Published On: Mon, Feb 17th, 2020

ನವಭಾರತ ನಿರ್ಮಾಣಕ್ಕೆ ಸಹಕಾರದ ಅಗತ್ಯ: ಬಿ.ಎಲ್.ಸಂತೋಷ್

ಬಂಟ್ವಾಳ: 2022 ಕ್ಕೆ ಭಾರತ 75 ವರ್ಷವನ್ನು ತುಂಬಲಿದ್ದು,ಈ ಸಂದರ್ಭದಲ್ಲಿ ನವಭಾರತದ ನಿರ್ಮಾಣಕ್ಕೆ ಇಡೀ ಸಮಾಜದ ಜನರ ಸಹಕಾರದ ಅಗತ್ಯವಿದೆ ಎಂದು ಬಿಜೆಪಿಯ ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿ ಬಿ.ಎಲ್.ಸಂತೋಷ್ ಹೇಳಿದ್ದಾರೆ.ಕಲ್ಲಡ್ಕ ಶ್ರೀರಾಮ ವಿದ್ಯಾಕೇಂದ್ರದ ಪ್ರಥಮ ದರ್ಜೆ ಮಹಾವಿದ್ಯಾಲಯದ ವೇದವ್ಯಾಸ ಸಭಾಭವನದಲ್ಲಿ “ಸಶಕ್ತ ಭಾರತಕ್ಕೆ ಸದೃಢ ಹೆಜ್ಜೆಗಳು” ಎಂಬ ವಿಷಯದಲ್ಲಿ ಸೋಮವಾರ ನಡೆದ ರಾಷ್ಟ್ರ ಮಟ್ಟದ ವಿಚಾರ ಸಂಕಿರಣ ಕಾರ್ಯಕ್ರಮದಲ್ಲಿ “ಸಶಕ್ತ ಭಾರತ: ಆರ್ಥಿಕತೆ ಮತ್ತು ರಕ್ಷಣೆಯ ಪಾತ್ರ” ಎಂಬ ವಿಚಾರದಲ್ಲಿ  ಸಂವಾದದಲ್ಲಿ ಭಾಗವಹಿಸಿ ಅವರು ಮಾತನಾಡಿದ ಅವರು, ತಂತ್ರಜ್ಞಾನದ ಮೂಲಕ ಭ್ರಷ್ಟಾಚಾರ ರಹಿತ ಆಡಳಿತದ ಕನಸು ಕಂಡಿರುವ ಪ್ರಧಾನಿ ಮೋದಿಯವರ ಆ ಕನಸು ನನಸಾಗಲು ನಾವೆಲ್ಲರೂ ಕೈಜೋಡಿಸಬೇಕಾಗಿದೆ  ಎಂದರು.
IMG_20200217_140258 ಜಗತ್ತು ನಿಂತ ನೀರಲ್ಲ, ನಿಲ್ಲಿಸಲು ಯಾರಿಂದಲೂ ಕೂಡ ಸಾಧ್ಯವಿಲ್ಲ, ವಿರೋಧಕ್ಕೆ ಸ್ವರ ಗಟ್ಟಿಇರುತ್ತದೆ, ಬೆಂಬಲ ಮಾತ್ರ ಮೌನವಾಗಿರುತ್ತದೆ ಎಂಬ ಕಲ್ಪನೆ ನಮ್ಮಲ್ಲಿರಬೇಕು ಎಂದು  ಸಂತೋಷ್ಜಗತ್ತು ಮಹತ್ತರವಾದ ಬದಲಾವಣೆಯ ಕಡೆಗೆ ಹೆಜ್ಜೆಯನ್ನಿಡುತ್ತಿದೆ ಎಂದರು.   ದೇಶದಲ್ಲಿ ಮೊಬೈಲ್ ಸಹಿತ, ಆಟೋಮೊಬೈಲ್, ಎಲೆಕ್ಟ್ರಾನಿಕ್ ತಯಾರಿಕಾ ವಸ್ತುಗಳಲ್ಲಿ ಹೊಸ ಹೊಸ ಪ್ರಯೋಗಗಳ ಮೂಲಕ ಮಹತ್ತರವಾದ ಬದಲಾವಣೆ ತರಲಾಗಿದೆ. 100 ಕ್ಕೆ 90ಶೇಕಡಾದಷ್ಟು ಮೊಬೈಲ್ ತಯಾರಿಕಾ ಸಂಸ್ಥೆಗಳು ಮೇಕ್ ಇನ್ ಇಂಡಿಯಾ ಆಗಿದೆ. ಮುಂದಿನ ದಿನಗಳಲ್ಲಿ ದೇಶದ ಪ್ರತಿಯೊಂದು ಉತ್ಪಾದನೆಗಳು ಮೇಕ್ ಇಂಡಿಯಾ ಅಗುವ ಎಲ್ಲಾ ಸಾಧ್ಯತೆಗಳಿವೆ ಎಂದು ವಿಶ್ವಾಸವ್ಯಕ್ತಪಡಿಸಿದರು.ದೇಶದ ಜನರು ಸ್ವಾಭಿಮಾನಿ, ಸ್ವಾವಲಂಬಿ ಜೀವನ ಮಾಡಲು ಅವಕಾಶ ನೀಡಬೇಕೆಂಬ ನಿಟ್ಟಿನಲ್ಲಿ ದೇಶ ಆರ್ಥಿಕವಾಗಿ ದಿಟ್ಟ ಹೆಜ್ಜೆಗಳನ್ನು ಇಟ್ಟಿದೆ ಎಂದ ಸಂತೋಷ್ ಎಲ್ಲಾ ಸವಾಲನ್ನು ಎದುರಿಸಲು ಭಾರತ ಸಶಕ್ತವಾಗಿದೆ ಎಂದು ಹೇಳಿದರು.ನಿರ್ಣಾಯಕವಾದ ನಾಯಕತ್ವ, ಅತ್ಯಂತ ಉಚ್ಚಮಟ್ಟದ ಸಮನ್ವಯತೆ, ಬಲಿಷ್ಠ ಗೂಡಾಚರದ ವ್ಯವಸ್ಥೆ ನಮ್ಮ ದೇಶದಲ್ಲಿದ್ದು,
ಪ್ರಸ್ತುತ ಸೈನಿಕರಲ್ಲಿ ಆಧುನಿಕ ರೀತಿಯ ಸಾಧನಗಳು ಇವೆಯಾದರೂ ಇನ್ನಷ್ಟು ಉಪಕರಣಗಳ ಜೋಡಣೆ ವ್ಯವಸ್ಥೆ ಗಳು ನಡೆಯುತ್ತಿದೆ ಎಂದು ಹೇಳಿದರು.  ಸೈಬರ್ ಕ್ರೈಮ್ ಗೆ ಡೇಮಾ ಸೆಕ್ಯುರಿಟಿ ಕಮಿಟಿ ಮಾಡಲಾಗಿದ್ದು, ಭಾರತವು ಮುಂದಿನ ದಿನಗಳಲ್ಲಿ ಸಂಪೂರ್ಣವಾಗಿ ಕಾರ್ಯ ನಿರ್ವಹಿಸಲಿದೆ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು. ಸುನಿಲ್ ಸಂವಾದ ನಡೆಸಿಕೊಟ್ಟರು.

Attachments area

 

Leave a comment

XHTML: You can use these html tags: <a href="" title=""> <abbr title=""> <acronym title=""> <b> <blockquote cite=""> <cite> <code> <del datetime=""> <em> <i> <q cite=""> <strike> <strong>

Get Immediate Updates .. Like us on Facebook…

Visitors Count Visitor Counter