Published On: Mon, Dec 9th, 2019

ತಲೆ ಮರೆಸಿ ಕೊಂಡಿದ್ದ ಆರೋಪಿ “ಇತ್ತೆಬರ್ಪೆ “ಬಂಧನ. 

ಕುಪ್ಪೆಪದವು: ನ್ಯಾಯಾಲಯದಿಂದ ಜಾಮೀನು ಪಡೆದು ಹೊರಬಂದು ನ್ಯಾಯಾಲಯಕ್ಕೆ ಹಾಜರಾಗದೆ ತಲೆಮರೆಸಿಕೊಂಡಿದ್ದ ಅಂತರ್ ಜಿಲ್ಲಾ ಕಳವು ಆರೋಪಿ, ಚಿಕ್ಕಮಗಳೂರು ಇಂದಿರಾ ನಗರದ ಉಪ್ಪಳ್ಳಿ ವಾಟರ್ ಟ್ಯಾಂಕ್ ಬಳಿಯ ನಿವಾಸಿ ಮೊಹಮ್ಮದ್ ಅಚ್ಚಬ್ಬ ಎಂಬವರ ಮಗ  ಅಬೂಬಕ್ಕರ್ ಯಾನೆ ಇತ್ತೆ ಬರ್ಪೆ ಅಬೂಬಕರ್(63)ಎಂಬಾತನನ್ನು ಬಜಪೆ ಪೊಲೀಸರು ಬಂಧಿಸಿದ್ದಾರೆ.
IMG-20191208-WA0007  2017ರಲ್ಲಿ ಮಂಗಳೂರು ತಾಲೂಕಿನ ಬಡಗುಳಿಪಾಡಿ ಗ್ರಾಮದ ಗಂಜಿಮಠ ಗಾಂಧಿನಗರದ ದರ್ಖಾಸು ಮನೆಯ ಹಿಂದಿನ ಬಾಗಿಲು ಮುರಿದು ಒಳ ಪ್ರವೇಶಿಸಿ ಎರಡು ಲಕ್ಷ ಮೌಲ್ಯದ ಚಿನ್ನಾಭರಣ, ಮತ್ತು ಕುಳವೂರು ಗ್ರಾಮದ ಕುಪ್ಪೆಪದವು ಚರ್ಚ್ ರಸ್ತೆಯ ಮನೆಯೊಂದರ ಹಿಂಬದಿಯ ಕಿಟಕಿಯ ಸರಳನ್ನು ಮುರಿದು ಒಳಪ್ರವೇಶಿಸಿ ಅಂದಾಜು ಹದಿನಾಲ್ಕು ಲಕ್ಷ ರೂಪಾಯಿ ಮೌಲ್ಯದ ಚಿನ್ನಾಭರಣಗಳನ್ನು ದೋಚಿದ ಬಗ್ಗೆಧಾಖಲಾಗಿದ್ದ  ಪ್ರಕರಣಗಳಲ್ಲಿ ಬಜಪೆ ಪೊಲೀಸರು  ಈತನನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು, ನ್ಯಾಯಾಲಯದಿಂದ ಜಾಮೀನು ಪಡೆದುಕೊಂಡು, ಮತ್ತೆ ಹಾಜರಾಗದೆ ತಲೆಮರೆಸಿಕೊಂಡಿದ್ದ, ಖಚಿತ ಮಾಹಿತಿ ಪಡೆದ ಪೊಲೀಸರು ಚಿಕ್ಕಮಗಳೂರಿನ ಉಪ್ಪಳ್ಳಿಯ ಆತನ ಮನೆಯಿಂದ ಆರೋಪಿಯನ್ನು ಬಂಧಿಸಿ ನ್ಯಾಯಾಲಕ್ಕೆ ಹಾಜರುಪಡಿಸಲಾಗಿದ್ದು, ನ್ಯಾಯಾಂಗ ಬಂಧನ ವಿಧಿಸಲಾಗಿದೆ. ಈತನ ವಿರುದ್ಧ ದ. ಕ. ಜಿಲ್ಲೆ ಸೇರಿದಂತೆ ಬೇರೆ ಬೇರೆ ಜಿಲ್ಲೆಗಳಲ್ಲಿ ಮೂವತ್ತೆಂಟಕ್ಕೂ ಅಧಿಕ ಪ್ರಕರಣಗಳು ದಾ ಖಲಾಗಿವೆ. ಪೊಲೀಸ್ ಆಯುಕ್ತರಾದ ಡಾ. ಹರ್ಷ ಪಿ ಎಸ್. ಐ ಪಿ ಎಸ್ ಅವರ ಆದೇಶದಂತೆ ಉಪಪೊಲೀಸ್ ಆಯುಕ್ತರಾದ ಅರುಣಾಂಶುಗಿರಿ ಐ ಪಿ ಎಸ್(ಕಾ&ಸು ), ಲಕ್ಷ್ಮೀಗಣೇಶ್ ಕೆ ಎಸ್ ಪಿ ಎಸ್(ಆ&ಸಂ)ಹಾಗೂಉಪಪೊಲೀಸ್ ಆಯುಕ್ತರಾದ  ಶ್ರೀನಿವಾಸ ಗೌಡ ಐ ಪಿ ಎಸ್ ರವರ ನಿರ್ದೇಶದಂತೆ ನಡೆದ ಕಾರ್ಯಾಚರಣೆಯಲ್ಲಿ ಬಜಪೆ ಪೊಲೀಸ್ ಠಾಣಾ ಪೊಲೀಸ್ ನಿರೀಕ್ಷಕ ಕೆ ಆರ್ ನಾಯ್ಕ್, ಎಸ್ ಐ ಸತೀಶ್ ಎಂ ಪಿ ಮತ್ತು ಶ್ರೀಮತಿ ಕಮಲ, ಪಿ ಎಸ್ ಐ ರಾಮಪೂಜಾರಿ, ರಾಮಾನಾಯ್ಕ್, ಮುಜಾಮಿಲ್ ಭಾಗವಹಿಸಿದ್ದರು.

Leave a comment

XHTML: You can use these html tags: <a href="" title=""> <abbr title=""> <acronym title=""> <b> <blockquote cite=""> <cite> <code> <del datetime=""> <em> <i> <q cite=""> <strike> <strong>

Get Immediate Updates .. Like us on Facebook…

Visitors Count Visitor Counter