Published On: Sat, Dec 7th, 2019

ಕಂಬಳಕ್ಕೆ ಎಲ್ಲಾರೀತಿಯ ನೆರವು :ಡಿಸಿಎಂ ಅಶ್ವಥ್ ನಾರಾಯಣ

ಬಂಟ್ವಾಳ: ಕಂಬಳಕ್ಕೆ ಸರಕಾರದಿಂದ ಪ್ರೋತ್ಸಾಹ ಹಾಗೂ ಆರ್ಥಿಕ ನೆರವು ನೀಡುವ ನಿಟ್ಟಿನಲ್ಲಿ ಪ್ರಯತ್ನಿಸಲಾಗುವುದು ಎಂದು ರಾಜ್ಯದ ಉಪಮುಖ್ಯಮಂತ್ರಿ ಡಾ.ಆಶ್ವಥ ನಾರಾಯಣ  ಹೇಳಿದ್ದಾರೆ.ಶನಿವಾರ ಸಂಜೆ ಇತಿಹಾಸ ಪ್ರಸಿದ್ಧ ಹೊಕ್ಕಾಡಿಗೋಳಿ ವೀರ-ವಿಕ್ರಮ ಜೋಡುಕರೆ ಬಯಲು ಕಂಬಳದ ಸಮಾರೋಪ ಸಮಾರಂಭದಲ್ಲಿ ವಿಶೇಷ ಆಹ್ವಾನಿತರಾಗಿ ಭಾಗವಹಿಸಿ  ಅವರು ಮಾತನಾಡಿದರು. ತುಳುನಾಡಿನ ಜಾನಪದಕ್ರೀಡೆಯಾಗಿರುವ ಕಂಬಳಕ್ಕೆ ಶಕ್ತಿ ತುಂಬಲು  ಸರಕಾರ ಬದ್ದವಾಗಿದ್ದು,ರಾಜ್ಯದ ರಾಜಧಾನಿ ಬೆಂಗಳೂರಿಗೂ ಕಂಬಳವನ್ನು ವಿಸ್ತರಿಸುವುದಾದರೆ ಸಂಪೂರ್ಣ ಸಹಕಾರ ನೀಡಲಾಗುವುದು ಎಂದರು.IMG-20191207-WA0107

ಕಂಬಳ ಎದುರಿಸುವ ಅಡೆತಡೆಗಳ ಬಗ್ಗೆ ಕಂಬಳ ಸಮಿತಿ ನಮ್ಮ ಗಮನಕ್ಕೆ ತಂದಿದ್ದಾರೆ ಎಂದ ಅವರು ಇದನ್ನು ನಿವಾರಿಸಲು ನಾವೆಲ್ಲರು ಯುವನಾಯಕರು ಒಗ್ಗಟ್ಟಾಗಿ ಸಹಕಾರ ನೀಡುತ್ತೆವೆ ಎಂದರು.   ಬಂಟ್ವಾಳ ಶಾಸಕ  ರಾಜೇಶ್ ನಾಯ್ಕ್ ಅಧ್ಯಕ್ಷತೆ ವಹಿಸಿದ್ದರು. ಬಿಜೆಪಿ ಯುವ ಮೋರ್ಛಾ ಪ್ರ.ಕಾರ್ಯದರ್ಶಿ ಬಿ.ವೈ. ವಿಜಯೇಂದ್ರ ಅವರು ಅತಿಥಿ ಸ್ಥಾನದಿಂದ ಮಾತನಾಡಿ, ಶಿವಮೊಗ್ಗ ಜಿಲ್ಲೆಯಲ್ಲಿಯು ಕಂಬಳ ನಡೆಸಲು ಜಿಲ್ಲಾ ಕಂಬಳ ಸಮಿತಿ ನೀಡಿರುವ ಆಹ್ವಾನವನ್ನು ಸ್ವೀಕರಿಸಿದ್ದು,ಮುಂದಿನ ದಿನಗಳಲ್ಲಿ ಕಂಬಳ ಆಯೋಜಿಸುವ ನಿಟ್ಟಿನಲ್ಲಿ ಚಿಂತನೆ ನಡೆಸುತ್ತೆವೆ ಎಂದರು.ಪ್ರವಾಸೋದ್ಯಮದ ಮೂಲಕ ಕಂಬಳವನ್ನು ಇನ್ನಷ್ಟು ಜನಪ್ರಿಯಗೊಳಿಸುವ ನಿಟ್ಟಿನಲ್ಲಿ ಸರಕಾರ ಚಿಂತಿಸಬೇಕು,ಈ ದೆಸೆಯಲ್ಲಿ ನಾಯಕರು ಮುಖ್ಯಮಂತ್ರಿಯವರೊಂದಿಗೆ ಚರ್ಚಿಸಬೇಕು ಎಂದು ಸಲಹೆ ನೀಡಿದರು.

