Published On: Sat, Jan 25th, 2020

ಕಟೀಲು ಬ್ರಹ್ಮಕಲಶೋತ್ಸವ ತುಂಬಿ ತುಳುಕಾಡಿದ ಉಗ್ರಾಣ

ಕಟೀಲು :ಕಟೀಲು ಶ್ರೀ ದುರ್ಗಾಪರಮೆಶ್ವರೀ ದೇವಳದಲ್ಲಿ ಜನವರಿ 22 ಬುಧವಾರ ಬ್ರಹ್ಮಕಲಶೋತ್ಸವದ ಕಾರ್ಯಕ್ರಮಗಳು ಪ್ರಾರಂಭವಾಗಲಿದ್ದು ಸಕಲ ಸಿದ್ದತೆಗಳು ಭರದಿಂದ ಸಾಗುತ್ತಿದೆ.
ದೇವಳದ ಮುಂಭಾಗದ ಸಮತಟ್ಟುಗೊಂಡ ಸರಸ್ವತೀ ಸದನದ ಜಾಗದಲ್ಲಿ ಸುಮಾರು 20000 ಚದರ ಅಡಿ ವಿಸ್ತಿರ್ಣದ ವಿಶಾಲ ಪೆಂಡಾಲ್ ನಿರ್ಮಾಣವಾಗಿದೆ. ದಕ್ಷಿಣಕನ್ನಡ ಉಡುಪಿ ಜಿಲ್ಲೆಗಳಲ್ಲದೆ ರಾಜ್ಯದಲ್ಲೂ ಅಪಾರ ಭಕ್ತಾಧಿಗಳಿದ್ದು ಹೊರೆಕಾಣಿಕೆ ದಾಖಲೆ ಪ್ರಮಾಣದಲ್ಲಿ ಬರುತ್ತಿದೆ.

24KinniUgrana2ಪೆಂಡಾಲ್‍ನ ಪೂರ್ವ ಭಾಗದಲ್ಲಿ ಪೂರ್ವಾಭಿಮುಖವಾಗಿ ರಚನೆಗೊಂಡ ಗುಡಿಯಲ್ಲಿ ದುರ್ಗೆ, ಗಣಪತಿ ಮತ್ತು ವಿಷ್ಣು ದೇವರ ಮೂರ್ತಿ ಇದ್ದು ಉಗ್ರಾಣದಲ್ಲಿ ಅಕ್ಕಿ, ಸಕ್ಕರೆ, ಬೆಲ್ಲ ತುಪ್ಪ, ಎಣ್ಣೆ, ಗ್ರೈಂಡರ್, ಸ್ಟೀಲ್ ಬಟ್ಟಲುಗಳು ಅಡುಗೆ ಪಾತ್ರೆಗಳು, ತರಕಾರಿ ಮತ್ತಿತರ ಸಾಮಾನುಗಳನ್ನು ಇಡಲು ಪ್ರತ್ಯೇಕ ವ್ಯವಸ್ಥೆಗಳನ್ನು ಮಾಡಲಾಗಿದೆ. ಕೇವಲ ಮೂರೇ ದಿನದಲ್ಲಿ ಉಗ್ರಾಣ ಭರ್ತಿಯಾಗುವ ಲಕ್ಷಣಗಳು ಕಂಡು ಬಂದಿದೆ. ಅಕ್ಕಿಯನ್ನು ಸಲ್ಲಿಸುವವರು ನಿರ್ದಿಷ್ಠ ಬ್ರಾಂಡ್ ನ ಅಕ್ಕಿಯನ್ನು ಕೊಡುವಂತೆ ಭಕ್ತರಿಗೆ ವಿನಂತಿಸಲಾಗಿದ್ದು 25 ಕಿಲೋ ಗ್ರಾಂ ನಂತೆ ನೂರಾರು ಅಕ್ಕಿ ಮೂಟೆಗಳು ಸಂಗ್ರಹವಾಗುತ್ತಿದೆ. ಭಕ್ತರು ತಾವು ಬೆಳೆದ ಅಕ್ಕಿ ತರಕಾರಿಯನ್ನು ಭಕ್ತಿಯಿಂದ ದುರ್ಗೆಗೆ ಅರ್ಪಿಸುತ್ತಿದ್ದಾರೆ. ವಾಹನದಿಂದ ವಸ್ತುಗಳನ್ನು ಖಾಲಿಮಾಡಲು ನೂರಕ್ಕಿಂತಲೂ ಹೆಚ್ಚಿನ ಕಾರ್ಯಕರ್ತರು ಪಾಳಿ ಪ್ರಖಾರ ಉಗ್ರಾಣದಲ್ಲಿ ಸನ್ನದರಾಗಿದ್ದಾರೆ.

