ರೋಟರಿ ಕ್ಲಬ್ ಸಹಕಾರದೊಂದಿಗೆ ಕಬಕ ಜಂಕ್ಷನ್‍ನಲ್ಲಿ ಟ್ರಾಫಿಕ್ ಸಿಗ್ನಲ್ ಪಾಯಿಂಟ್ ಸ್ಥಾಪನೆ
ಪುತ್ತೂರು : ರೋಟರಿ ಕ್ಲಬ್ ವಿಟ್ಲ ಇದರ ವತಿಯಿಂದ ರೋಟರಿ ಕ್ಲಬ್ ಪುತ್ತೂರು ಸಿಟಿ ಇದರ ಸಹಕಾರದೊಂದಿಗೆ ಕಬಕ ಜಂಕ್ಷನ್‍ನಲ್ಲಿ ಟ್ರಾಫಿಕ್ ಪೊಲೀಸ್ ಸಿಗ್ನಲ್ ಪಾಯಿಂಟ್ ಸ್ಥಾಪಿಸಲಾಯಿತು. ಇದರ ಉದ್ಘಾಟನೆಯನ್ನು ಪುತ್ತೂರು ತಾಲೂಕು ಪಂಚಾಯತ್ ಅಧ್ಯಕ್ಷ ರಾಧಾಕೃಷ್ಣ ಬೋರ್ಕರ್ ಉದ್ಘಾಟಿಸಿದರು.
ಈ ಸಂದರ್ಭದಲ್ಲಿ ತಾಲೂಕು ಪಂಚಾಯತ್ ಸದಸ್ಯೆ ದಿವ್ಯಾ ಪುರುಷೋತ್ತಮ್, ಗ್ರಾಮ ಪಂಚಾಯತ್ ಅಧ್ಯಕ್ಷೆ ಪ್ರೀತಾ ಬಿ, ರಾಷ್ಟ್ರೀ ಹೆದ್ದಾರಿ ಸಹಾಯಕ ಇಂಜಿನೀಯರ್ ನಾಗರಾಜ್, ಪುತ್ತೂರು ನಗರ ಠಾಣೆ ಪೊಲೀಸ್ ನಿರೀಕ್ಷಕ ತಿಮ್ಮಪ್ಪ ನಾಯ್ಕ್, ಪುತ್ತೂರು ಸಂಚಾರಿ ಠಾಣೆ ಉಪನಿರೀಕ್ಷಕ ಚೆಲುವಯ್ಯ, ಕಬಕ ಪಂಚಾಯತ್ ಅಭಿವೃದ್ಧಿ ಅಧಿಕಾರಿ ಆಶಾ, ಪ್ರಾಯೋಜಕ ಟೋಪ್ಕೋ ಜುವೆಲ್ಲರಿಸ್ ಪಾಲುದಾರ ಮಹಮ್ಮದ್ ಟಿ ಕೆ, ರೋಟರಿ ವಲಯ 4ರ
ಉಪರಾಜ್ಯಪಾಲ ರಿತೇಶ್ ಬಾಳಿಗ, ವಲಯ ಸೇನಾನಿ ಸಂಜೀವ ಪೂಜಾರಿ, ವಿಟ್ಲ ರೋಟರಿ ಕ್ಲಬ್ ಅಧ್ಯಕ್ಷ ಜಯರಾಮ ರೈ, ನಿಕಟ ಪೂರ್ವ ಅಧ್ಯಕ್ಷ ಚರಣ್ ಕಜೆ, ಪುತ್ತೂರು ಸಿಟಿ ರೋಟರಿ ಕ್ಲಬ್ ಅಧ್ಯಕ್ಷ ದರಣಪ್ಪ ಗೌಡ ಮೊದಲಾದವರು ಭಾಗವಹಿಸಿದ್ದರು. ಪುರುಷೋತ್ತಮ ಮುಂಗ್ಲಿಮನೆ ಕಾರ್ಯಕ್ರಮ ಸಂಯೋಜಿಸಿದರು.