Published On: Fri, Jan 31st, 2020

ಜಯಂಟ್ಸ್ ಮಹಾಸಭೆ ಮತ್ತು ಸಾಧಕರಿಗೆ ಸನ್ಮಾನ ಕಾರ್ಯಕ್ರಮ

ಉಡುಪಿ:- ಜಯಂಟ್ಸ್ ಗ್ರೂಪ್ ಬ್ರಹ್ಮಾವರ ಇದರ ವತಿಯಿಂದ ಶನಿವಾರ ಸಿಟಿ ಸೆಂಟರ್ ನಲ್ಲಿ ಮಹಾಸಭೆ ಮತ್ತು ಸಾಧಕರಿಗೆ ಸನ್ಮಾನ ಕಾರ್ಯಕ್ರಮ ನಡೆಯಿತು.ಕಾರ್ಯಕ್ರಮವನ್ನು ಉದ್ದೇಶಿಸಿ ತಾ.ಪಂ ಮಾಜಿ ಅದ್ಯಕ್ಷೆ ನಳಿನಿ ಪ್ರದೀಪ್ ಮಾತನಾಡಿ,ಪ್ರಧಾನಿಗಳ ಕನಸಿನ ಹಲವಾರು ಕಾರ್ಯಕ್ರಮಗಳನ್ನು ಜಯಂಟ್ಸ್ ಸಂಸ್ಥೆಯು ಪರಿಣಾಮಕಾರಿ ಜಾರಿಗೆ ತರುತ್ತಿದೆ,ಜನೌಷಧಿ ಕೇಂದ್ರ ತೆರೆಯುವ ಮೂಲಕ ಜನರಿಗೆ ಇದರ ಲಾಭವನ್ನು ನೀಡುತ್ತಿದೆ ಇದು ಎಲ್ಲರಿಗೂ ಮಾದರಿ ಎಂದರು.

IMG-20200111-WA0025
ಜಯಂಟ್ಸ್ ಸೆಂಟ್ರಲ್ ಸಮಿತಿ ಸದಸ್ಯ ದಿನಕರ ಅಮೀನ್ ನಾವೆಲ್ಲರೂ ಹಲವಾರು ಋಣದಲ್ಲಿದ್ದೇವೆ ಅದರಲ್ಲಿ ಪ್ರಾಮುಖ್ಯವಾದ ಈ ಭೂಮಿಯ ಋಣ ತೀರಿಸಲು ಸಾಮಾಜ ಮುಖಿ ಕಾರ್ಯಕ್ರಮಗಳಿಂದ ಸಾದ್ಯ ಈ ನಿಟ್ಟಿನಲ್ಲಿ ಜಯಂಟ್ಸ್ ಗ್ರೂಪ್ ಉತ್ತಮ ಕಾರ್ಯ ನಿರ್ವಹಿಸುತ್ತಿದೆ ಎಂದರು.ಮುಖ್ಯ ಅತಿಥಿಗಳಾಗಿ ಯೂನಿಟ್ ನಿರ್ದೇಶಕ ರಮೇಶ್ ಪೂಜಾರಿ,ಜಯಂಟ್ಸ್ ಅದ್ಯಕ್ಷ ಸುಂದರ ಪೂಜಾರಿ ಮೂಡುಕುಕುಡೆ,ನಿಕಟಪೂರ್ವ ಅದ್ಯಕ್ಷ ಮಂಜುನಾಥ ಶೆಟ್ಟಿಗಾರ್,ಕಾರ್ಯದರ್ಶಿ ಶ್ರೀನಾಥ್ ಕೋಟ, ಜಯಂಟ್ಸ್ ಫೆಡರೇಶನ್ ಮಾಜಿ ಅದ್ಯಕ್ಷ ಮಧುಸೂಧನ್ ಹೇರೂರು, ಸುನೀತಾ ಮಧುಸೂಧನ್,ಮುಂತಾದವರಿದ್ದರು. ಈ ಸಂದರ್ಭದಲ್ಲಿ ಬಡ ರೋಗಿಗೆ ಗಾಲಿ ಕುರ್ಚಿ,ಸಹಾಯಧನ ನೀಡಲಾಯಿತು.ರಾಜ್ಯ ಸಮ್ಮೇಳನದಲ್ಲಿ ಘಟಕಕ್ಕೆ ನೀಡಲಾದ ಪ್ರಶಸ್ತಿಗಳನ್ನು ಪ್ರಧಾನ ಮಾಡಲಾಯಿತು.ಸಾಧಕರಾದ ಆಶಾ ನಿಲಯದ ಪ್ರಾಂಶುಪಾಲೆ ಜಯವಿಜಯ ಮತ್ತು ರಾಘವೇಂದ್ರ ಪ್ರಭು ಕರ್ವಾಲು ರವರನ್ನು ಸನ್ಮಾನಿಸಲಾಯಿತು. ವಿವೇಕಾನಂದ ಕಾಮತ್ ನಿರೂಪಿಸಿದರು.

Leave a comment

XHTML: You can use these html tags: <a href="" title=""> <abbr title=""> <acronym title=""> <b> <blockquote cite=""> <cite> <code> <del datetime=""> <em> <i> <q cite=""> <strike> <strong>

Get Immediate Updates .. Like us on Facebook…

Visitors Count Visitor Counter