Published On: Mon, Feb 17th, 2020

ಸಶಕ್ತ ಭಾರತಕ್ಕೆ ಸದೃಢ ಹೆಜ್ಜೆಗಳು” ರಾಷ್ಟ್ರಮಟ್ಟದ ವಿಚಾರ ಸಂಕಿರಣ

ಬಂಟ್ವಾಳ:  ವಿದ್ಯಾರ್ಥಿಗಳು ನವ ಭಾರತದ ನಿರ್ಮಾಣದಲ್ಲಿ ಮಹತ್ರವಾದ ಪಾತ್ರ ವಹಿಸುವುದರ ಜೊತೆಗೆ ಭಾರತದ ನೈಜವಾದ ಮಣ್ಣಿನ ಸೊಬಗನ್ನು ಸವಿಯುವ ಮೂಲಕ ಜಗತ್ತಿಗೆ ಪಸರಿಸಲು ಮುಂದಾಗಬೇಕು ಎಂದು ಕಲಾವಿದೆ,ನ್ಯಾಯವಾದಿ ಮಾಳವಿಕ ಅವಿನಾಶ್ ಹೇಳಿದರು.  ಕಲ್ಲಡ್ಕ ಶ್ರೀ ರಾಮ ಪ್ರಥಮ ದರ್ಜೆ ಮಹಾವಿದ್ಯಾಲಯದ ವೇದವ್ಯಾಸ ಸಭಾಭವನದಲ್ಲಿ   “ಸಶಕ್ತ ಭಾರತಕ್ಕೆ ಸದೃಢ ಹೆಜ್ಜೆಗಳು” ಎಂಬ ವಿಷಯದಲ್ಲಿ ಸೋಮವಾರ ನಡೆದ  ರಾಷ್ಟ್ರಮಟ್ಟದ ವಿಚಾರ ಸಂಕಿರಣ ಕಾರ್ಯಕ್ರಮವನ್ನು ಉದ್ಘಾಟಿಸಿ  ಮಾತನಾಡಿದ ಅವರು, ಕಲ್ಲಡ್ಕ ಶ್ರೀರಾಮ ವಿದ್ಯಾಕೇಂದ್ರ ಶಿಕ್ಷಣ ಪದ್ಧತಿ ಅದ್ಬುತವಾಗಿದೆ.ಇಲ್ಲಿನ ವಿದ್ಯಾರ್ಥಿಗಳು ಮೈಗೂಡಿಸಿರು ಶಿಸ್ತು  ಅಭಿನಂದನೀಯವಾಗಿದೆ ಎಂದು ಹೇಳಿದರು.

IMG_20200217_140207ಕಾರ್ಯಕ್ರಮಕ್ಕೆ ಮುನ್ನ  ಪ್ರಸ್ತಾವಿಕವಾಗಿ ಮಾತನಾಡಿದ ಪುತ್ತೂರು ವಿವೇಕಾನಂದ ವಿದ್ಯಾವರ್ಧಕ ಸಂಘದ ಅಧ್ಯಕ್ಷ ಕಲ್ಲಡ್ಕ ಡಾ. ಪ್ರಭಾಕರ್ ಭಟ್ ಅವರು ಸೋಲು ಸಾಲ, ಅವಮಾನ, ಅಪಮಾನದಿಂದ ಕಂಗೆಟ್ಟಿದ್ದ ಭಾರತಕ್ಕೆ ಇದೀಗ ಉತ್ತಮ ನಾಯಕ ಸಿಕ್ಕಿರುವುದು ನಮ್ಮ ಭಾಗ್ಯ ಎಂದು ಹೇಳಿದರು.ಜಗತ್ತಿಗೆ ಒಳಿತನ್ನುಂಟುಮಾಡುವ ದೇಶ ಭಾರತ. ಋಷಿ ಪರಂಪರೆಯಲ್ಲಿ ಭಾರತ ಬೆಳೆದು ನಿಂತಿದ್ದು, ಕೃಷಿ ,ಋಷಿ ಸಂಸ್ಕೃತಿಯ ಸದೃಢ ಭಾರತದ ನಿರ್ಮಾಣಕ್ಕಾಗಿ ಉತ್ತಮ ವಿಚಾರಗಳು,ಚಿಂತನೆ ಚರ್ಚೆ ಆಗಬೇಕಾಗಿದೆ, ಅದು ವಿದ್ಯಾರ್ಥಿಗಳ ಮೂಲಕ ಯಶಸ್ವಿಯಾಗಿ ನಡೆಯಬೇಕಾಗಿದೆ ಎಂದು ಹೇಳಿದರು.ಜಗತ್ತಿನ ಅತ್ಯಂತ ಶ್ರೇಷ್ಠ, ಬಲಾಢ್ಯ ಶಕ್ತಿ ಭಾರತದ ಸೈನಿಕರು,ಹೊಂದಿದ್ದು ಪ್ರಸ್ತುತ ದೇಶದಲ್ಲಿ ನಾಯಕತ್ವದ  ಬದಲಾವಣೆಯಿಂದ ದೇಶದ ಎಲ್ಲಾ ವ್ಯವಸ್ಥೆಗಳು ಬದಲಾಗಿದ್ದು,. ಸರ್ವರಿಗೂ ಸಮಾನವಾದ ಗೌರವ, ಅಧಿಕಾರ ಸಿಗುತ್ತಿದೆ ಎಙದರು. ವೇದಿಕೆಯಲ್ಲಿ ಕ್ಯಾಂಪ್ಕೋ ಅಧ್ಯಕ್ಷ ಸತೀಶ್ಚಂದ್ರ, ಚಿಂತಕ ಚೈತ್ರ, ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಬಿ.ವಿ.ವಸಂತ ಕುಮಾರ್,ವಿದ್ಯಾಕೇಂದ್ರದ ಅಧ್ಯಕ್ಷ ನಾರಾಯಣ ಸೋಮಾಯಾಜಿ ,ಶಾಲಾ ಸಂಚಾಲಕ ವಸಂತ ಮಾದವ ಮತ್ತಿತರರು ಉಪಸ್ಥಿತರಿದ್ದರು.ಪ್ರಾಂಶುಪಾಲ ಕೃಷ್ಣ ಪ್ರಸಾದ್ ಸ್ವಾಗತಿಸಿ, ಶಿಕ್ಷಕ ಯತಿರಾಜ್ ಪೆರಾಜೆ ನಿರೂಪಿಸಿ, ವಂದಿಸಿದರು.

 

Leave a comment

XHTML: You can use these html tags: <a href="" title=""> <abbr title=""> <acronym title=""> <b> <blockquote cite=""> <cite> <code> <del datetime=""> <em> <i> <q cite=""> <strike> <strong>

Get Immediate Updates .. Like us on Facebook…

Visitors Count Visitor Counter