Published On: Sat, Feb 1st, 2020

ಕಟೀಲು ಬ್ರಹ್ಮಕಲಶೋತ್ಸವದ ಧಾರ್ಮಿಕ ಸಭೆ

ಕಟೀಲು:ಭಾರತೀಯರು ಸನಾತನ ಧರ್ಮದ ತಳಹದಿಯಲ್ಲಿದ್ದು ಅದನ್ನು ನೆಚ್ಚಿಕೊಂಡಿದ್ದಾರೆ ನಂಬಿಕೆ ಪಕ್ಕದಲ್ಲಿ ನೆಮ್ಮದಿ ಇದೆ. ಎಂದು ಹೊಸನಗರ ರಾಮಚಂದ್ರಪುರ ಮಠ ಹೊಸನಗರ ಶ್ರೀಜಗದ್ಗುರುಶಂಕರಾಚಾರ್ಯ ಮಹಾಸಂಸ್ಥಾನದ ಶ್ರೀ ರಾಘವೇಶ್ವರ ಭಾರತೀತೀರ್ಥ ಸ್ವಾಮೀಜಿ ಹೇಳಿದರು.ಕಟೀಲು ಶ್ರೀ ದುರ್ಗಾಪರಮೇಶ್ವರೀ ಬ್ರಹ್ಮಕಲಶೋತ್ಸವದ ಅಂಗವಾಗಿ ಭ್ರಾಮರಿ ಸಭಾಂಗಣದಲ್ಲಿ ಹತ್ತನೇ ದಿನದ ಸಭಾ ಕಾರ್ಯಕ್ರಮದಲ್ಲಿ ಆಶೀರ್ವಚನ ನೀಡಿ ಮಾತನಾಡಿದರು.

