Published On: Tue, Feb 11th, 2020

ರೈತರ ಮೇಳ ಮತ್ತು ವಿಶ್ವ ದ್ವಿದಳ ಧಾನ್ಯ ದಿನಾಚರಣೆ

ಶ್ರೀನಿವಾಸಪುರ: ಯಾವದೇಶದಲ್ಲಿರೈತರಿಗೆಗೌರವ ಸಿಗುವುದಿಲ್ಲವೋ ಆ ದೇಶಉದ್ದಾರವಾಗುವುದಿಲ್ಲ, ನಮ್ಮದೇಶದಲ್ಲಿಇಲ್ಲಿಯತನಕರೈತರಿಗೆಗೌರವ ಸಿಕ್ಕದೆ ಇರುವುದು ವಿಷಾದವಾಗಿದೆಎಂದು ಶಾಸಕ ರಮೇಶ್‍ಕುಮಾರ್ ತಿಳಿಸಿದರು.

20200210_132515

ತಾಲ್ಲೂಕಿನ ಕಸಬಾ ಹೋಬಳಿಯ ಪಾಳ್ಯ ಗ್ರಾಮದಲ್ಲಿ ಕೃಷಿ ಇಲಾಖೆಯ 2019-20ನೆ ಸಾಲಿನ ಮಣ್ಣು ಆರೋಗ್ಯಅಭಿಯಾನಯೋಜನೆಯಡಿ ರೈತರ ಮೇಳ ಮತ್ತು ವಿಶ್ವ ದ್ವಿದಳ ಧಾನ್ಯ ದಿನಾಚರಣೆಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಶಾಸಕ ರಮೇಶ್‍ಕುಮಾರ್, ಈ ದೇಶದಲ್ಲಿ ಭಾಚಣಿಗೆಯಿಂದಹಿಡಿದು ರಸಗೊಬ್ಬರಗಳು ಲೆದರ್ ಶೂ ಚಪ್ಪಲಿ, ಸೋಪ್ ಪೇಶ್ಟ್ ಎಲ್ಲವುಗಳನ್ನೂ ತಯಾರು ಮಾಡುವ ಕಂಪನಿ ಮಾಲೀಕನು ಇವುಗಳಿಗೆ ದರವನ್ನು ನಿಗಧಿಪಡಿಸುತ್ತಾನೆ, ಆದರೆರೈತ ಬೆವರು ಸುರಿಸಿ ದುಡಿಮೆ ಮಾಡಿ ಬೆಳೆದಂತ ಸಿರಿಧಾನ್ಯಗಳು ಟೊಮೆಟೋ ಮಾವು, ಯಾವುದೆ ಕೃಷಿ ಬೆಳೆಗಳಿಗೆ ರೈತನುದರವನ್ನು ನಿಗಧಿಪಡಿಸುವ ಸ್ವಾತಂತ್ರ್ಯಅಥವಾಅಧಿಕಾರಇಲ್ಲಿಯತನಕ ಬಂದಿಲ್ಲ. ಈ ದೇಶದ ಬೆನ್ನೆಲುಬೆಂದುಕರೆಯುವರೈತನಿಗೆ ಈ ಧರ ನಿಗಧಿಪಡಿಸುವ ಭಾಗ್ಯಇನ್ನು ಲಭಿಸದೆಇರುವುದುಇನ್ನೂ ವಿಷಾಧವಾಗಿದೆಎಂದರು. ಕೃಷ್ಣ ಬೈರೇಗೌಡರವರು ಕೃಷಿ ಸಚಿವರಾಗಿದ್ದಾಗಹಲವಾರುರೈತರಜನಪರ ಕಾರ್ಯಕ್ರಮಗಳನ್ನು ರೂಪಿಸಿದ್ದು, ಈ ಯೋಜನೆಗಳು ಚಾಲತಿಯಲ್ಲಿ ಬರುವಷ್ಟರಲ್ಲಿ ಚುನಾವಣೆಗಳು ಬಂದು ಸರ್ಕಾರಗಳು ಬದಲಾಯಿತು. ಮುಂದೆಯಾದರೂ ಆಳುವ ಸರ್ಕಾರಗಳು