಎಂದು ಮಾಜಿ ಸಚಿವ ರಮಾನಾಥ್ ರೈ ಹೇಳಿದ್ದಾರೆ.

20200304_130631ಅವರು ಮಂಗಳೂರು ತಾಲೂಕು ಕುಳವೂರು ಮುತ್ತೂರಿನ ಸತ್ಯ ಸಾರಮಾನಿ ಕ್ಷೇತ್ರದ ಹತ್ತರ ಸಂಭ್ರಮದ ಪ್ರಯುಕ್ತ ಬುಧವಾರ ಶ್ರೀಕ್ಷೇತ್ರದಲ್ಲಿ ನಡೆದ ದಲಿತ ಪಾರಂಪರಿಕ ಮತ್ತು ಸಾಂಪ್ರದಾಯಿಕ ಉಚಿತ ಸಾಮೂಹಿಕ ವಿವಾಹ ಕಾರ್ಯಕ್ರಮದ ಸಂದರ್ಭದಲ್ಲಿ ನಡೆದ ಸಭಾಕಾರ್ಯಕ್ರಮವನ್ನು ದೀಪ ಬೆಳಗಿಸಿ ಉದ್ಘಾಟಿಸಿ ಮಾತನಾಡಿದರು.ಸಮಾಜ ಸಾಕಷ್ಟು ಬದಲಾವಣೆ ಆಗಿದೆ ಇನ್ನೂ ಬದಲಾವಣೆ ಆಗಬೇಕಾಗಿದೆ ಇಂದು ದಲಿತ ಮಹಿಳೆಯರು ಪಂಚಾಯತ್ ಅಧ್ಯಕ್ಷರಾಗಿದ್ದಾರೆ ಇದು ಸಮಾಜ ಬದಲಾದುದರ ಪರಿಣಾಮ,ಸಾಮಾಜಿಕ ನ್ಯಾಯ ವಂಚಿತ ವರ್ಗಕ್ಕೆ ನ್ಯಾಯ ದೊರಕಿಸಿ ಕೊಡುವ ಹೋರಾಟ ನಿರಂತರವಾಗಿ ನಡೆಯಬೇಕು ಎಂದು ನೂತನ ವಧುವರರಿಗೆ ಶುಭ ಹಾರೈಸಿದರು.

20200304_122519ಸತ್ಯಸಾರಮಾನಿ ಕ್ಷೇತ್ರದ ಪ್ರಧಾನ ಅರ್ಚಕ ಹರಿಯಪ್ಪ ಮುತ್ತೂರು ಸಭೆಯ ಅಧ್ಯಕ್ಷತೆ ವಹಿಸಿದ್ದರು. ಖ್ಯಾತ ಭಾಗವತ ಚಂದ್ರಶೇಖರ್ ಕಕ್ಕೆಪದವು,ಮುಲ್ಕಿ ಠಾಣಾ ಎಎಸ್ಐ ಕೃಷ್ಣಪ್ಪ ಮುಚ್ಚೂರು,ಪ್ರಸಂಗಕರ್ತೆ ಸುಜಾತ ನಲ್ಲೂರು,ಆರೋಗ್ಯ ಸಹಾಯಕಿ ಲತಾ ಅನಂತಾಡಿ,ಕೆಎಂಸಿ ಮಣಿಪಾಲ್ ಇದರ ದೈಹಿಕ ಶಿಕ್ಷಣ ಶಿಕ್ಷಕ ಡಾ|ಎಂ.ರಾಜೀವ್ ಮಲ್ಲಂಜೆ,ವಿಶೇಷಚೇತನ ಸಾಧಕಿ ಸಬಿತಾ ಮೊನೀಶ್,ಸಮಾಜ ಸೇವಕ ಹ್ಯೂಮನಿಟಿ ಟ್ರಸ್ಟ್ ನ ರೋಷನ್ ಬೆಳ್ಮನ್, ಪೋಲ್ ವಾಲ್ಟ್ ರಾಷ್ಟ್ರೀಯ ಪಟು ಕು|ಬಬಿತಾ,ಶಿಕ್ಷಣ ಕ್ಷೇತ್ರದಲ್ಲಿ ಸಾಧನೆಗೈದ ಕು|ಹರ್ಷಿತಾ,ಕು|ನವಿತಾ,ಕು|ಚೈತ್ರ ಅವರುಗಳನ್ನು ಈ ಸಂದರ್ಭದಲ್ಲಿ ಶಾಲು ಹೊದೆಸಿಫಲಪುಷ್ಪ ನೀಡಿ ಗೌರವಿಸಲಾಯಿತು.

