Published On: Mon, Feb 17th, 2020

ಕುಪ್ಪೆಪದವು ದುರ್ಗೇಶ್ವರೀ ದೇವಳ ವಾರ್ಷಿಕ ಜಾತ್ರೆ ಸಂಪನ್ನ.

ಕುಪ್ಪೆಪದವು:ಶ್ರೀ ದುರ್ಗೇಶ್ವರೀ ದೇವೀ ದೇವಸ್ಥಾನದ ವಾರ್ಷಿಕ ಜಾತ್ರಾ ಮಹೋತ್ಸವದ ಅಂಗವಾಗಿ ಶನಿವಾರ ಬೆಳಿಗ್ಗೆ ಎಡಪದವು ಬ್ರಹ್ಮಶ್ರೀ ರಾಧಾಕೃಷ್ಣ ತಂತ್ರಿಗಳ ಉಪಸ್ಥಿತಿಯಲ್ಲಿ ,ಪ್ರಧಾನ ಅರ್ಚಕ ವೇದಮೂರ್ತಿ ಸದಾಶಿವ ಕಾರಂತರ ನೇತೃತ್ವದಲ್ಲಿ ಚಂಡಿಕಾ ಯಾಗ ,ಮಧ್ಯಾಹ್ನ ಮಹಾಪೂಜೆ ಉತ್ಸವ ಬಲಿ ಯ ನಂತರ ಮಹಾ ಅನ್ನಸಂತರ್ಪಣೆ ನಡೆಯಿತು,

20200215_222758ರಾತ್ರಿ 7 ಗಂಟೆಗೆ ಮಹಾಗಣಪತಿ ಮತ್ತು ದುರ್ಗೇಶ್ವರೀ ದೇವಿಗೆ ರಂಗಪೂಜೆ ಸೇವೆ ಉತ್ಸವ ಮಹಾಪೂಜೆ ,ಉತ್ಸವ ಬಲಿ ,ಮುತ್ತೂರು ,ಮಾಣಿಪಳ್ಳ ಸವಾರಿ ,ಕಟ್ಟೆ ಪೂಜೆ ನಡೆದು ಶ್ರೀದೇವೀ ಮತ್ತು ಕೊಡಮಣಿತ್ತಾಯ ದೈವದ ಭೇಟಿ ನಡೆಯಿತು ,ನಂತರ ಕೊಡಮಣಿತ್ತಾಯ ದೈವದ ನೇಮೋತ್ಸವ ಜರಗಿತು,ಆದಿತ್ಯವಾರ ಬೆಳಿಗ್ಗೆ 10 ಗಂಟೆಗೆ ನವಕ ಪ್ರದಾನ ,ಸಂಪ್ರೋಕ್ಷಣೆ ಮತ್ತು ಪ್ರಸಾದ ವಿತರಣೆಯೊಂದಿಗೆ ಮೂರು ದಿನಗಳ ವಾರ್ಷಿಕ ಜಾತ್ರಾಮಹೋತ್ಸವ ಸಂಪನ್ನಗೊಂಡಿತು ,

20200216_102956ಆಡಳಿತ ಮೊಕ್ತೇಸರ ಪ್ರವೀಣ್ ಕುಮಾರ್ ಅಗರಿ ,ಉಪ ಆಡಳಿತ ಮೊಕ್ತೇಸರ ತುಳಸೀದಾಸ್ ಅಮೀನ್ ,ಕಾರ್ಯದರ್ಶಿ ಉಮೇಶ್ ಅಮೀನ್ ನಾಗಂದಡಿ ,ಕೋಶಾಧಿಕಾರಿ ಕೆ.ಪುರುಷೋತ್ತಮ್,ಉಪಕಾರ್ಯದರ್ಶಿ ವಸಂತಿ ಅಗರಿ ಹಾಗೂ ಸದಸ್ಯರಾದ ಸಂಜೀವ ಶೆಟ್ಟಿ ,ಚಂದ್ರಹಾಸ್ ಶೆಟ್ಟಿ ,ವಿಕ್ರಂ ,ಕೆ.ರಾಮಣ್ಣ ನಾಯ್ಕ್ ಸೇರಿದಂತೆ ದುರ್ಗೇಶ್ವರೀ ಸೇವಾ ಸಮಿತಿಯ ಪದಾಧಿಕಾರಿಗಳು ಉಪಸ್ಥಿತರಿದ್ದರು.ಸಾಂಸ್ಕ್ರತಿಕ ಕಾರ್ಯಕ್ರಮದ ಅಂಗವಾಗಿ ಶನಿವಾರ ಮಧ್ಯಾಹ್ನ ,ರಂಗಸಿರಿ ಸಾಂಸ್ಕ್ರತಿಕ ವೇದಿಕೆ(ರಿ)ಬದಿಯಡ್ಕ ,ಯಕ್ಷಗುರು ಸೂರ್ಯನಾರಾಯಣ ಪದಕಣ್ಣಾಯ ಇವರ ಯಕ್ಷಗಾನ ಕೇಂದ್ರದ ವಿದ್ಯಾರ್ಥಿಗಳಿಂದ “ಮೋಕ್ಷ ಸಂಗ್ರಾಮ “ಮತ್ತು ಶ್ರೀದುರ್ಗೆಶ್ವರಿ ಯಕ್ಷಗಾನ ಮಂಡಳಿ(ರಿ)ಇದರ ಮತ್ತು ಅತಿಥಿ ಕಲಾವಿದರ ಕೂಡುವಿಕೆಯಲ್ಲಿ “ಕೋರ್ದಬ್ಬು ತನ್ನಿಮಾನಿಗ”ಎಂಬ ಯಕ್ಷಗಾನ ಪ್ರದರ್ಶನ ಜರಗಿತು.

Leave a comment

XHTML: You can use these html tags: <a href="" title=""> <abbr title=""> <acronym title=""> <b> <blockquote cite=""> <cite> <code> <del datetime=""> <em> <i> <q cite=""> <strike> <strong>

Get Immediate Updates .. Like us on Facebook…

Visitors Count Visitor Counter