ರೈತರಿಗೆ ಈ ಅವಕಾಶವನ್ನು ಮಾಡಿಕೊಡಬೇಕು, ಒಬ್ಬಕಂಪನಿಯ ಮಾಲೀಕತಾನುತಯಾರು ಮಾಡುವ ವಸ್ತುಗಳಿಗೆ ಯಾವರೀತಿದರವನ್ನು ನಿಗದಿಪಡಿಸುತ್ತಾನೋ, ಹಾಗೆಯೆರೈತನು ಬೆಳೆಯುವ ಬೆಳೆಗಳಿಗೆ ರೈತನೆ ನಿಗಧಿಪಡಿಸಬೇಕು. ಎಲ್ಲಾತಾಲ್ಲೂಕು ಮತ್ತುಜಿಲ್ಲಾ ಕೇಂದ್ರಗಳಲ್ಲಿ ಕೋಲ್ಡ್ ಸ್ಟ್ರೋರೇಜ್ ಗಳು ಪ್ರಾರಂಭವಾಗಲೆ ಬೇಕು, ರೈತರು ಬೆಳೆಯುವ ಬೆಳೆಗಳಿಗೆ ಬೆಲೆ ಇಲ್ಲದ ಸಂದರ್ಭದಲ್ಲಿಕೋಲ್ಡ್ ಸ್ಟೋರೇಜ್ ಗಳಲ್ಲಿ ಉಗ್ರಾಣ ಮಾಡಿಕೊಂಡು ಸರ್ಕಾರರೈತನಿಗೆದರವನ್ನುಕಟ್ಟಿಕೊಡಲು ಮುಂದಾಗಬೇಕಾಗಿದೆಎಂದರು.
ಹಾಲು ಉತ್ಪಾದಕರ ಸಂಘಗಳು ಕಾರ್ಯದರ್ಶಿಗೆ ಅಧ್ಯಕ್ಷರಿಗೆ ಮಾತ್ರ ಸೀಮಿತವಾಗಿಲ್ಲ, ಇದು ಹಾಲು ಕರೆಯುವಎಲ್ಲಾರೈತರಿಗೆಆಶ್ರಯವಾಗಿದೆ. ಉತ್ಪಾದಕರ ಸಹಕಾರ ಸಂಘಗಳು ಹಾಲು ಉತ್ಪಾದಕರಿಗೆ ಸಂಜೀವಿನಿಯಾಗಿರಬೇಕು, ರೈತನಿಗೆಯಾವುದೆ ಪಕ್ಷ ಬೇದವಿಲ್ಲ, ರೈತನು ಸ್ವಾಭಿಮಾನದಿಂದ ಬದುಕಲುತಲೆಎತ್ತಿಜೀವಿಸಲು ನಾವೆಲ್ಲರೂರೈತನಿಗೆ ಸಹಕರಿಸಿ ಪೆÇ್ರೀತ್ಸಾಹ ಮಾಡೋಣಎಂದು ತಿಳಿಸಿದರು.
ಕಾಲ ಬದಲಾದಂತೆ ಮರದ ನೇಗಿಲು ಕಣಗಳು, ಹೋಗಿ ಬದಲಾಗಿ ಹೊಸ ಹೊಸ ವೈಜ್ನಾನಿಕಆಧುನಿಕ ಕೃಷಿ ಯಂತ್ರೋಪಕರಣಗಳು ಕೃಷಿ ಇಲಾಖೆಯವರು ಇವುಗಳನ್ನು ರೈತರಿಗಾಗಿರಿಯಾಯಿತಿದರದಲ್ಲಿ ನೀಡುತ್ತಿದೆ, ಇವುಗಳನ್ನು ಬಳಕೆ ಮಾಡಿಕೊಂಡುರೈತರು ಮುಂದೆ ಬರಬೇಕಾಗಿದೆ, ಮನುಷ್ಯನಆರೋಗ್ಯ ಸ್ಥತಿ ಗತಿಗಳ ಬಗ್ಗೆ ವೈದ್ಯರ ಬಳಿ ತೋರಿಸಿಕೊಳ್ಳುತ್ತೇವೆ, ಹಾಗೆಯೆ ಭೂಮಿಯ ಮಣ್ಣಿನ ಫಲವತ್ತತೆ ಮಾಡಲು ಕೃಷಿ ವಿಜ್ನಾನಿಗಳು ಬಂದು ನಿಂತಿದ್ದಾರೆ. ಆಧುನಿಕಯುಗದಲ್ಲಿ ಕೃಷಿ ಇಲಾಖೆಯ ಅಧಿಕಾರಿಗಳು