Published On: Wed, Jan 15th, 2020

ಗಣರಾಜ್ಯೋತ್ಸವ ದಿನ ದೆಹಲಿ, ಗುಜರಾತ್ ಉಗ್ರರ ಟಾರ್ಗೆಟ್ – ಪೊಲೀಸರು ಹೈ ಅಲರ್ಟ್

ನವದೆಹಲಿ: ಜನವರಿ 26ರ ಗಣರಾಜ್ಯೋತ್ಸವ ದಿನದಂದು ರಾಜಧಾನಿ ದೆಹಲಿ ಅಥವಾ ಗುಜರಾತಿನಲ್ಲಿ ಇಸಿಸ್ ಉಗ್ರರನ್ನು ಬಳಸಿ ದಾಳಿ ನಡೆಸಲು ಪಾಕಿಸ್ತಾನದ ಗುಪ್ತಚರ ಸಂಸ್ಥೆ ಐಎಸ್‌ಐ ಸಂಚು ರೂಪಿಸಿದೆ ಹಾಗು ಇಸಿಸ್ ಉಗ್ರರಿಂದ ದಾಳಿ ನಡೆಸಿ ಕೊನೆಗೆ ಆ ದಾಳಿಯ ಹೊಣೆಯನ್ನು ಇಸಿಸ್ ತಲೆಗೇ ಕಟ್ಟುವ ಹುನ್ನಾರವನ್ನ ಪಾಕಿಸ್ತಾನದ ಐಎಸ್‌ಐ ಮಾಡುತ್ತಿದೆ ಎಂಬ ಸ್ಫೋಟಕ ಮಾಹಿತಿಯೊಂದು ಹೋರ ಬಿದ್ದಿದೆ.

images (1)

ತಮಿಳುನಾಡಿನ ತಿರುವಳ್ಳೂರ್ ನ ಹಿಂದೂ ಸಂಘಟನೆಯ ನಾಯಕ ಕೆ.ಪಿ.ಸುರೇಶ್ ಹತ್ಯೆ ಪ್ರಕರಣದಲ್ಲಿ ಆರೋಪಿಯಾಗಿರುವ ಆರು ಮಂದಿ ಉಗ್ರರು ತಮಿಳುನಾಡಿನಿಂದ ಪರಾರಿಯಾಗಿದ್ದರು. ಕೆಲ ದಿನ ಬೆಂಗಳೂರಿನಲ್ಲಿ ನೆಲೆಸಿದ್ದರು ಅಲ್ಲಿಂದ ಪಲಾಯನ ಗೈದು ಕೋನೆಗೆ ಇವರಲ್ಲಿ ಖ್ವಾಜಾ ಮೊಯಿದ್ದೀನ್, ಸೇರಿ ಮೂವರನ್ನು ದೆಹಲಿಯ ಪೊಲೀಸರು ಹಾಗೂ ನಾಲ್ಕನೆಯವನನ್ನು ಗುಜರಾತಿನಲ್ಲಿ ಪೊಲೀಸರು ಬಂಧಿಸಿದ್ದರು .ಅಲ್ಲದೆ ಈ ಗುಂಪಿನಲ್ಲಿ ಇನ್ನೂ ಇಬ್ಬರು ನಾಪತ್ತೆಯಾಗಿದ್ದು, ಅವರು ಜ.26ರಂದು ದೆಹಲಿ ಅಥವಾ ಗುಜರಾತ್ ಮೇಲೆ ದಾಳಿ ನೆಡೆಸಬಹುದಾಗಿ ಮಾಹಿತಿ ಸಿಕ್ಕಿದೆ .

Naxalite

ಅದಲ್ಲದೆ ಗುಜರಾತ್ ಪೊಲೀಸರು ಬಂಧಿಸಿದ ಉಗ್ರ ತನಗೆ26ಕ್ಕೆ ಮುನ್ನ ಬೃಹತ್ ದಾಳಿಯನ್ನು ನಡೆಸುವಂತೆ ಸೂಚನೆ ಇದೆ ಎಂದು ಹೇಳಿಕೆ ನೀಡಿದ್ದಾನೆ , ಇವರಿಗೆ ವಿದೇಶ ನಿಯಂತ್ರಕರೊಬ್ಬರಿಂದ ಸಹಾಯ ಸಿಗುತ್ತಿದೆ ಎಂದು ವರದಿಯಾಗಿದ್ದು.ಎಚ್ಚೆತ್ತುಕೊಂಡ ಪೊಲೀಸರು ಹೈ ಅಲರ್ಟ್ ಆಗಿದ್ದಾರೆ. ಇದೀಗ ಆ ಇಬ್ಬರೂ ಉಗ್ರರಿಗಾಗಿ ತೀವ್ರ ಶೋಧ ನಡೆಸುತ್ತಿದ್ದಾರೆ.

Leave a comment

XHTML: You can use these html tags: <a href="" title=""> <abbr title=""> <acronym title=""> <b> <blockquote cite=""> <cite> <code> <del datetime=""> <em> <i> <q cite=""> <strike> <strong>

Get Immediate Updates .. Like us on Facebook…

Visitors Count Visitor Counter