Published On: Thu, Jan 23rd, 2020

ಕಟೀಲಿಗೆ ಹೊರೆಕಾಣಿಕೆ : ಪೂರ್ವಭಾವಿಸಭೆ

ಬಂಟ್ವಾಳ:   ಕಟೀಲು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದಲ್ಲಿ ಜ.22ರಿಂದ ಫೆ.3 ರವರೆಗೆ ನಡೆಯಲಿರುವ ಬ್ರಹ್ಮಕಲಶೋತ್ಸವ, ನಾಗಮಂಡಲ, ಸಹಸ್ರ ಚಂಡಿಕಾಯಾಗ ಕೋಟಿ ಜಪಯಜ್ಞ ಕಾರ್ಯಕ್ರಮದ ಪ್ರಯುಕ್ತ ಬಂಟ್ವಾಳ ತಾ.ನಿಂದ  ಹೊರೆಕಾಣಿಕೆ ಸಮರ್ಪಿಸುವ ಕುರಿತಂತೆ   ಪೂರ್ವಭಾವಿ ಸಭೆಯು ತಾಲೂಕಿನ ಸಜೀಪಮೂಡ ಗ್ರಾಮ ಕಂದೂರು ಮಾಚಿದೇವ ಸಭಾಂಗಣದಲ್ಲಿ ಭಾನುವಾರ ನಡೆಯಿತು.
IMG-20200120-WA0050 ಕಟೀಲು ದುರ್ಗಾಪರಮೇಶ್ವರಿ ದೇವಸ್ಥಾನದ  ಅನುವಂಶಿಕ ಮೊಕ್ತೇಸರರು ಕಮಲಾದೇವಿ ಪ್ರಸಾದ್ ಆಸ್ರಣ್ಣರು  ಮಾಹಿತಿ ನೀಡಿದರು ಸಜೀಪ ಮಾಗಣೆಯ ತಂತ್ರಿಗಳಾದ ಎನ್. ಸುಬ್ರಮಣ್ಯ ಭಟ್ ಉಪಸ್ಥಿತರಿದ್ದರು.  ಹೊರೆ ಕಾಣಿಕೆ ಬಂಟ್ವಾಳ ತಾಲೂಕು ಸಮಿತಿ ಸಂಚಾಲಕ ಚಂದ್ರಹಾಸ್ ಶೆಟ್ಟಿ ರಂಗೋಲಿ ಅವರು ಬಂಟ್ವಾಳ ತಾಲೂಕಿನಿಂದ ಜ.26 ರಂದು  ಹೊರೆಕಾಣಿಕೆ  ಸಮರ್ಪಣೆಯಾಗಲಿರುವುದರಿಂದ  ಅಂದು ತಮ್ಮ,ತಮ್ಮ ಹೊರೆಕಾಣಿಕೆಯ ವಾಹನದ ಮುಂಭಾಗ ಹಾಕಲಾಗುವ ಬ್ಯಾನರ್ ನಲ್ಲಿ ಸಂಸ್ಥೆಯ ಹೆಸರಿನೊಂದಿಗೆ ಬಂಟ್ವಾಳ ತಾಲೂಕನ್ನು ಉಲ್ಲೇಖಿಸಬೇಕು ಎಂದು ಮಾಹಿತಿ ನೀಡಿದರು. ಸಭೆಯಲ್ಲಿ ಸ್ಥಳೀಯ ಪ್ರಮುಖರಾದ ಶ್ರೀಕಾಂತ್ ಶೆಟ್ಟಿ, ರಾಧಾಕೃಷ್ಣ ಆಳ್ವ, ಶೋಭಿತ ಪೂಂಜಾ, ನವೀನ್ ಸುವರ್ಣ, ಜಯ ಶಂಕರ ಬಾಸ್ರಿತ್ತಾಯ, ವಿಶ್ವನಾಥ ಬೆಲ್ಚಡ,ಸೀತಾರಾಮ ಶೆಟ್ಟಿ ಉಪಸ್ಥಿತರಿದ್ದರು. ಪ್ರಶಾಂತ್ ಕಂದೂರ್ ಸ್ವಾಗತಿಸಿ, ವಂದಿಸಿದರು.

Leave a comment

XHTML: You can use these html tags: <a href="" title=""> <abbr title=""> <acronym title=""> <b> <blockquote cite=""> <cite> <code> <del datetime=""> <em> <i> <q cite=""> <strike> <strong>

Get Immediate Updates .. Like us on Facebook…

Visitors Count Visitor Counter