ಮತ್ತು ವಿಜ್ನಾನಿಗಳ ಸಲಹೆಗಳನ್ನು ಪಡೆದುರೈತರು ಕೆಲಸ ಮಾಡಬೇಕೆಂದು ತಿಳಿಸಿ ಕೃಷಿ ಇಲಾಖೆಯಕಾರ್ಯ ವೈಕರಿಯ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು. ರೈತರುಆತ್ಮಹತ್ಯೆಮಾಡಿಕೊಳ್ಲಲು ಹೋಗಬೇಡಿ:ಈ ಭಾಗದಲ್ಲಿ ಕೆರೆಗಳಲ್ಲಿ ನೀರಿಲ್ಲ, ಸಮಯಕ್ಕೆ ಮಳೆಯಿಲ್ಲ. ಆದರೂ ಸಹ ನೆರೆ-ಹೊರೆಯವರನ್ನುಕಂಡುವಿಲಾಸಿ ಜೀವನಗಳಿಗೆ ಮೊರೆ ಹೋಗುತ್ತೀರ, ದೊಡ್ಡಕಲ್ಯಾಣ ಮಂಟಪಗಳಲ್ಲಿ ಸಾಲ ಸೋಲ ಮಾಡಿ ಮದುವೆ ಕಾರ್ಯಗಳನ್ನು ಮಾಡಿಸುತ್ತೀರ, ಆಸಿಗೆ ಇದ್ದಷ್ಟು ಕಾಲು ಚಾಚೋಣ ನಮ್ಮತಂದೆ ತಾಯಿಗಳು ನಮಗೆ ಚಿಪ್ಪು ನೀಡಿಲ್ಲ, ನಮ್ಮ ಮಕ್ಕಳಿಗೂ ನಾವು ಯಾವುದೆಕಾರಣಕ್ಕೂಚಿಪ್ಪು ನೀಡದೆ ನಮ್ಮ ಮಕ್ಕಳನ್ನು ಸ್ವಾಭಿಮಾನದಿಂದ ಬೆಳೆಸಿ ಗುಣಾತ್ಮಕ ಶಿಕ್ಷಣವನ್ನು ನೀಡಿಉತ್ತಮ ನಾಗರೀಕರಾಗಿ ಬೆಳೆಯಲು ನಾವೆಲ್ಲರೂ ಬದುಕಬೇಕೆಂದು ತಿಳಿಸಿದರು.
ಕೃಷಿ ಇಲಾಖೆಯ ಸಹಾಯಕ ನಿರ್ದೇಶಕ ಎಂ. ಧನಂಜಯ ಮಾತನಾಡಿ ಸರ್ಕಾರದಿಂದ ಬರುವ ಕೃಷಿ ಸಮಗ್ರ ಕೃಷಿ ಅಭಿಯಾನಯಾಂತ್ರೀಕರಣ ಸಲಕರಣೆಗಳು, ಆತ್ಮಾಯೋಜನೆ ಪಿ.ಎಂ.ಕೆ.ಎಸ್.ವೈ. ಹಲವಾರು ಯೋಜನೆಗಳ ಸಮಗ್ರ ಮಾಹಿತಿಯನ್ನು ವೇದಿಕೆಯಲ್ಲಿ ತಿಳಿಸಿದರು. ನಮ್ಮ ಕೃಷಿ ಇಲಾಖೆಯಿಂದರೈತರಿಗೆ ಎಸ್.ಸಿ. ಟಿ.ಎಸ್.ಪಿ. ಸಾಮಾನ್ಯ ಒಳಒಂಡಂತೆ ಅನೇಕ ಯೋಜನೆಗಳನ್ನು ಸರ್ಕಾರಜಾರಿಗೆತಂದಿದೆ. ಇದನ್ನು ಉಪಯೋಗಿಸಿಕೊಂಡು ತಮ್ಮಜೀವನವನ್ನುಉತ್ತಮ ಪಡಿಸಿಕೊಳ್ಳಬೇಕೆಂದು ತಿಳಿಸಿದರು.