31KinniDharmikaಭಾರತದಲ್ಲಿ ಧರ್ಮಕ್ಕೆ ವಿಶೇಷ ಅರ್ಥವಿದೆ. ಯಕ್ಷಗಾನ ಕಲಾ ಪ್ರಸಂಗಗಳ ಮೂಲಕ ಕನ್ನಡ ಭಾಷೆ ಶುದ್ದಿಯಾಗಿದೆ. ಎಂದು ಕನ್ನಡ ಅಭಿವೃದ್ಧಿ ಪ್ರಾಧಿಕಾರ ಸದಸ್ಯ ರೋಹಿತ್ ಚಕ್ರತೀರ್ಥ ಧರ್ಮ, ಶಕ್ತಿ ಮತ್ತು ಆರಾಧನೆ ಎಂಬ ವಿಷಯದ ಬಗ್ಗೆ ಉಪನ್ಯಾಸ ನೀಡಿದರು.ಬಾರಕೂರು ಕಚ್ಚೂರು ಶ್ರೀ ನಾಗೇಶ್ವರ ದೇವಳದ ಆಡಳಿತ ಮೊಕ್ತೇಸರ ಕಡಂದಲೆ ಸುರೇಶ್ ಭಂಡಾರಿ ಅಧ್ಯಕ್ಷತೆ ವಹಿಸಿದರು. ಈ ಸಂದರ್ಭ ಕಟೀಲು ದೇವಳಕ್ಕೆ ಸಹಕರಿಸಿದ ದಾನಿಗಳನ್ನು ಸನ್ಮಾನಿಸಲಾಯಿತು.ಕರ್ನಾಟಕ ಸರಕಾರ ಮಾಜಿ ಸಚಿವ ಬಿ. ನಾಗರಾಜ ಶೆಟ್ಟಿ, ಸಂಗೀತ ನಿರ್ದೇಶಕ ಗುರುಕಿರಣ್, ಸುರಗಿರಿ ಶ್ರೀ ಮಹಾಲಿಂಗೇಶ್ವರ ದೇವಳದ ಅರ್ಚಕ ವಿಶ್ವೇಶ ಭಟ್, ಬೆಳ್ತಂಗಡಿ, ಕಾಶಿಪಟ್ನ ಪಂಚಲಿಂಗೇಶ್ವರ ದೇವಳದ ಅರ್ಚಕ ಮತ್ತು ಆಡಳಿತ ಮೊಕ್ತೇಸರ ಕೇಳ ಅನಂತ ಆಸ್ರಣ್ಣ, ಕಟೀಲು ದೇವಳದ ಆನುವಂಶಿಕ ಅರ್ಚಕ ಕಮಲಾದೇವಿ ಪ್ರಸಾದ ಆಸ್ರಣ್ಣ, ಆನುವಂಶಿಕ ಮೊಕ್ತೇಸರ ಹಾಗೂ ಆಡಳಿತ ಸಮಿತಿ ಅಧ್ಯಕ್ಷ ಸನತ್‍ಕುಮಾರ್ ಶೆಟ್ಟಿ ಕೊಡೆತ್ತೂರು ಗುತ್ತು, ಕಟೀಲು ಬ್ರಹ್ಮಕಲಶೋತ್ಸವ ಪೂನಾ ಸಮಿತಿ ಹಾಗೂ ಬಂಟರ ಸಂಘ ಪೂನಾ ಅಧ್ಯಕ್ಷ ಇನ್ನ ಸಂತೋಷ್ ಶೆಟ್ಟಿ, ಪೂನಾ ಬಿಲ್ಲವ ಸಂಘದ ಅಧ್ಯಕ್ಷ ವಿಶ್ವನಾಥ ಪೂಜಾರಿ ಕಡ್ತಲ, ಪೂನಾ ಉದ್ಯಮಿ ಎರ್ಮಾಳು ಎನ್.ಕೆ. ಶೆಟ್ಟಿ, ಪೂನಾ ಉದ್ಯಮಿ ನಗ್ರಿಗುತ್ತು ರೋಹಿತ್ ಡಿ. ಶೆಟ್ಟಿ, ಪೂನಾ ನಿಗಡಿ ಉದ್ಯಮಿ ಪದ್ಮನಾಭ ಶೆಟ್ಟಿ, ಮುಂಬೈ ಕೈಗಾರಿಕೋದ್ಯಮಿಗಳಾದ ಕಟೀಲು ಚಂದ್ರಶೇಖರ ಬಿ., ಎಲ್. ವಿ. ಅಮೀನ್, ಮುಂಬೈ ಉದ್ಯಮಿಗಳದ ಐಕಳ ವಿಶ್ವನಾಥ ಶೆಟ್ಟಿ, ಐಕಳ ಗಣೇಶ ಶೆಟ್ಟಿ, ಜಗನ್ನಾಥ ಶೆಟ್ಟಿ, ಮುಂಬೈ ಬೋರಿವಿಲಿ ದಯಾವತಿ ಮೆಂಡನ್, ಜಾಗತಿಕ ಬಂಟರ ಒಕ್ಕೂಟದ ಅಧ್ಯಕ್ಷ ಮುಂಬೈ ಬ್ರಹ್ಮಕಲಶೋತ್ಸವ ಸಮಿತಿ ಅಧ್ಯಕ್ಷ ಐಕಳ ಹರೀಶ್ ಶೆಟ್ಟಿ, ಅತ್ತೂರು ವಿಜಯ ಶೆಟ್ಟಿ ಮುಂಬಾವಿ, ಏಳಿಂಜೆ ಲಕ್ಷ್ಮೀಜನಾರ್ಧನ ದೇವಳದ ಆಡಳಿತ ಮೊಕ್ತೇಸರ ಪ್ರಭಾಕರ ಶೆಟ್ಟಿ ಕೊಂಜಾಲಗುತ್ತು, ಬಾಲಕೃಷ್ಣ ಆಚಾರ್ಯ ಮರವೂರು, ಮಂಜುನಾಥ್ ಬೆಂಗಳೂರು, ಉದ್ಯಮಿ ರಾಮಪ್ರಸಾದ್ ಭಟ್ ಚೆನ್ನೈ, ಅಝಿತ್ ಹೆಗ್ಟೆ ಪೂನಾ, ಎನ್.ಕೆ. ಶೆಟ್ಟಿ. ಉದಯ ಪಾಂಗಣ್ಣಾಯ ಉಪಸ್ಥಿತರಿದ್ದರು.ಗುರುರಾಜ್ ಮಲ್ಲಿಗೆಯಂಗಡಿ ಸ್ವಾಗತಿಸಿದರು. ಜನಾರ್ಧನ ಕಿಲೆಂಜೂರು ವಂದಿಸಿದರು. ಶೈಲಜಾ ಆಚಾರ್ಯ ಕಾರ್ಯಕ್ರಮ ನಿರೂಪಿಸಿದರು.

Leave a comment

XHTML: You can use these html tags: <a href="" title=""> <abbr title=""> <acronym title=""> <b> <blockquote cite=""> <cite> <code> <del datetime=""> <em> <i> <q cite=""> <strike> <strong>

Get Immediate Updates .. Like us on Facebook…

Visitors Count Visitor Counter