Published On: Thu, Dec 5th, 2019

ಅರೆಬೈಲಿನಲ್ಲಿ ಸಂಭ್ರಮದ ದೇವರ ಕಂಬಳ

ಮಂಜೇಶ್ವರ: ಹೊಸಂಗಡಿ ಸಮೀಪದ ಅರಿಬೆ`ಲು ನಾಗಬ್ರಹ್ಮ ಸನ್ನಿ ಸಮೀಪದ ಗದ್ದೆಯಲ್ಲಿ ದೇವರ ಕಂಬಳ ಬುಧವಾರ ವಿಜ್ರಂ`ಭಣೆಯಿಂದ ಜರುಗಿತು. ಸಾವಿರಾರು ಮಂದಿ ದೇವರ ಕಂಬಳವನ್ನು ವೀಕ್ಷಿಸಿ ಸಂಭ್ರಮಿಸಿದರು.

4mjrKAMBALA(3)

ಕಾಸರಗೋಡು ಜಿಲ್ಲೆಯಲ್ಲಿ ನಡೆಯುವ ಏಕೆ`ಕ ದೇವರ ಕಂಬಳ ಇದಾಗಿದ್ದು, ಇತ್ತೀಚಿನ ವರ್ಷಗಳಲ್ಲಿ ದೂರದೂರಿನ ಜನಮಂದಿ ದೇವರ ಕಂಬಳವನ್ನು ವೀಕ್ಷಿಸಲು ಬರುತ್ತಿದ್ದಾರೆ. ಸಾಂಪ್ರದಾಯಿಕ ಕೃಷಿ ಜೀವನ ಮತ್ತು ಪರಂಪರೆಗೆ ಸಾಕ್ಷಿಯಾಗಿರುವ ಅರಿಬೆ`ಲು ಕಂಬಳದಲ್ಲಿ ಈ ಬಾರಿ ಒಟ್ಟು 10 ರಿಂದ 15 ಜೋಡಿ ಕೋಣಗಳು ಇದ್ದವು. ಎರಡನೇ ಬೇಸಾಯವನ್ನು ಹೂಟೆ ಮೂಲಕ ಆರಂಭಿಸಿರುವ ಗದ್ದೆಯಲ್ಲಿ ಜೋಡಿ ಕೋಣಗಳ ಓಟವು ಗಮನ ಸೆಳೆಯಿತು.

4mjrKAMBALA(4)
ಪ್ರತಿ ವರ್ಷದಂತೆ ಈ ಬಾರಿಯು ದೇವರ ಕಂಬಳ ಆಕರ್ಷಣೀಯವಾಗಿತ್ತು, ಕಂಬಳ ಗದ್ದೆಯ ಮಧ್ಯಭಾಗದಲ್ಲಿ ಪೂಕರೆ-ಹೂವಿನಿಂದ ಅಲಂಕರಿಸಲ್ಪಟ್ಟ ಎತ್ತರದ ಕಂಬ ನೆಡಲಾಯಿತು. ಸಾಯಂಕಾಲ ನಡೆದ ಬ್ರದರ್ಸ್ ಅರಿಬೆ`ಲು ವಾರ್ಷಿಕೋತ್ಸವದ ಸಂದರ್ಭ ಹೆಸರುವಾಸಿ ಕಂಬಳ ಕೋಣಗಳ ಯಜಮಾನ ಕೌಡೂರುಬೀಡು ಮಾರಪ್ಪ ಭಂಡಾರಿಯವರಿಗೆ ಸನ್ಮಾನ ಕಾರ್ಯಕ್ರಮ ಏರ್ಪಟ್ಟಿತು.

