Published On: Mon, Feb 3rd, 2020

ಕಟೀಲು ಬ್ರಹ್ಮಕಲಶೋತ್ಸವದ ಧಾರ್ಮಿಕ ಸಭೆ

ಕಟೀಲು:ವಿದ್ಯೆ ವಿನಯದಿಂದ ದೇವರ ಅನುಗ್ರಹ ಸಿಗುತ್ತದೆ ನಮ್ಮಲ್ಲಿನ ಅಹಂಕಾರ ತಾಮಸ ಗುಣಗಳನ್ನು ವರ್ಜಿಸಬೇಕು ಎಂದು ಉಡುಪಿ ಜಗದ್ಗುರು ಮಧ್ವಾಚಾರ್ಯ ಮೂಲ ಮಹಾಸಂಸ್ಥಾನ ಕೃಷ್ಣಾಪುರ ಮಠದ ಶ್ರೀ ವಿದ್ಯಾಸಾಗರ ತೀರ್ಥ ಸ್ವಾಮೀಜಿ, ಹೇಳಿದರು. ಕಟೀಲು ಬ್ರಹ್ಮಕಲಶೋತ್ಸವದ ಅಂಗವಾಗಿ ಭ್ರಾಮರೀ ಸಭಾಂಗಣದಲ್ಲಿ ಶನಿವಾರ ನಡೆದ ಕೋಟಿ ಜಪ ಯಜ್ಞದ ಧಾರ್ಮಿಕ ಸಭಾ ಕಾರ್ಯಕ್ರಮದಲ್ಲಿ ಆಶೀರ್ವಚನ ನೀಡಿ ಮಾತನಾಡಿದರು. ಮಾಣಿಲ ಮೋಹನದಾಸ ಸ್ವಾಮೀಜಿ ಆಶೀರ್ವಚನ ನೀಡಿದರು.ತುಳು ವಿದ್ವಾಂಸ ಖ್ಯಾತ ವಾಗ್ಮಿ ಡಾ. ಗಣೇಶ್ ಅಮೀನ್ ಸಂಕಮಾರ್ ಉಡಲ್ದ ಉಳ್ಳಾಲ್ತಿ ಎಂಬ ವಿಷಯದ ಬಗ್ಗೆ ಉಪನ್ಯಾಸ ನೀಡಿ ಮಾತನಾಡಿ ಪ್ರಕೃತಿಯನ್ನು ಆರಾಧಿಸುವ ತುಳುನಾಡಿನಲ್ಲಿ ನಂಬಿಕೆ ಮೂಲನಂಬಿಕೆ ಮುಖ್ಯವಾಗಿದೆ. ಕಟೀಲು ದುರ್ಗೆ ತುಳುನಾಡಿನ ಆರಾಧ್ಯ ದೇವರಾಗಿದ್ದಾರೆ ಎಂದರು.

