Published On: Mon, Jan 13th, 2020

ಶಬರಿಮಲೆ ವಿವಾದ : ಇಂದಿನಿಂದ ಸುಪ್ರೀಂಕೋರ್ಟ್ ನಲ್ಲಿ ಅರ್ಜಿ ವಿಚಾರಣೆ

ಮಂಗಳೂರು : ದೇಶಾದ್ಯಂತ ಸಂಚಲನ ಸೃಷ್ಟಿಸಿದ್ದ ಪ್ರಕರಣಗಳಲ್ಲಿ ಪ್ರಮುಖವಾದದ್ದು ಶಬರಿಮಲೆ ಕೇಸ್​​. ಕೇರಳದ ಶಬರಿಮಲೆ ಅಯ್ಯಪ್ಪ ದೇಗುಲಕ್ಕೆ ಮಹಿಳೆಯರ ಪ್ರವೇಶ ಬೇಕೋ ಬೇಡವೋ ಎಂಬ ಪ್ರಶ್ನೆ ಸಾಕಷ್ಟು ಸಂಚಲನ ಮೂಡಿಸಿತ್ತು.10 ರಿಂದ 50 ವರ್ಷದೊಳಗಿನ ಮಹಿಳೆಯರು ಶಬರಿಮಲೆ ದೇಗುಲಕ್ಕೆ ಪ್ರವೇಶಿಸಬೇಕೋ, ಬೇಡವೋ ಎಂಬುದರ ಮರು ಪರಿಶೀಲನಾ ಅರ್ಜಿ ವಿಚಾರಣೆ, ಇಂದಿನಿಂದ ಸುಪ್ರೀಂಕೋರ್ಟ್​​ನ ಒಂಭತ್ತು ಸದಸ್ಯರ ಪೀಠ ನಡೆಸಲಿದೆ.

Sabarimala-Case-SC-and-Judges

ಕೇರಳದ ಶಬರಿಮಲೆ ಅಯ್ಯಪ್ಪ ದೇಗುಲಕ್ಕೆ ಮಹಿಳೆಯರ ಪ್ರವೇಶಕ್ಕೆ ಸಂಬಂಧಿಸಿ 2018ರಲ್ಲಿ ಸಲ್ಲಿಕೆ ಆಗಿದ್ದ ಮೇಲ್ಮನವಿಯನ್ನು ಐದು ಸದಸ್ಯರ ಪೀಠ ವಿಚಾರಣೆ ನಡೆಸಿತ್ತು. ಈ ಅರ್ಜಿ ವಿಚಾರಣೆ ವೇಳೆ, ಎಲ್ಲ ವಯೋಮಾನದವರು ಶಬರಿಮಲೆಗೆ ಪ್ರವೇಶ ನೀಡಬಹುದೆಂದು ಅಂದಿನ ಮುಖ್ಯ ನ್ಯಾಯಮೂರ್ತಿ ರಂಜನ್ ಗೊಗೋಯ್ ನೇತೃತ್ವದ ಸಭೆ ತೀರ್ಪು ನೀಡಿತ್ತು. ಆದರೆ ಈ ತೀರ್ಪಿನ ವಿರುದ್ಧ ಭಾರಿ ವಿರೋಧ ಕೇಳಿ ಬಂದಿತ್ತು ಹಾಗೂ ತೀರ್ಪು ಮರುಪರಿಶೀಲಿಸುವಂತೆ ಹಲವು ಅರ್ಜಿಗಳು ಸಲ್ಲಿಕೆಯಾಗಿದ್ದವು.ಇದಾದ ನಂತರ 2019ರ ನವೆಂಬರ್​ 14ರಂದು ತೀರ್ಪು ನೀಡಿದ್ದ ಪೀಠ, ಈ ಪ್ರಕರಣವನ್ನು 9 ಸದಸ್ಯರ ಪೀಠಕ್ಕೆ ವರ್ಗಾವಣೆ ಮಾಡಿತ್ತು.

gt8lnf4_sabarimala_625x300_29_December_18

ಇದೀಗ ಮುಖ್ಯನ್ಯಾಯಮೂರ್ತಿ ಎಸ್​ಎ ಬೋಬ್ಡೆ ನೇತೃತ್ವದ 9 ಸದಸ್ಯರ ಪೀಠ 60 ಮರು ಪರಿಶೀಲನಾ ಅರ್ಜಿಗಳ ವಿಚಾರಣೆಯನ್ನು ಮಾಡಲಿದೆ. ಪೀಠದಲ್ಲಿ ನ್ಯಾ. ಅಶೋಕ್​ ಭೂಷಣ್​, ನ್ಯಾ. ನಾಗೇಶ್ವರ್​ ರಾವ್​,ನ್ಯಾ. ಆರ್​ ಭಾನುಮತಿ, ನ್ಯಾ. ಬಿ.ಆರ್​. ಗವೈ​, ನ್ಯಾ. ಎಸ್​.ಎ ನಜೀರ್​,ನ್ಯಾ. ಸೂರ್ಯ ಕಾಂತ್​,ನ್ಯಾ. ಆರ್​. ಸುಭಾಶ್​ ಹಾಗು ನ್ಯಾ. ಎಂ.ಎಂ. ಶಾಂತಗೌಡರ್ ರೆಡ್ಡಿ ಇದ್ದು, ಇವರಲ್ಲಿ ನ್ಯಾ. ಚಂದ್ರಚೂಡ್​, ನ್ಯಾ. ನಾರಿಮನ್​ಅವರು ಶಬರಿಮಲೆ ದೇಗುಲ ಮಹಿಳೆಯರ ಪ್ರವೇಶಕ್ಕೆ ನಿರಾಕರಣೆ ಮಾಡಿದ್ದರು. ಉಳಿದ ಮೂವರು ನ್ಯಾಯಮೂರ್ತಿಗಳು ಮಹಿಳೆಯರ ಪ್ರವೇಶವನ್ನು ಬೆಂಬಲಿಸಿದರು. ಇದಲ್ಲದೆ ಕಳೆದ ಬಾರಿ ನಡೆದ ನ್ಯಾಯಪೀಠದಲ್ಲಿ ಮಹಿಳೆಯರ ಅಯ್ಯಪ್ಪ ದೇಗುಲ ಪ್ರವೇಶವನ್ನು ವಿರೋಧಿಸಿದ ಮಹಿಳಾ ನ್ಯಾ. ಮಲ್ಹೋತ್ರಾ ಹಾಗು ಮಹಿಳೆಯರ ಪ್ರವೇಶದ ಪರ ಇದ್ದ ನ್ಯಾಯಮೂರ್ತಿಗಳಾದ ಡಿ.ವೈ. ಚಂದ್ರಚೂಡ್ ​​ ಹಾಗೂ ಆರ್.ಎಫ್. ನಾರಿಮನ್​ ಅವರು, ಈ ಬಾರಿಯ ಪೀಠದಲ್ಲಿಲ್ಲ.

Leave a comment

XHTML: You can use these html tags: <a href="" title=""> <abbr title=""> <acronym title=""> <b> <blockquote cite=""> <cite> <code> <del datetime=""> <em> <i> <q cite=""> <strike> <strong>

Get Immediate Updates .. Like us on Facebook…

Visitors Count Visitor Counter