ಇದೆ ಸಮಯದಲ್ಲಿಜಿಲ್ಲಾ ಮತ್ತುತಾಲ್ಲೂಕು ಮಟ್ಟದಆಯ್ದಶ್ರೇಷ್ಠ ರೈತರಿಗೆ ಕೃಷಿ ಪ್ರಶಸ್ತಿ ಪ್ರಮಾಣ ಪತ್ರಗಳನ್ನು ವಿತರಿಸಿ ಅಭಿನಂದಿಸಲಾಯಿತು. ಹಾಗೂ ಇದೆ ಸಮಯದಲ್ಲಿರೈತರಿಗೆ ಮಣ್ಣಿನಆರೋಗ್ಯ ಕಾರ್ಡುಗಳನ್ನು ವಿತರಿಸಿದರು.ಇದೆ ಸಮಯದಲ್ಲಿತಾಲ್ಲೂಕು ಪಂಚಾಯಿತಿಅಧ್ಯಕ್ಷ ನರೇಶ್, ಜಿಲ್ಲಾ ಪಂಚಾಯಿತಿ ಸದಸ್ಯಗೋವಿಂದಸ್ವಾಮಿ, ಪಿ.ಎಲ್.ಬ್ಯಾಂಕ್‍ಅಧ್ಯಕ್ಷಅಶೋಕ್, ಎ.ಪಿ.ಎಂ.ಸಿ. ಅಧ್ಯಕ್ಷರಾಜೇಂದ್ರ ಪ್ರಸಾದ್,ಎ.ಪಿ.ಎಂ.ಸಿ ಮಾಜಿಅಧ್ಯಕ್ಷಿಣಿ ಹಾಲಿ ಸದಸ್ಯೆ ಶಾಮಲ, ಗಾಂಡ್ಲಹಳ್ಳಿ ಶಶಿ ಕುಮಾರ್, ದ್ವಾರಸಂದ್ರ ಮುನಿವೆಂಕಟಪ್ಪ, ಕರ್ನಾಟಕರೈತ ಸೇನೆಯಜಿಲ್ಲಾ ಕಾರ್ಯದರ್ಶಿ ಚಲ್ದಿಗಾನಹಳ್ಳಿ ಪ್ರಭಾಕರಗೌಡ,ರಾಯಲಪಾಡು ಬ್ಲಾಕ್‍ಕಾಂಗ್ರೆಸ್‍ಅಧ್ಯಕ್ಷ ಸಂಜಯರೆಡ್ಡಿ, ಕೊಂಡಾಮರಿಅಪ್ಪಿರೆಡ್ಡಿ, ಮುಖಂಡರಾದ ಕೆ.ಕೆ. ಮಂಜುನಾಥ್, ಪಾಳ್ಯ ಗೋಪಾಲಾರೆಡ್ಡಿ, ಯಲವಕುಂಟೆ ಬೈರಾರೆಡ್ಡಿಡಿ.ಸಿ.ಸಿ. ಬ್ಯಾಂಕ್‍ನಿರ್ದೇಶಕ ವೆಂಕಟರೆಡ್ಡಿ, ಕೃಷಿ ಇಲಾಖೆಯ ಉಪ ನಿರ್ದೇಶಕಿ ಭವ್ಯರಾಣಿ, ವಿಜ್ನಾನಿ ಡಾ: ಅನಿಲ್ ಕುಮಾರ್, ತಾಲ್ಲುಕುರೈತ ಸಂಪರ್ಕ ಕೇಂದ್ರಗಳ ಕೃಷಿ ಅಧಿಕಾರಿಗಳಾದ ಮಂಜುನಾಥ್, ನಾಗಾರ್ಜುನ ಬಾಬು, ರಘು, ಸುದರ್ಶನ್, ಯಶಸ್ವಿನಿ ಮಹಿಳಾ ಜಿಲ್ಲಾ ಕಾರ್ಯದರ್ಶಿ ನಾಗವೇಣಿ, ಕೃಷಿ ಇಲಾಖೆಯ ಸಿಬ್ಬಂದಿ ಹಾಜರಿದ್ದರು.

Leave a comment

XHTML: You can use these html tags: <a href="" title=""> <abbr title=""> <acronym title=""> <b> <blockquote cite=""> <cite> <code> <del datetime=""> <em> <i> <q cite=""> <strike> <strong>

Get Immediate Updates .. Like us on Facebook…

Visitors Count Visitor Counter