Published On: Mon, Feb 17th, 2020

ಹಿಂಸಾತ್ಮಕ ಪ್ರತಿಭಟನೆ ಹಿಂದೆ’ ಕೈ’ ಕೈವಾಡ : ಮಾಳವಿಕಾ

ಬಂಟ್ವಾಳ: ಪೌರತ್ವ ತಿದ್ದುಪಡಿ ಕಾಯ್ದೆ(ಸಿ.ಎ.ಎ.)ಯನ್ನು ಅಕ್ರಮವಾಗಿ ಭಾರತಕ್ಕೆ ಬರುವ ನುಸುಳುಕೋರರನ್ನು ವಾಪಾಸು ಕಳುಹಿಸುವ ಉದ್ದೇಶಕ್ಕಾಗಿ  ಜಾರಿ ಮಾಡಲಾಗಿದ್ದು,ಆದರೆ ಈ ವಿಚಾರವಾಗಿ ಮಂಗಳೂರಿನಲ್ಲಿ ನಡೆದಿರುವ ಹಿಂಸಾತ್ಮಕ ಪ್ರತಿಭಟನೆಯ ಹಿಂದೆ ” ಕೈ” ಕೈವಾಡವಿದೆ ಎಂದು ನ್ಯಾಯವಾದಿ,ಸಾಮಾಜಿಕ ಕಾರ್ಯಕರ್ತೆ ಮಾಳವಿಕಾ ಅವಿನಾಶ್ ಆರೋಪಿಸಿದ್ದಾರೆ.‌

IMG_20200217_140238
ಅವರು ಸೋಮವಾರ ಕಲ್ಲಡ್ಕ ಶ್ರೀ ರಾಮ ವಿದ್ಯಾ ಕೇಂದ್ರದ ವೇದವ್ಯಾಸ ಸಭಾಭವನದಲ್ಲಿ ನಡೆದ  ” ಸಶಕ್ತ ಭಾರತಕ್ಕೆ ಸದೃಢ ಹೆಜ್ಜೆಗಳು ” ಎಂಬ ರಾಷ್ಟ್ರ ಮಟ್ಟದ ವಿಚಾರ ಸಂಕಿರಣದಲ್ಲಿ ‘ಪೌರತ್ವ ಕಾಯ್ದೆ: ಫಟನೆಗಳ ಸುತ್ತಮುತ್ತ’ ಎಂಬ ವಿಷಯದ ಬಗ್ಗೆ ಸಂವಾದ ಕಾರ್ಯಕ್ರಮದಲ್ಲಿ ಮಾತನಾಡುತ್ತಾ ,ಪ್ರಜಾಪ್ತಭುತ್ವದಲ್ಲಿ    ಶಾಂತಿಯುತವಾದ ಪ್ರತಿಭಟನೆಗೆ ಎಲ್ಲರಿಗೂ ಅವಕಾಶವಿದ್ದು, ಕಾಂಗ್ರೆಸ್ ಮತ್ತು ಕೆಲ ಪಕ್ಷಗಳ ಷಡ್ಯಂತ್ರ,ಪಿತೂರಿಯಿಂದ ಗೊಂದಲ ಸೃಷ್ಟಿಯಾಗಿದೆ ಎಂದು ಅಪಾದಿಸಿದರು. ದೇಶದಲ್ಲಿ ಅರಾಜಕತೆಯನ್ನು ಉಂಟುಮಾಡುವ ಉದ್ದೇಶದಿಂದ ಹಿಂಸಾಚಾರ ಮಾಡಲಾಗಿದೆ.    ಬಹಳ ವರ್ಷದಿಂದಲೂ ಭಾರತೀಯ ಜನತಾಪಕ್ಷದ ಪ್ರಣಾಳಿಕೆಯಲ್ಲಿಯೇ ಈ ವಿಚಾರ ಇತ್ತು, ಸಂಸತ್ ಅಧಿವೇಶನದಲ್ಲಿ  ಅಂಗೀಕಾರವಾಗಿ ಜಾರಿಯಾಗಿರುವ  ಕಾಯ್ದೆ ಇದಾಗಿದ್ದು,ಯಾವ ಸಮುದಾಯವನ್ನು ಗುರಿಯಾಗಿಸಿ ಈ ಕಾಯ್ದೆಯನ್ನು ಮಾಡಿಲ್ಲ ಎಂದ ಅವರು ಈ ಕಾಯ್ದೆಯ ಕುರಿತಾಗಿ ಪ್ರತಿಯೊಬ್ಬರು ಓದಿ ತಿಳಿದುಕೊಳ್ಳಬೇಕು ಎಂದು ಮಾಳವಿಕ ಅವಿನಾಶ್ ಹೇಳಿದರು.ದೇಶದ ಎಲ್ಲಾ ಸಮಸ್ಯೆಗಳನ್ನು ನಿವಾರಣೆ ಮಾಡುವ ನಿಟ್ಟಿನಲ್ಲಿ ಭಾರತೀಯ ಜನತಾ ಪಾರ್ಟಿ ಕೆಲಸಮಾಡುತ್ತಿದೆ. ಸಂವಿಧಾನ, ರಾಷ್ಟ್ರಕ್ಕೆ  ಬದ್ಧವಾಗಿ ಕಾನೂನು ತರಲಾಗಿದೆ, ಯಾವುದೇ ಕಾರಣಕ್ಕು ಈ ಕಾಯ್ದೆಯನ್ನು ವಾಪಾಸು ಪಡೆಯುವ ಪ್ರಶ್ನೆಯಿಲ್ಲ ಎಂದು ಪ್ರಧಾನಿಯವರು ಪುನರುಚ್ಚರಿಸಿದ್ದಾರೆ ಎಂದು ಹೇಳಿದ ಅವರು ಸಿ.ಎ.ಎ. ವಿರೋಧಿಗಳು ಅಂಬೇಡ್ಕರ್ ಬರೆದ ಸಂವಿಧಾನವನ್ನು ಓದಿಕೊಳ್ಳಲಿ ಎಂದು ಮಾಳವಿಕಾ ಹೇಳಿದರು.

Leave a comment

XHTML: You can use these html tags: <a href="" title=""> <abbr title=""> <acronym title=""> <b> <blockquote cite=""> <cite> <code> <del datetime=""> <em> <i> <q cite=""> <strike> <strong>

Get Immediate Updates .. Like us on Facebook…

Visitors Count Visitor Counter