ಮೂಡಬಿದ್ರೆ ಶಾಸಕ ಉಮಾನಾಥ ಕೋಟ್ಯಾನ್, ಬೆಳ್ತಂಗಡಿ ಶಾಸಕ ಹರೀಶ್ ಪೂಂಜ,ಮಾಜಿ ಸಚಿವ ನಾಗರಾಜ ಶೆಟ್ಟಿ,ಬಿಜೆಪಿ ಜಿಲ್ಲಾ ವಕ್ತಾರ ಹರಿಕೃಷ್ಣ ಬಂಟ್ವಾಳ, ಜಿಲ್ಲಾ ಕಂಬಳ ಸಮಿತಿ ಅಧ್ಯಕ್ಷ ಪಿ.ಆರ್.ಶೆಟ್ಟಿ ಕೂಳೂರು ಪೊಯ್ಯೊಲು,  ಮಂಗಳೂರು ವಿವಿಯ ಕುಲಪತಿ ಪ್ರೋ.ಪಿ.ಸುಬ್ರಹ್ಮಣ್ಯ ಯಡಪಡಿತ್ತಾಯ, ಬೆಂಗಳೂರಿನ ಉದ್ಯಮಿ ರಮೇಶ್ ಶೆಟ್ಟಿ, ಬಿಜೆಪಿ ಮುಖಂಡ ಜಗದೀಶ್ ಅಧಿಕಾರಿ, ಮೂಡಬಿದ್ರೆ ಅರಮನೆಯ ಕುಲದೀಪ್ ಚೌಟ,ರಾಜ್ಯ ಬಿಜೆಪಿ ಕಾನೂನು ವಿಭಾಗದ ಪ್ರಮುಖ ಸೂರತ್ ಕುಮಾರ್ ಕಾರ್ಕಳ,ಹೈಕೋಟ್೯ ವಕೀಲ ಅರುಣ್ ಶ್ಯಾಮ್,ಬಿಜೆಪಿ ಯುವ ಮುಖಂಡ ಸಂದೇಶ್ ಶೆಟ್ಟಿ,ರಾಯಿ ಗ್ರಾಪಂ ಅಧ್ಯಕ್ಷ ದಯಾನಂದ ಸಪಲ್ಯ,ದುರ್ಗಾದಾಸ್ ಶೆಟ್ಟಿ ಮಾವಂತೂರು, ವಸಂತಕುಮಾರ್ ಅಣ್ಣಳಿಕೆ,ತಾಪಂ ಮಾಜಿ ಉಪಾಧ್ಯಕ್ಷ ದಿನೇಶ್ಅಮ್ಟೂರು, ರಾಜ್ಯ ಬಿಜೆಪಿ ಸಹವಕ್ತಾರೆ ಸುಲೋಚನಾ ಜಿ.ಕೆ.ಭಟ್,ತಾಪಂ ಸದಸ್ಯ ಪ್ರಭಾಕರ ಪ್ರಭು, ಬಂಟ್ವಾಳ ಕ್ಷೇತ್ರ ಬಿಜೆಪಿ ಅಧ್ಯಕ್ಷ ದೇವದಾಸ ಶೆಟ್ಟಿ ,ಉದ್ಯಮಿಗಳಾದ ರವಿಶಂಕರ ಶೆಟ್ಟಿ ಬಡಾಜೆ, ಜಯಪ್ರಕಾಶ್ ಬಂಟ್ವಾಳ,ಸದಾನಂದ ಪೂಜಾರಿ, ಸಚ್ಚಿದಾನಂದ ಶೆಟ್ಟಿ ಬೊಂಡಾಲ, ಜೆರಾಲ್ಡ್ ಡಿಸೋಜ,ನಿವೃತ್ತ ಶಿಕ್ಷಕ ಮಹಾಬಲ ಆಳ್ವ, ಖ್ಯಾತ ಕಬಡ್ಡಿ ಆಟಗಾರ ಸುಕೇಶ್ ಹೆಗ್ಡೆ ಮೊದಲಾದವರಿದ್ದರು.  ಈ ಸಂದರ್ಭ ಕಂಬಳದ ಸ್ಥಳದಾನಿಗಳನ್ನು ಗೌರವಿಸಲಾಯಿತು. ಕಂಬಳ ಸಮಿತಿ ಅಧ್ಯಕ್ಷ  ರಶ್ಮಿತ್ ಶೆಟ್ಟಿ ಕೈತ್ರೋಡಿ ಹಾಗೂ ಪದಾಧಿಕಾರಿಗಳು ಉಪಸ್ಥತಿತರಿದ್ದರು.

ವಿಜಯಕು ಮಾರ್ ಕಂಗಿನಮನೆ ಕಾರ್ಯ ಕ್ರಮ ನಿರೂಪಿಸಿದರು.

Leave a comment

XHTML: You can use these html tags: <a href="" title=""> <abbr title=""> <acronym title=""> <b> <blockquote cite=""> <cite> <code> <del datetime=""> <em> <i> <q cite=""> <strike> <strong>

Get Immediate Updates .. Like us on Facebook…

Visitors Count Visitor Counter