Published On: Thu, Dec 12th, 2019

ಕಟೀಲು ಬ್ರಹ್ಮಕಲಶೋತ್ಸವದ ಹಾಡು ಬಿಡುಗಡೆ

ಕಟೀಲು: ಕಟೀಲು ಶ್ರೀ ದುರ್ಗಾಪರಮೇಶ್ವರೀ ದೇವಿಯ  ಬ್ರಹ್ಮಕಲಶೋತ್ಸವವು ಜ.22ರಿಂದ ಫೆಬ್ರವರಿ 3 ರವರೆಗೆ ನಡೆಯುವ  ಬ್ರಹ್ಮಕಲಶೋತ್ಸವದ “ಕಟೀಲ್‍ದ ಭ್ರಾಮರಿನ ಪೊರ್ಲುನು ತೂಕ ಬಲೇ” ತಾಯಿಯನ್ನು ಕೊಂಡಾಡುವ ಬ್ರಹ್ಮಕಲಶೋತ್ಸವದ ಹಾಡು ಬಿಡುಗಡೆಯು ಡಿ.12ರಂದು ಗುರುವಾರ ಶ್ರೀಕ್ಷೇತ್ರ ಕಟೀಲಿನಲ್ಲಿ ನಡೆಯಿತು.12vp song bidugade

ಕಟೀಲು ದೇವಳದ ಅನುವಂಶಿಕ ಅರ್ಚಕ ಕಮಲಾದೇವಿಪ್ರಸಾದ ಆಸ್ರಣ್ಣ ಅವರು ಬಿಡುಗಡೆಗೊಳಿಸಿ ಶುಭಹಾರೈಸಿದರು. ಲಕ್ಷ್ಮೀನಾರಾಯಣ ಆಸ್ರಣ್ಣ , ವೆಂಕಟರಮಣ ಆಸ್ರಣ್ಣ, ಅನಂತಪದ್ಮನಾಭ ಆಸ್ರಣ್ಣ, ಶ್ರೀ ಹರಿನಾರಾಯಣ ಆಸ್ರಣ್ಣ ಅವರು ಶುಭಕೋರಿ ಆಶೀರ್ವದಿಸಿದರು.12 songs bidugade

ಪ್ರಶಾಂತ್ ಗುರುಪುರ ಸಾಹಿತ್ಯದಲ್ಲಿ ಮೂಡಿಬಂದ ಈ ಹಾಡನ್ನು  ಪುತ್ತೂರು ಜಗದೀಶ್ ಆಚಾರ್ಯ ಹಾಡಿದ್ದಾರೆ. ಭರತ್ ಗುರುಪುರ ಸಂಕಲನ  ಮಾಡಿದ್ದಾರೆ. ಈ ಸಂದರ್ಭದಲ್ಲಿ ಗುರುರಾಜ್ ಕಟೀಲು, ಅಭಿಲಾಷ್ ಶೆಟ್ಟಿ,ಸಂದೇಶ್ ಕಟೀಲು, ರಾಜೇಶ್ ವಗ್ಗ, ಚೇತನ್ ಗುರುಪುರ , ಪ್ರಜ್ವಲ್ ಬಡಗಬೆಳ್ಳೂರು ಮೊದಲಾದವರಿದ್ದರು.

Leave a comment

XHTML: You can use these html tags: <a href="" title=""> <abbr title=""> <acronym title=""> <b> <blockquote cite=""> <cite> <code> <del datetime=""> <em> <i> <q cite=""> <strike> <strong>

Get Immediate Updates .. Like us on Facebook…

Visitors Count Visitor Counter