ಐಕಳ ಗ್ರಾಮ ಪಂಚಾಯಿತಿ ಜನಸಂಪರ್ಕ ಸಭೆ
ಕಿನ್ನಿಗೋಳಿ:ಐಕಳ ಗ್ರಾಮ ಪಂಚಾಯಿತಿಯಲ್ಲಿ ಮುಲ್ಕಿ ಮೂಡಬಿದಿರೆ ಶಾಸಕ ಉಮಾನಾಥ್ ಕೋಟ್ಯಾನ್ ಅಧ್ಯಕ್ಷತೆಯಲ್ಲಿ ಜನಸಂಪರ್ಕ ಸಭೆ ನಡೆಯಿತು. ನೀರಿನ ಸಮಸ್ಯೆ, ರಸ್ತೆ ರಸ್ತೆ ದುರಸ್ತಿ, ವಿದ್ಯುತ್ ಸಂಪರ್ಕ ವಿಷಯಗಳ ಬಗ್ಗೆ ಚರ್ಚೆ ನಡೆಯಿತು.
ಈ ಸಂದರ್ಭ ಸರಕಾರದಿಂದ ಕೊಡಮಾಡುವ ವೈದಕೀಯ ಚಿಕಿತ್ಸಾ ಚೆಕ್ಗಳನ್ನು ಹಸ್ತಾಂತರಿಸಲಾಯಿತು. ದ.ಕ. ಜಿಲ್ಲಾ ಪಂಚಾಯಿತಿ ಸದಸ್ಯ ವಿನೋದ್ಕುಮಾರ್ ಬೊಳ್ಳೂರು, ತಾಲೂಕು ಪಂಚಾಯಿತಿ ಸದಸ್ಯೆ ರಶ್ಮೀ ಆಚಾರ್ಯ, ಐಕಳ ಗ್ರಾಮ ಪಂಚಾಯಿತಿ ಅಧ್ಯಕ್ಷ ದಿವಾಕರ ಚೌಟ, ಉಪಾಧ್ಯಕ್ಷೆ ಸುಂದರಿ, ಪಿಡಿಒ ನಾಗರತ್ನ, ಪಂಚಾಯಿತಿ ಸದಸ್ಯರು , ವಿವಿಧ ಇಲಾಖಾಧಿಕಾರಿಗಳು ಉಪಸ್ಥಿತರಿದ್ದರು.