24KinniUgran3
ಮೂರು ದಿನಗಳಲ್ಲಿ ಅತ್ತೂರು, ಕೊಡೆತ್ತೂರು ಶಿಬರೂರು, ಮೂಡಬಿದ್ರೆ, ಗಿಡಿಗೆರೆ ಪಂಜ ಕೊಯಿಕುಡೆ. ಮಂಗಳೂರು, ಇಡ್ಯಾ ಸುರತ್ಕಲ್, ಚೇಳಾರು, ಮಧ್ಯ, ಬಪ್ಪನಾಡು, ಉಳ್ಳಾಲ, ಬಜಪೆ,ಬೆಂಗಳೂರು ಮತ್ತಿತರರ ಕಡೆಗಳಿಂದ ಹೊರೆ ಕಾಣಿಕೆ ಸಲ್ಲಿಕೆಯಾಗಿದೆ. ಜ. 25 : ಕಾಸರಗೋಡು, ಸುಳ್ಯ,ಕುಂದಾಪುರ, ನಿಡ್ದೋಡಿ, ಕಲ್ಲಮುಂಡ್ಕೂರು. ಜ. 26 : ಬಂಟ್ವಾಳ, ವಿಟ್ಲ. ಜ. 27 : ಸಾಲೆತ್ತೂರು, ಪುತ್ತೂರು, ಕಾವೂರು ಕಳತ್ತೂರು. ಜ. 28 : ಉಡುಪಿ. ಜ. 29 : ಬೆಳ್ತಂಗಡಿ ಮತ್ತಿತರ ಕಡೆಗಳಿಂದ ಹೊರೆಕಾಣಿಕೆ ಬರಲಿದೆ.

24KinniUgrana
ಮಂಗಳೂರು ಮಹಾನಗರ ಗುರುವಾರ ಬ್ರಹತ್ ಹೊರೆಕಾಣಿಕೆ ಸಲ್ಲಿಕೆಯಾಗಿದೆ. 10000 ಊಟದ ಸ್ಟೀಲ್ ಬಟ್ಟಲು, 6000 ಚಿಕ್ಕ ಪ್ಲೇಟ್, 10 ಸಾವಿರ ದೊಡ್ಡ ನೀರಿನ ಲೋಟ, ಸ್ಟೀಲ್ ಸೌಟು, ಕೊಡಪಾನ ಎರಡು ಮರದ ಪಲ್ಲಕ್ಕಿ, 6000 ಟೀ ಲೋಟ, ತಾಮ್ರದ ಕೊಪ್ಪರಿಗೆ, ಪಾತ್ರೆಗಳು, 20 ಕಿಂಟ್ವಾಲ್ ಮೆಣಸು, 50 ಕಿಂಟ್ವಾಲ್ ತೊಗರಿ ಬೇಳೆ, ಸುಮಾರು 200 ಕಿಂಟ್ವಾಲ್ ಅಕ್ಕಿ , ಹರೆಮಣೆ, ಕತ್ತಿ, ವೀಲ್ ಚೇಯರ್, ನಗದು ಸಲ್ಲಿಸಿದ್ದಾರೆ.

24KinniUggrana02

Leave a comment

XHTML: You can use these html tags: <a href="" title=""> <abbr title=""> <acronym title=""> <b> <blockquote cite=""> <cite> <code> <del datetime=""> <em> <i> <q cite=""> <strike> <strong>

Get Immediate Updates .. Like us on Facebook…

Visitors Count Visitor Counter