Published On: Mon, Dec 16th, 2019

ಭಯೋತ್ಪಾದನೆ ಮತ್ತು ರಾಷ್ಟ್ರ ವಿರೋಧಿ ಚಟುವಟಿಕೆ ಮಟ್ಟ ಹಾಕಲೆಂದು ಸರ್ಕಾರ ಪೌರತ್ವ ತಿದ್ದುಪಡಿ ಮಸೂದೆ ಜಾರಿಗೆ : ವಜ್ರದೇಹಿ

ಕೈಕಂಬ : ಹಿಂದೂ ಸಂಘಟನೆಗಳು ನಡೆಸುತ್ತಿರುವ ಪೂಜಾ ಚಟುವಟಿಕೆಗಳಿಂದ ದೇಶ ಇಂದು ಸುಭಿಕ್ಷೆಯತ್ತ ಮುಖ ಮಾಡಿದೆ. ದೇಶದ ಪರಿಸ್ಥಿತಿ ಉತ್ತಮವಾಗಿದೆ ಎಂದು ದೇಶ ಕಾಯುವ ಸೈನಿಕ ಹೇಳುತ್ತಿದ್ದಾನೆ. ಸಮರ್ಥ ನಾಯಕನೊಬ್ಬ ಈ ದೇಶದ ಚುಕ್ಕಾಣಿ ಹಿಡಿದಿರುವುದರಿಂದ ಭಯೋತ್ಪಾದನೆ, ಗೋಹತ್ಯೆ, ಅಕ್ರಮ ಕಸಾಯಿಖಾನೆಗಳು ಕಡಿಮೆಯಾಗಿವೆ. ಭಯೋತ್ಪಾದನೆ ಮತ್ತು ರಾಷ್ಟ್ರ ವಿರೋಧಿ ಚಟುವಟಿಕೆ ಮಟ್ಟ ಹಾಕಲೆಂದು ಸರ್ಕಾರ ಪೌರತ್ವ ತಿದ್ದುಪಡಿ ಮಸೂದೆ ಜಾರಿಗೆ ತಂದಿದೆ ಎಂದು ಗುರುಪುರ ವಜ್ರದೇಹಿ ಮಠದ ಶ್ರೀ ರಾಜಶೇಖರಾನಂದ ಸ್ವಾಮಿ ಹೇಳಿದರು. ಅವರುವಿಶ್ವ ಹಿಂದೂ ಪರಿಷತ್, ಬಜರಂಗ ದಳ ವಜ್ರದೇಹಿ ಶಾಖೆ, ಮಾತೃಶಕ್ತಿ, ದುರ್ಗಾವಾಹಿನಿ ಗುರುಪುರ ಹಾಗೂ ಶ್ರೀ ಶನೀಶ್ವರ ಪೂಜಾ ಸಮಿತಿ ವತಿಯಲ್ಲಿ ಗುರುಪುರ ಶ್ರೀ ಸತ್ಯದೇವತಾ ಸಭಾಗೃಹದ ಹಿಂದುಗಡೆಯಲ್ಲಿರುವ ಶ್ರೀನಿವಾಸ ಕಲ್ಯಾಣೋತ್ಸವ ಮೈದಾನದಲ್ಲಿ ಡಿ. 14ರಂದು ಸಮಿತಿಯ 20ನೇ ವಾರ್ಷಿಕ ಶ್ರೀ ಶನೈಶ್ಚರ ಕಥಾವೃತ ಪೂಜಾ ಕಾರ್ಯಕ್ರಮದ ಸಭಾ ಕಾರ್ಯಕ್ರಮದಲ್ಲಿ ಆಶೀರ್ವಚನ ನೀಡಿ ಮಾತನಾಡಿದರು.16vpvajradhi

