ಫೆ.7-8 ಕೊಡೆತ್ತೂರು ಕೋರ್ದಬ್ಬು ದೈವಸ್ಥಾನ ವಾರ್ಷಿಕ ನೇಮ
ಕಿನ್ನಿಗೋಳಿ:ಕೊಡೆತ್ತೂರು ಕೋರ್ದಬ್ಬು ದೈವಸ್ಥಾನದಲ್ಲಿ ಫೆ. 7 ರಿಂದ ಫೆ.8ರ ವರೆಗೆ ವಾರ್ಷಿಕ ನೇಮ ನಡೆಯಲಿದೆ. ಫೆ.7 ಶುಕ್ರವಾರ ಬೆಳಿಗ್ಗೆ 9.30 ಗಂಟೆಗೆ ಸಾರ್ವಜನಿಕ ಸತ್ಯನಾರಾಯಣ ಪೂಜೆ, ಅನ್ನಸಂತರ್ಪಣೆ, ಸಂಜೆ 6.00ಕ್ಕೆ ಮನೋರಂಜನಾ ಕಾರ್ಯಕ್ರಮ ಮತ್ತು ಧಾರ್ಮಿಕ ಸಭಾ ಕಾರ್ಯಕ್ರಮ. ರಾತ್ರಿ 10.30 ಗಂಟೆಗೆ ಶ್ರೀ ಕೋರ್ದಬ್ಬು ಹಾಗೂ ತನ್ನಿಮಾನಿಗ ದೈವಗಳ ನೇಮ. ಫೆ. 8 ಶನಿವಾರ ಬೆಳಿಗ್ಗೆ 6.00 ಗಂಟೆಗೆ ಶ್ರೀ ಧೂಮಾವತಿ ಬಂಟ ದೈವಗಳ ನೇಮ ನಡೆಯಲಿದೆ ಎಂದು ಸಮಿತಿಯ ಪ್ರಕಟಣೆ ತಿಳಿಸಿದೆ.