Published On: Fri, Jan 24th, 2020

ನೇತಾಜಿ ಜನ್ಮದಿನಕ್ಕೆ ಸ್ವದೇಶಿ ಆಟದ ಸ್ಪರ್ಶ

ಕೈಕಂಬ:“ನೇತಾಜಿ ಎಂದು ಪ್ರಸಿದ್ಧರಾದ ‘ಭಾರತದ ಸ್ವಾತಂತ್ರ್ಯ ಸಂಗ್ರಾಮ’ದ ಪ್ರಮುಖ ಜನನಾಯಕರಲ್ಲಿ ಒಬ್ಬರು. ಸ್ವಾಮಿ ವಿವೇಕಾನಂದರ ವಿಚಾರಗಳಿಂದ ಪ್ರಭಾವಿತರಾದ ಇವರು ಭಾರತ ಸ್ವಾತಂತ್ರ್ಯ ಹೋರಾಟದಲ್ಲಿ ಅತ್ಯಂತ ವಿಶಿಷ್ಟ ಪಾತ್ರವಹಿಸಿದವರು. ಅವರು ರೂಪಿಸಿದ ಹಲವು ಘೋಷಣೆಗಳಾದ ‘ಜೈಹಿಂದ್’, ‘ಇನ್‍ಕ್ವಿಲಾಬ್ ಜಿಂದಾಬಾದ್’ ಮುಂತಾದ ಘೋಷಣೆಗಳು ನಮ್ಮನ್ನು ರೋಮಾಂಚನಗೊಳಿಸುತ್ತದೆ.

DSC_0060 (1)ಅವರು ಭಾರತದ ಮಹಾನ್ ವ್ಯಕ್ತಿಯಾಗಿದ್ದರು. ತಾನು ಕಷ್ಟಪಟ್ಟು ಗಳಿಸಿದ್ದ ಐ.ಪಿ.ಎಸ್. ಪದವಿಯನ್ನೇ ತಿರಸ್ಕರಿಸಿ, ಸ್ವಾತಂತ್ರ್ಯ ಸಂಗ್ರಾಮಕ್ಕೆ ಧುಮುಕಿದ್ದ ಬೋಸ್‍ರಿಗಿದ್ದ ರಾಜಕೀಯ ಚಿಂತನೆಯ ವೈಶಾಲ್ಯತೆ ಆ ಕಾಲಮಾನದ ಯಾರೊಬ್ಬರಲ್ಲೂ ಇರಲಿಲ್ಲ. ರಾಷ್ಟ್ರ ನಿರ್ಮಾಣದ ಜವಾಬ್ದಾರಿಯುತ ಸ್ಥಾನದಲ್ಲಿದ್ದು ರಾಷ್ಟ್ರ ಹಿತಕ್ಕೆ ದಕ್ಕೆಯಾಗುವ ಯಾವುದೇ ವಿಷಯಗಳಲ್ಲಿ ದುರ್ಬಲನೀತಿ ಹೊಂದಿರಬಾರದೆಂಬ ಸುಭಾಷ್‍ರ ದಿಟ್ಟ ನಿಲುವಿನ ಪ್ರತಿಧ್ವನಿಯಾಗಿತ್ತು.

DSC_0115ಈ ದೇಶದ ಮುಂದಿನ ಪ್ರಜೆಗಳಾದ ನೀವು ಅವರ ಆದರ್ಶಗಳನ್ನು ಪಾಲಿಸಿ ಉತ್ತುಂಗಕ್ಕೆ ಏರಿ ಯಶಸ್ಸು ಕಾಣಬೇಕು.” ಎಂದು ಮುಖ್ಯ ಅತಿಥಿಯಾಗಿದ್ದ ಶ್ರೀರಾಮ ವಿದ್ಯಾಕೇಂದ್ರದ ಆಡಳಿತ ಮಂಡಳಿಯ ಸದಸ್ಯರು ಹಾಗೂ ನೇತಾಜಿ ಯುವಕ ಮಂಡಲದ ಗೌರವಾಧ್ಯಕ್ಷರು ಆಗಿರುವಂತಹ ನಾಗೇಶ್ ವಿದ್ಯಾರ್ಥಿಗಳಿಗೆ ಶುಭಹಾರೈಸಿದರು.ದಿನಾಂಕ 23/01/2020ರಂದು ಕಲ್ಲಡ್ಕ ಶ್ರೀರಾಮ ಹಿರಿಯ ಪ್ರಾಥಮಿಕ ಶಾಲೆಯ ವೇದವ್ಯಾಸ ಧ್ಯಾನಮಂದಿರದಲ್ಲಿ ನೇತಾಜಿ ಸುಭಾಷ್‍ಚಂದ್ರ ಬೋಸ್‍ರವರ ಜನ್ಮದಿನವನ್ನು ಆಚರಿಸಲಾಯಿತು.