ವಿಹಿಂಪ ಹಿಂದೂತ್ವ, ಹಿಂದೂಗಳ ಆಚಾರ-ವಿಚಾರಗಳು ಮತ್ತು ಹಿಂದೂಪರ ನ್ಯಾಯಕ್ಕಾಗಿ ಹೋರಾಡುತ್ತ ಬಂದಿದೆ. ಇಂತಹ ಪೂಜಾ ಕಾರ್ಯಕ್ರಮಗಳ ಮೂಲಕ ಹಿಂದೂಗಳು, ಅದರಲ್ಲೂ ಮಹಿಳೆಯರ ಒಗ್ಗೂಡಿಸಲು ಸಾಧ್ಯವಾಗಿದೆ. ಹಿಂದೂವೆಂದು ಹೇಳಲು ಈಗಲೂ ಭಯವಾಗುತ್ತಿದ್ದು, ಇಂತಹ ಎಲ್ಲ ಸಂದರ್ಭಗಳಲ್ಲಿ ಹಿಂದೂ ಸಂಘಟನೆಗಳು ದೇಶಪ್ರೇಮದಿಂದ ಒಗ್ಗೂಡಿದೆ ಎಂದುದುರ್ಗಾವಾಹಿನಿ ಜಿಲ್ಲಾ ಸಂಯೋಜಕಿ ಕು. ವಿಶಾಲಾಕ್ಷಿ ದಿಕ್ಸೂಚಿ ಭಾಷಣದಲ್ಲಿ ಮಾತನಾಡಿದರು.ಬಜರಂಗದಳ ವಿಭಾಗ ಸಂಯೋಜಕ ಭುಜಂಗ ಕುಲಾಲ್ ಮಾತನಾಡಿ, ಸಂಘಟನೆಯು ಕಳೆದ 55 ವರ್ಷಗಳಿಂದ ಈ ದೇಶದಲ್ಲಿ ಹಿಂದೂತ್ವಕ್ಕಾಗಿ ಕೆಲಸ ಮಾಡುತ್ತಿದೆ. ಮಾತೃ ಮಂಡಳಿ ಮತ್ತು ಬಜರಂಗದಳವು ಸತ್ಸಂಗದ ರೂಪದಲ್ಲಿ ಮನೆಮನೆಯಲ್ಲಿ ಬದಲಾವಣೆ ತರುತ್ತಿದೆ ಎಂದರು.gur-dec-15-sabhe udgatane-2

ಅಧ್ಯಕ್ಷತೆ ವಹಿಸಿದ್ದ ಉದ್ಯಮಿ ಸತೀಶ್ ಶೆಟ್ಟಿ ಮೂಡುಜಪ್ಪು ಮಾತನಾಡಿ, ಹಿಂದೂ ಸಂಘಟನೆಗಳಲ್ಲಿ ಕೆಲಸ ಮಾಡುವ ಯುವ ಜನಾಂಗಕ್ಕೆ ಮನೆಯಲ್ಲಿ ಪ್ರೋತ್ಸಾಹ ಸಿಗಬೇಕು. ನಮ್ಮ ಸಮಾಜ, ರಾಜ್ಯ, ದೇಶಕ್ಕೆ ಧಕ್ಕೆ ತರುವಂತಹ ಕೆಲಸ ಮಾಡುವವರ ವಿರುದ್ಧ ಹೋರಾಡುವ ಹಿಂದೂಗಳಿಗೆ ಅಗತ್ಯ ಬೆಂಬಲ ಸಿಗಬೇಕು. ಸಂಘಟನೆ ಇನ್ನಷ್ಟು ಬಲಗೊಳ್ಳಬೇಕು ಎಂದರು.ಈ ಸಂದರ್ಭದಲ್ಲಿ ನಿವೃತ್ತ ಪೊಲೀಸ್ ಹೆಡ್-ಕಾನ್‍ಸ್ಟೇಬಲ್ ಜಿ ಕೆ ನರಸಿಂಹ ಪೂಜಾರಿ ಹಾಗೂ ವ ಪ್ರತಿಭಾವಂತ ವಿದ್ಯಾರ್ಥಿ ನಿಖಿಲ್‍ರನ್ನು ಶಾಲು ಹೊದಿಸಿ ಸನ್ಮಾನಿಸಲಾಯಿತು. ಡಮರುಗ ಮ್ಯಾಸಿಕಲ್ ಸಂಸ್ಥೆಯ ಜಿ ಎಸ್ ಗುರುಪುರ ಸಾಹಿತ್ಯ ರಚಿಸಿರುವ ಶಬರಿಮಲೆ ಅಯ್ಯಪ್ಪ ದೇವರ ಕೊಂಡಾಡುವ `ಇರುಮುಡಿ’ ತುಳು ಭಕ್ತಿಗೀತೆ ಬಿಡುಗಡೆಗೊಳಿಸಲಾಯಿತು. ರಘುವೀರ್ ಕೋಟ್ಯಾನ್, ರಂಜಿತ್ ನೀರುಮಾರ್ಗ ನಿರ್ಮಾಣದ ಹಾಡಿಗೆ ಚೈತ್ರಾ ಗಾಣಿಗ ಕಂಠದಾನ ನೀಡಿದ್ದಾರೆ.