4mjrKAMBALA(2)ರಾತ್ರಿ 7 ಗಂಟೆಗೆ ಸಂಪ್ರೀತಿ ಕಲಾ ತಂಡದ ವತಿಯಿಂದ ವಿವಿಧ ನೃತ್ಯ  ನಡೆಯಿತು. ರಾತ್ರಿ 10 ಗಂಟೆಗೆ ನಾಗಬ್ರಹ್ಮ ದೇವರ ಮಹಾಪೂಜೆ ನಡೆದು `ಭಕ್ತಾದಿಗಳು ಪ್ರಸಾದ ಸ್ವೀಕರಿಸಿ ಸಂಪ್ರೀತರಾದರು. ರಾತ್ರಿ ಬ್ರಾಹ್ಮರಿ ಕಲಾ ತಂಡದ ಮುರಲಿ ಈ ಪಿರ ಬರೋಲಿ ಹಾಸ್ಯಮಯ ನಾಟಕ ಪ್ರದರ್ಶನ ಕಂಡಿತು. ಈ ಸಂದ`ರ್À ನಾಗಬ್ರಹ್ಮ ಕ್ಷೇತ್ರ ಆಡಳಿತ ಸಮಿತಿ ಮತ್ತು ದೇವರ ಕಂಬಳ ಸಮಿತಿ ಅಧ್ಯಕ್ಷ ಗೋಪಾಲ ಶೆಟ್ಟಿ ಅರಿಬೆ`ಲು ಹಾಗೂ ಪದಾಕಾರಿಗಳು ಇದ್ದರು.

4mjrKAMBALA(1)

ಕೃಷಿ ಸಂಸ್ಕøತಿಯ ಪ್ರತೀಕ
ಬಹಳ ಹಿಂದಿನಿಂದ ಕೋಣ ಹಾಗೂ ಎತ್ತುಗಳನ್ನು ಬಳಸಿ ಗದ್ದೆಗಳ ಹೂಟೆ ಸಹಿತ ಬೇಸಾಯ ಮಾಡಲಾಗುತ್ತಿತ್ತು. ಪ್ರಸ್ತುತ ಕೃಷಿ ತಂತ್ರಜ್ಞಾನವಿದ್ದರೂ ಗದ್ದೆ ಬೇಸಾಯ ಮಾಡಲಾಗುತ್ತಿಲ್ಲ ಎಂಬುದು ಕಾಲದ ವಿಡಂಬನೆಯಾಗಿದೆ. ಆದರೆ ಅರಿಬೆ`ಲಿನ ಗದ್ದೆಯಲ್ಲಿ ಹಿಂದಿನ ಕೃಷಿ ಪರಂಪರೆ ಸಹಿತ ಗದ್ದೆ ಬೇಸಾಯ ಸಂಸ್ಕøತಿಯನ್ನು ಉಳಿಸಿ ಬೆಳೆಸುತ್ತಿರುವುದು ಪ್ರಶಂಸನಾರ್ಹವಾಗಿದೆ. ವರ್ಷಕ್ಕೆ ಎರಡು ಬಾರಿ ಬೇಸಾಯ ಮಾಡಲಾಗುವ ಗದ್ದೆಯಲ್ಲಿ ಸಾಂಕೇತಿಕವಾಗಿ ಕೋಣಗಳ ಓಟ-ಕಂಬಳ, ಪ್ರಕೃತಿ ಶಕ್ತಿ-ದೇವರನ್ನು ಸ್ಮರಿಸಿ ಪೂಜಿಸುವ ಕಾರ್ಯ ಹಲವು ಶತಮಾನಗಳಿಂದ ನಡೆದು ಬರುತ್ತಿದೆ. ಹಲವು ಪ್ರದೇಶಗಳ ಕಂಬಳ ಗದ್ದೆಗಳಲ್ಲಿ ಹಿಂದೆ ನಡೆಯುತ್ತಿದ್ದ ಕೋಣಗಳ ಓಟವು ಸಂಪೂರ್ಣ ನಿಂತಿದ್ದು, ಕೇವಲ ಪೂಕರೆ ನೆಟ್ಟು ಸ್ಥಳ ದೆ`ವಕ್ಕೆ ಕೋಲ ನೀಡುವ ಕಾರ್ಯ ಮಾತ್ರವೇ ಜರುಗುತ್ತಿದೆ.

Leave a comment

XHTML: You can use these html tags: <a href="" title=""> <abbr title=""> <acronym title=""> <b> <blockquote cite=""> <cite> <code> <del datetime=""> <em> <i> <q cite=""> <strike> <strong>

Get Immediate Updates .. Like us on Facebook…

Visitors Count Visitor Counter