Published On: Mon, Jan 13th, 2020

ಗಾಂಧಿ ಚಿಂತನೆಯಿಂದ ದೂರ ಸರಿದರೆ ಅಪಾಯ: ಇಡ್ಕಿದು

ಮಂಗಳೂರು: ಮಹಾತ್ಮ ಗಾಂಧೀಜಿ ದೇಶ ಕಂಡ ಒರ್ವ ಮಹಾನ್ ಚೇತನ. ಅವರ ಚಿಂತನೆಗಳಿಂದ ಹಿಂದೆ ಸರಿದರೆ ದೇಶಕ್ಕೆ ಅಪಾಯ ಹಾಗೂ ಅಗೌರವ ಎಂದು ಯುವ ಸಬಲೀಕರಣ ಯುವಸ್ಪಂದನ ಘಟಕದ ಅಧಿಕಾರಿ ಡೊಂಬಯ್ಯ ಇಡ್ಕಿದು ಹೇಳಿದ್ದಾರೆ. ಅವರು ಮಂಜೇಶ್ವರದ ಸುಳ್ಯಮೆ ರೂಪಕಲಾ ಗ್ರಂಥಾಲಯದಲ್ಲಿ ನಡೆದ ಗಾಂಧಿಸ್ಮೃತಿ ಕಾರ್ಯಕ್ರಮ ದಲ್ಲಿ ಭಾಗವಹಿಸಿ ವಿಶೇಷ ಉಪನ್ಯಾಸ ನೀಡಿದರು.

WhatsApp Image 2020-01-13 at 11.34.06

ಗಾಂಧಿ ಚಿಂತನೆ ಎಂದಿಗೂ ಪ್ರಸ್ತುತ ಹಾಗೂ ಸಾರ್ವಕಾಲಿಕ. ಅದನ್ನು ನಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದು ಪತ್ರಕರ್ತ ಡೊಂಬಯ್ಯ ಇಡ್ಕಿದು ಹೇಳಿದರು. ಗಾಂಧಿಜೀಯವರ ಸರ್ವೋದಯ ತತ್ತ್ವ ಎಲ್ಲ ವರ್ಗ, ಧರ್ಮ ಹಾಗೂ ಜಾತೀಯತೆ ಮೀರಿದ ತತ್ವ. ಸರ್ವರ ಏಳಿಗೆಗೆ ಅದು ಸಹಕಾರಿ.ಆದರೆ ದೇಶದಲ್ಲಿ ಈ ತತ್ವ ಇನ್ನು ಅನುಷ್ಠಾನಕ್ಕೆ ಬಂದಿಲ್ಲ.

ಸರ್ವರಿಗೂ ಸಮಬಾಳು ತತ್ವದ ಅನುಷ್ಠಾನವಾದಗಲೇ ಸಮಾಜದ ಅಭಿವೃದ್ಧಿ ಸಾಧ್ಯ ಎಂದರು. ಗಾಂಧಿಯವರು ಜೋಹಾನ್ಸ್ ಬರ್ಗ್ ನಿಂದ ಡರ್ಬಾನ್ ಪ್ರಯಾಣಿಸುವ ವೇಳೆ ಆಕಸ್ಮಿಕ ವಾಗಿ ಅನ್ ಟು ದ ಲಾಸ್ಟ್ ಕೃತಿಯ ಪರಿಚಯ ಆಯಿತು. ಈ ಕೃತಿ ಆಗಾಧ ಪರಿಣಾಮ ಬೀರಿ ಅವರ ಜೀವನದ ಗತಿ ಬದಲಿಸಿತು. ಅವರ ಚಿಂತನೆ ಎಂದಿಗೂ ಸಕಾಲಿಕ ಹಾಗೂ ಪರಿಣಾಮಕಾರಿ ಎಂದರು. ಗ್ರಂಥಾಲಯ ಕೌನ್ಸಿಲ್ ಕಾರ್ಯದರ್ಶಿ ಅಹ್ಮದ್ ಹುಸೇನ್‌ ಪಿ.ಕೆ., ರೂಪಕಲಾಕರ್ಷಕ ಸಮಿತಿ ಅಧ್ಯಕ್ಷ ಕೃಷ್ಣ ನಡಕ, ನಿವೃತ್ತ ಯೋಧ ದಿನಕರ ಕೋಟ್ಯಾನ್, ವರ್ಕಾಡಿ ಗ್ರಾಮ ಪಂಚಾಯತಿ ಸದಸ್ಯ ಗೀತಾ ವಿ. ಸಾಮಾನಿ, ಅಕ್ಷಯ ಎಲಿಯಾನ, ಉದಯ ಎಸ್. ಶೆಟ್ಟಿ, ರವೀಂದ್ರ ಮಾಂಡೇಲು ಇದ್ದರು.

Leave a comment

XHTML: You can use these html tags: <a href="" title=""> <abbr title=""> <acronym title=""> <b> <blockquote cite=""> <cite> <code> <del datetime=""> <em> <i> <q cite=""> <strike> <strong>

Get Immediate Updates .. Like us on Facebook…

Visitors Count Visitor Counter