2KinniKrishnapura
ಮಡಂತ್ಯಾರು ಧರ್ಮದರ್ಶಿ ರೌದ್ರನಾಥೇಶ್ವರ ದೇವಳದ ಎನ್.ರವಿ ಅಧ್ಯಕ್ಷತೆ ವಹಿಸಿದರು.ಈ ಸಂದರ್ಭ ಕಟೀಲು ದೇವಳಕ್ಕೆ ಸಹಕರಿಸಿದ ದಾನಿಗಳನ್ನು ಸನ್ಮಾನಿಸಲಾಯಿತು.ಕಟೀಲು ದೇವಳ ಆಡಳಿತ ಸಮಿತಿ ಅಧ್ಯಕ್ಷ ಹಾಗೂ ಮೊಕ್ತೇಸರ ಸನತ್ ಕುಮಾರ್ ಶೆಟ್ಟಿ ಕೊಡೆತ್ತೂರು ಗುತ್ತು, ಮಾಜಿ ಸಚಿವ ಬಿ. ರಮಾನಾಥ ರೈ, ಮಂಗಳೂರು ಬ್ಯಾಂಕ್ ಆಫ್ ಬರೋಡ ಜನರಲ್ ಮ್ಯಾನೇಜರ್ ಮತ್ತು ವಲಯ ಮುಖ್ಯಸ್ಥ ಎಂ. ಜೆ ನಾಗರಾಜ, ಮಂಗಳೂರು ಕೆನರಾ ಬ್ಯಾಂಕ್ ಮ್ಯಾನೇಜರ್ ಮತ್ತು ವಲಯ ಮುಖ್ಯಸ್ಥ ಯೋಗೀಶ್ ಆಚಾರ್ಯ, ಕಾರ್ಪೋರೇಶನ್ ಬ್ಯಾಂಕ್ ಮ್ಯಾನೇಜಿಂಗ್ ಡೈರೆಕ್ಟರ್ ಮತ್ತು ಚೀಫ್ ಎಕ್ಸಿಕ್ಯುಟಿವ್ ಆಫೀಸರ್ ಪಿ.ವಿ.ಭಾರತಿ, ಮುಂಬಯಿ ಉದ್ಯಮಿ ಪೆರ್ಮುದೆ ಅಶೋಕ ಶೆಟ್ಟಿ, ಕಟೀಲು ಬ್ರಹ್ಮಕಲಶೋತ್ಸವ ಬೆಂಗಳೂರು ಸಮಿತಿ ಅಧ್ಯಕ್ಷ ಕೊಡೆತ್ತೂರುಗುತ್ತು ಕಿಶೋರ್ ಶೆಟ್ಟಿ, ಉಡುಪಿ ಶ್ರೀ ಶಾರದೋತ್ಸವ ಸಮಿತಿ (ರಿ) ಅಧ್ಯಕ್ಷ ಬೈಕಾಡಿ ಸುಪ್ರಸಾದ ಶೆಟ್ಟಿ, ನಮ್ಮ ಕುಡ್ಲ ವಾಹಿನಿ ಮಂಗಳೂರು ನಿರ್ದೇಶಕ ಲೀಲಾಕ್ಷ ಕರ್ಕೆರಾ, ಮುಂಬಯಿ ಉದ್ಯಮಿ ಇನ್ನ ಕೆಳಗಿನ ಮನೆ ಪ್ರವೀಣ್ ಜಿ. ಶೆಟ್ಟಿ, ಪದ್ಮನೂರು ನೀಲೇಶ್ ಶೆಟ್ಟಿಗಾರ್, ಬೆಂಗಳೂರು ಜಗದೀಶ ರೆಡ್ಡಿ, ಅಂತರಾಷ್ಟ್ರೀಯ ನರರೋಗ ತಜ್ಞ ಡಾ. ವೆಂಕಟರಮಣ ಬೆಂಗಳೂರು, ಬೆಂಗಳೂರು ಕೈಗಾರಿಕೋದ್ಯಮಿ ಬದ್ರೀನಾಥ್ ಕಾಮತ್, ಪಡುಬಿದ್ರೆ ಖಡ್ಗೇಶ್ವರಿ ದೇವಳದ ಅಧ್ಯಕ್ಷ ವೈ. ಎನ್. ರಾಮಚಂದ್ರ ರಾವ್, ಮಂಗಳೂರು ಮುಗ್ರೋಡಿ ಕನ್ಸಟ್ರಕ್ಷನ್‍ನ ಸುಧಾಕರ ಶೆಟ್ಟಿ ಮುಗ್ರೋಡಿ ಉಪಸ್ಥಿತರಿದ್ದರು.ಕಟೀಲು ದೇವಳ ಆನುವಂಶಿಕ ಅರ್ಚಕ ಶ್ರೀಹರಿನಾರಾಯಣದಾಸ ಆಸ್ರಣ್ಣ, ಸ್ವಾಗತಿಸಿದರು ಭಾಸ್ಕರದಾಸ್ ಎಕ್ಕಾರು ವಂದಿಸಿದರು ಕಾರ್ಯಕ್ರಮ ದಯಾನಂದ ಕಟೀಲು ಕಾರ್ಯಕ್ರಮ ನಿರೂಪಿಸಿದರು.

Leave a comment

XHTML: You can use these html tags: <a href="" title=""> <abbr title=""> <acronym title=""> <b> <blockquote cite=""> <cite> <code> <del datetime=""> <em> <i> <q cite=""> <strike> <strong>

Get Immediate Updates .. Like us on Facebook…

Visitors Count Visitor Counter