ಬಜರಂಗದಳ ಗುರುಪುರ ಪ್ರಖಂಡದ ಸಂಯೋಜಕ ವಸಂತ ಎಸ್ ಸುವರ್ಣ ಸ್ವಾಗತಿಸಿದರು. ವೇದಿಕೆಯಲ್ಲಿ ಗುರುಪುರ ಜಂಗಮಮಠ ಮಹಾಸಂಸ್ಥಾನದ ಶ್ರೀ ರುದ್ರಮುನಿ ಸ್ವಾಮಿ, ಹಿಂದೂ ಸಂಘಟನೆ ಮುಖಂಡ ಪ್ರವೀಣ್ ಕುತ್ತಾರ್, ವಿಹಿಂಪ ಗುರುಪುರ ಪ್ರಖಂಡ ಅಧ್ಯಕ್ಷ ವಿಷ್ಣು ಕಾಮತ್, ಗುರುಪುರ ಶ್ರೀ ವೈದ್ಯನಾಥ ದೈವಸ್ಥಾನದ ಪೂಜಾರಿ ಅಡ್ವಕೇಟ್ ಚಂದ್ರಹಾಸ ಪೂಜಾರಿ ಕೌಡೂರು, ಹರೀಶ್ ಕಾಜಿಲ, ಕೆ ಆರ್ ಶೆಟ್ಟಿ ಅಡ್ಯಾರ್(ಹಿಂದೂ ಸಂರಕ್ಷಣಾ ಸಮಿತಿ ಮಂಗಳೂರು), ಸುಜಾತಾ, ಮೋಕ್ಷಾ, ವಿಜಯಾ ಆರ್ ಸುವರ್ಣ, ಕು. ದೀಕ್ಷಿತಾ, ನಾಗೇಶ್ ಕೊಟ್ಟಾರಿ, ದಿನೇಶ್ ಸುವರ್ಣ, ಇಂದಿರಾ ಎನ್, ಬಿಜೆಪಿ ಗುರುಪುರ ವಲಯಾಧ್ಯಕ್ಷ ರಾಜೇಶ್ ಸುವರ್ಣ ಮತ್ತಿತರರು ಉಪಸ್ಥಿತರಿದ್ದರು. ದಿನೇಶ್ ಸುವರ್ಣ ವರದಿ ವಾಚಿಸಿದರೆ, ಮಧುರಾಜ್ ಗುರುಪುರ ಕಾರ್ಯಕ್ರಮ ನಿರೂಪಿಸಿದರು. ಸಂಘಟನಾ ಮುಖಂಡ ನಾಗೇಶ್ ಕೊಟ್ಟಾರಿ ವಂದಿಸಿದರು. ಬಳಿಕ ತುಳು ಸಾಹಿತ್ಯ ಅಕಾಡೆಮಿ ಅಧ್ಯಕ್ಷ ದಯಾನಂದ ಜಿ ಕತ್ತಲ್‍ಸಾರ್ ನಿರೂಪಣೆ, ನಾಗೇಶ್ ಕುಳಾಯಿ ನಿರ್ದೇಶನ ಹಾಗೂ ತಾರನಾಥ ಕೆ ಸಪ್ತವರ್ಣ ಸಂಗೀತದ ಕುಳಾಯಿಯ ಕಲಾಕುಂಭ ಸಾಂಸ್ಕøತಿಕ ವೇದಿಕೆ ಕಲಾವಿದರಿಂದ `ದೇಶದ ಬೀರೆರ್’ ಕಾರ್ಯಕ್ರಮ ನಡೆಯಿತು.

Leave a comment

XHTML: You can use these html tags: <a href="" title=""> <abbr title=""> <acronym title=""> <b> <blockquote cite=""> <cite> <code> <del datetime=""> <em> <i> <q cite=""> <strike> <strong>

Get Immediate Updates .. Like us on Facebook…

Visitors Count Visitor Counter