ಹೆಚ್ಚುತ್ತಿರುವ ಕಲಿಕೆಯ ವಿಧಾನ ತರಬೇತಿ ಶಿಬಿರ
ಕಿನ್ನಿಗೋಳಿ :ಕೇಂದ್ರ ಸರಕಾರ ಅನುಷ್ಠಾನ ಗೊಳಿಸಿದ ಯೋಜನೆಯನ್ನು ಅಂಗನವಾಡಿ ಕಾರ್ಯಕರ್ತೆ ಹಾಗೂ ಆರೋಗ್ಯ ಕಾರ್ಯಕರ್ತೆಯರು ಯಶಸ್ವಿಗೊಳಿಸಬೇಕು ಎಂದು ಯುಗಪುರುಷ ಪ್ರಧಾನ ಸಂಪಾದಕ ಕೆ. ಭುವನಾಭಿರಾಮ ಉಡುಪ ಹೇಳಿದರು.
ಬುಧವಾರ ಕಿನ್ನಿಗೋಳಿ ಯುಗಪುರುಷ ಸಭಾಭವನದಲ್ಲಿ ಪೋಷಕ್ ಅಭಿಯಾನ ಯೋಜನೆಯಡಿ ಹೆಚ್ಚುತ್ತಿರುವ ಕಲಿಕೆಯ ವಿಧಾನ ತರಬೇತಿಯ ಮಾದರಿ ಕುರಿತು ಕಟೀಲುವಲಯದ ಅಂಗನವಾಡಿ ಕಾರ್ಯಕರ್ತೆಯರಿಂದ ಒಂದು ದಿನದ ತರಬೇತಿ ಶಿಬಿರ ಉದ್ಘಾಟಿಸಿ ಮಾತನಾಡಿದರು. ಮೆನ್ನಬೆಟ್ಟು ಗ್ರಾಮ ಪಂಚಾಯಿತಿ ಅಧ್ಯಕ್ಷೆ ಸರೋಜಿನಿ ಎಸ್. ಗುಜರನ್ ಅಧ್ಯಕ್ಷತೆ ವಹಿಸಿದ್ದರು. ಸಂಪನ್ಮೂಲ ವ್ಯಕ್ತಿ ವಲಯ ಮೇಲ್ವಿಚಾರಕಿ ಇಂದಿರಾ ಮೋಹನ್ದಾಸ್ ಮಾಹಿತಿ ನೀಡಿದರು. ಅಂಗನವಾಡಿ ಕಾರ್ಯಕರ್ತೆಯರಾದ ಹರಿಣಾಕ್ಷಿ ಸ್ವಾಗತಿಸಿ, ಸಂಧ್ಯಾ ರಾಜಾರಾಮ್ ವಂದಿಸಿದರು.