20200304_160530ತಾಲೂಕು ಪಂಚಾಯತ್ ಅಧ್ಯಕ್ಷ ಮಹಮ್ಮದ್ ಮೋನು,ಸದಸ್ಯ ನಾಗೇಶ್ ಶೆಟ್ಟಿ ಗಂಜಿಮಠ ಕ್ಷೇತ್ರದ ತಾ.ಪಂ .ಸದಸ್ಯ ಸುನಿಲ್ ಅಮೀನ್ ,ಮುತ್ತೂರು,ಪಂಚಾಯತ್ ಅಧ್ಯಕ್ಷೆ ನಾಗಮ್ಮ,ಸದಸ್ಯರುಗಳಾದ ಸತೀಶ್ ಬಲ್ಲಾಜೆ,ತಾರಾನಾಥ್ ಕುಳಾಲ್,ಸರಸ್ವತಿ ನಾಯ್ಕ್,ಕುಪ್ಪೆಪದವು ಪಂ.ಉಪಾಧ್ಯಕ್ಷ ಡಿ.ಪಿ.ಹಮ್ಮಬ್ಬ,ಸದಸ್ಯ ಅಬೂಬಕ್ಕರ್ ಕಲ್ಲಾಡಿ,ಕೆಪಿಸಿಸಿಸದಸ್ಯಆರ್.ಕೆ. ಪ್ರಥ್ವಿರಾಜ್ ಅಳದಂಗಡಿ ಕ್ಷೇತ್ರದ ಜಿಲ್ಲಾಪಂಚಾಯತ್ ಸದಸ್ಯ ಶೇಖರ್ ಕುಕ್ಕೇಡಿ,ಬಿಎಸ್ಪಿ ಜಿಲ್ಲಾ ಅಧ್ಯಕ್ಷ ದಾಸಪ್ಪ ಎಡಪದವು,ಬೆಳ್ತಂಗಡಿ ತಾಲೂಕು ಪಂಚಾಯತ್ ಸದಸ್ಯ ಓಬಯ್ಯ ಆರಂಬೋಡಿ,ದಲಿತ್ ಸೇವಾ ಸಮಿತಿ ಸ್ಥಾಪಕಾಧ್ಯಕ್ಷ ಸೇಸಪ್ಪ ಬೆದ್ರಕಾಡ್ ಯುವ ಕಾಂಗ್ರೇಸ್ ಮುಖಂಡ ಗಿರೀಶ್ ಆಳ್ವ ,ಜನಾರ್ಧನ್ ಚೇಂತಿಮಾರ್,ಮೊದಲಾದವರು ವೇದಿಕೆಯಲ್ಲಿ ಉಪಸ್ಥಿತರಿದ್ದರು.ಒಂಬತ್ತು ಜೋಡಿಗಳು ಉಚಿತ ಸಾಮೂಹಿಕ ವಿವಾಹ ಕಾರ್ಯಕ್ರಮದಲ್ಲಿ ದಾಂಪತ್ಯ ಜೀವನಕ್ಕೆಕಾಲಿರಿಸಿದರು. ನಿತಿನ್ ಮುತ್ತೂರು ಸ್ವಾಗತಿಸಿದರು,ಎಂ,ಎಸ್.ಶ್ರೀನಿವಾಸ್ ಮಿಜಾರ್ ನಿರೂಪಿಸಿ,ಶ್ರೀಮತಿ ವಿನೋದ ವಂದಿಸಿದರು.

Leave a comment

XHTML: You can use these html tags: <a href="" title=""> <abbr title=""> <acronym title=""> <b> <blockquote cite=""> <cite> <code> <del datetime=""> <em> <i> <q cite=""> <strike> <strong>

Get Immediate Updates .. Like us on Facebook…

Visitors Count Visitor Counter