DSC_0114 ಆ ಪ್ರಯುಕ್ತ ನೇತಾಜಿಯವರು ಇಷ್ಟಪಡುತ್ತಿದ್ದ ಸ್ವದೇಶಿ ಆಟಗಳನ್ನು ಆಡಿಸಲಾಯಿತು.“ನನಗೆ ರಕ್ತವನ್ನು ಕೊಡಿ ನಾನು ಸ್ವಾತಂತ್ರ್ಯವನ್ನು ಕೊಡುತ್ತೇನೆ” ಎಂದು ಗರ್ಜಿಸಿದ ಬಂಗಾಲದ ಹುಲಿ, ಅಖಂಡ ದೇಶಬಕ್ತ, ಸ್ವಾತಂತ್ರ್ಯ ಸೇನಾನಿ ನೇತಾಜಿವರ ಮಾತುಗಳನ್ನು ನೆನಪಿಸುತ್ತಾ, ನೇತಾಜಿಯವರು ಸ್ವದೇಶಿ ಆಟಗಳನ್ನು ಇಷ್ಟಪಡುತ್ತಿದ್ದರು. ಹಾಗೆಯೇ ನಾವು ಕೂಡ ಸ್ವದೇಶಿ ಆಟ ಹಾಗೂ ಸ್ವದೇಶಿ ಉತ್ಪನ್ನಗಳನ್ನು ಬಳಸಬೇಕು. ಭಾರತೀಯ ಸಂಸ್ಕøತಿಯನ್ನು ಉಳಿಸಬೇಕು”ಎಂದು ಕಾರ್ಯಕ್ರಮದ ಅಧ್ಯಕ್ಷರಾದ ಶ್ರೀರಾಮ ವಿದ್ಯಾಕೇಂದ್ರದ ಸಂಚಾಲಕರಾದ ವಸಂತ ಮಾಧವ ಇವರು ತಮ್ಮ ಅಧ್ಯಕ್ಷೀಯ ನುಡಿಗಳನ್ನಾಡಿದರು.ಕಾರ್ಯಕ್ರಮದಲ್ಲಿ ದೀಪಪ್ರಜ್ವಲನೆಯ ನಂತರ ನೇತಾಜಿಯವರ ಭಾವಚಿತ್ರಕ್ಕೆ ಅತಿಥಿಗಳು ಪುಷ್ಪಾರ್ಚನೆ ಮಾಡಿದರು. ನಂತರ ವಿದ್ಯಾರ್ಥಿಗಳು ಪುಷ್ಪಾರ್ಚನೆ ಮಾಡಿದರು. 7ನೇ ತರಗತಿಯ ವಿದ್ಯಾರ್ಥಿನಿಗಳು ಸಾಮೂಹಿಕ ಗೀತೆ ಹಾಡಿದರು.

DSC_0114

ಮಕ್ಕಳನ್ನು ಹಾಳೆಯಲ್ಲಿ ಕುಳ್ಳಿರಿಸಿ, ಅದನ್ನು ಅತಿಥಿಗಳು ಎಳೆಯುವುದರ ಮೂಲಕ ಸ್ವದೇಶಿಯ ಆಟಗಳಿಗೆ ಚಾಲನೆ ನೀಡಲಾಯಿತು. ನಂತರ ಮಕ್ಕಳಿಂದ ಹುಲಿದನ ಆಟ, ವಿದ್ಯುತ್ ಸಂಚಾರ ಆಟ, ಕೆರೆದಡ ಆಟ, ವಿಷ-ಅಮೃತ, ಕೊಕ್ಕರೆ-ಕೋಳಿ, ಸೊಪ್ಪಾಟ, ಉಪ್ಪುಮೂಟೆ, ಚಕ್ರವ್ಯೂಹ, ಟೋಪಿ ಆಟ, ಆನೆ ಸೊಂಡಿಲು ಹಾಗೂ ಕನ್ನಡಿ ಆಟಗಳೆಂಬ ದೇಶಿಯ ಆಟಗಳನ್ನು ಆಡಿಸಲಾಯಿತು.

DSC_0073
ಕಾರ್ಯಕ್ರಮದ ವೇದಿಕೆಯಲ್ಲಿ ಶ್ರೀರಾಮ ಆಡಳಿತ ಮಂಡಳಿಯ ಸದಸ್ಯರಾದ, ಮಾತೃಸ್ವರೂಪಿಯಾದ ಕಮಲಾ ಪ್ರಭಾಕರ್ ಭಟ್, ಪ್ರೌಢ ಶಾಲಾ ಮುಖ್ಯೋಪಾಧ್ಯಾರಾದ ವಸಂತಿ, ಶಿಶುಮಂದಿರದ ಪ್ರಮುಖರಾದ ಭ|ಗಂಗಾ ಹಾಗೂ ಶಾಲಾ ಮೂಖ್ಯೋಪಾಧ್ಯಾರಾದ ರವಿರಾಜ್ ಕಣಂತೂರು ಉಪಸ್ಥಿತರಿದ್ದರು.ಕಾರ್ಯಕ್ರಮವನ್ನು ಅಧ್ಯಾಪಕರಾದ ಪುಷ್ಪಾವತಿ ನಿರೂಪಿಸಿ, ಸವಿತಾ ಸ್ವಾಗತಿಸಿ, ದಿವ್ಯ ವಂದಿಸಿದರು.

DSC_0065 DSC_0070 DSC_0084 DSC_0094 DSC_0095 DSC_0098 DSC_0106

Leave a comment

XHTML: You can use these html tags: <a href="" title=""> <abbr title=""> <acronym title=""> <b> <blockquote cite=""> <cite> <code> <del datetime=""> <em> <i> <q cite=""> <strike> <strong>

Get Immediate Updates .. Like us on Facebook…

Visitors Count Visitor Counter