Published On: Mon, Feb 17th, 2020

ಕರಿಯಂಗಳ ಆಸರೆ ಸೇವಾ ಪೌಂಡೇಶನ್ ಉದ್ಘಾಟನೆ

ಕೈಕಂಬ: ಬಂಟ್ವಾಳ ತಾಲೂಕಿನ ಕರಿಯಂಗಳ ಗ್ರಾಮದಲ್ಲಿ ಆಸರೆ ಸೇವಾ ಪೌಂಡೇಶನ್ ಎಂಬ ಸಂಸ್ಥೆಯ ಉದ್ಘಾಟನೆಯು ಫೆ.16 ರಂದು ಭಾನುವಾರ ನೆರವೇರಿತು.ಪುಂಚಮೆ ಶ್ರೀ ಕಾಂಪ್ಲೆಕ್ಷ್ ಇದರ ಮಾಲಕ ಚಂದ್ರಹಾಶ ಪಲ್ಲಿಪಾಡಿಯವರ ಆಕಾಂಕ್ಷೆಯಂತೆ 20 ಮಂದಿಯ ತಂಡವನ್ನು ಕಟ್ಟಿಕೊಂಡು ಆಸರೆ ಸೇವಾ ಪಂಂಡೇಶನ್ ಎಂಬ ನಾಮಾಂಕಿತದೊಂದಿಗೆ ಪಾದರ್ಪನೆಗೊಂಡು ಮೊದಲ ದಿನವೇ ಮಾಜಿ ಸಚಿವ ರಮಾನಾಥ ರೈ ಅವರ ಸಮ್ಮುಖದಲ್ಲಿ ಇಬ್ಬರು ಅನಾರೋಗ್ಯದಲ್ಲಿ ಇದ್ದವರಿಗೆ ಧನಸಹಾಯ ನೀಡಲಾಯಿತು.

IMG-20200217-WA0009ಪೊಳಲಿಯ ಪದ್ಮಾವತಿ ಹಾಗೂ ಅಂಗವಿಕಲರಾಗಿದ್ದ ಅಬ್ಬಾಸ್ ಆಲಿ ಗುಂಡಿಕುಮೇರ್ ಇವರಿಗೆ ಧನಸಹಾಯವನ್ನು ನೀಡಲಾಯಿತು.ಆಸರೆ ಸೇವಾ ಪೌಂಡೇಶನ್ ಲೋಗೊ ವನ್ನು ಮಾಜಿ ಸಚಿವ ರಮಾನಾಥ ರೈ ಬಿಡುಗಡೆ ಗೊಳಿಸಿದರು.IMG-20200217-WA0004

ಪೊಳಲಿ ರಾಮಕೃಷ್ಣ ತಪೋವನದ ಸ್ವಾಮಿ ವಿವೇಕಚೈತನ್ಯಾನಂದ ದೀಪ ಬೆಳಗಿಸಿ ಉದ್ಘಾಟಿಸಿದರು. ಮನುಷ್ಯನ ಸೇವೆ ಮಾಡಿದರೇ ದೇವರಸೇವೆ ಮಾಡಿದಂತೆ ನಮ್ಮ ಉದ್ದಾರದೊಂದಿಗೆ ಇತರ ಜನರ ಏಳಿಗೆಯನ್ನು ಬಯಸುವ ಇಲ್ಲಿಯ ಜನರು ಹುಟ್ಟುಹಾಕಿದ ಈ ಸಂಸ್ಥೆಯು ಬೇರೆ ಬೇರೆ ಗ್ರಾಮzಲ್ಲಿಯೂ ಸೇವೆ ಮಾಡುವಂತಾಗಲಿ ಎಂದು ಸ್ವಾಮೀಜಿ ಹೇಳಿದರು.

IMG-20200217-WA0007

IMG-20200217-WA0006

IMG-20200217-WA0005ಬಡಕಬೈಲು ಬದ್ರೀಯಾ ಜುಮಾ ಮಸೀದ್ ಬಹುಇಲ್ಯಾಸ್ ಸಅದಿ ಸಂಸ್ಥೆಗೆ ಶುಭಹಾರೈಸಿದರು. ಈ ಸಂದರ್ಭದಲ್ಲಿ ಜಿಲ್ಲಾ ಪಂ ಸದಸ್ಯ ಚಂದ್ರಪ್ರಕಾಶ್ ಶೆಟ್ಟಿ ತುಂಬೆ,ತಾ.ಪಂ ಉಪಾಧ್ಯಕ್ಷ ಅಬ್ಬಾಸ್ ಆಲಿ , ಪಾಣೆಮಂಗಳೂರು ಬ್ಲಾಕ್ ಅಧ್ಯಕ್ಷ ಸುದೀಪ್ ಕುಮಾರ್ ಶೆಟ್ಟಿ, ಶಶಿ ಮಹಾರಾಜ್ , ಉಮೇಶ್ ಆಚಾರ್ಯ ,ಲಕ್ಷ್ಮೀಶ್ ಶೆಟ್ಟಿ, ಚಂದ್ರಶೇಖರ್ ಬಂಢಾರಿ, ರೋಶನ್ ಪುಂಚಮೆ, ವೀಣಾ ಉಪೇಂದ್ರ ಆಚಾರ್ಯ,ಹರಿಪ್ರಸಾದ್‌ ಶೆಟ್ಟಿ ,ಪ್ರಸಾದ್ ಗರೋಡಿ ಆಸರೆ ಸೇವಾ ಪೌಂಡೇಶನ್ ಇದರ ಸದಸ್ಯರು ಉಪಸ್ಥಿತರಿದ್ದರು. ಚಂದ್ರಾಹಾಶ ಪಲ್ಲಿಪಾಡಿ ಸ್ವಾಗತಿಸಿ ಬಸೀರ್ ಬಡಕಬೈಲ್ ವಂದಿಸಿದರು. ರಾಜುಕೋಟ್ಯಾನ್ ನಿರೂಪಿಸಿದರು.

Leave a comment

XHTML: You can use these html tags: <a href="" title=""> <abbr title=""> <acronym title=""> <b> <blockquote cite=""> <cite> <code> <del datetime=""> <em> <i> <q cite=""> <strike> <strong>

Get Immediate Updates .. Like us on Facebook…

Visitors Count Visitor Counter