Published On: Mon, Dec 2nd, 2019

ಮುಂಬಯಿ ಪ್ರದೇಶ ರಾಷ್ಟ್ರವಾದಿ ಕಾಂಗ್ರೇಸ್ ಪಕ್ಷದ ಜಿಲ್ಲಾ ನಿರೀಕ್ಷಕರಾಗಿ ಲಕ್ಷ ್ಮಣ ಸಿ.ಪೂಜಾರಿ ಚಿತ್ರಾಪುರ ಪುನಾರಾಯ್ಕೆ

ಮುಂಬಯಿ: ಬೃಹನ್ಮುಂಬಯಿ ಅಲ್ಲಿನ ಹಿರಿಯ ತುಳು-ಕನ್ನಡಿಗ ರಾಜಕೀಯ ಧುರೀಣ ಲಕ್ಷ ್ಮಣ ಸಿ.ಪೂಜಾರಿ ಇವರನ್ನು ಮುಂಬಯಿ ಪ್ರದೇಶ ರಾಷ್ಟ್ರವಾದಿ ಕಾಂಗ್ರೇಸ್ ಪಕ್ಷದ ಉತ್ತರ ಮಧ್ಯ ಜಿಲ್ಲಾ ನಿರೀಕ್ಷಕರನ್ನಾಗಿ ಮತ್ತೆ ಎನ್‍ಸಿಪಿ ಪಾರ್ಲಿಮೆಂಟ್ ಬೋರ್ಡ್ ನೇಮಿಸಿದೆ ಎಂದು ಮುಂಬಯಿ ಪ್ರದೇಶ ಎನ್‍ಸಿಪಿ ಅಧ್ಯಕ್ಷ, ಶಾಸಕ ನವಾಬ್ ಮಲಿಕ್ ತಿಳಿಸಿದ್ದಾರೆ.

Laxman C. Poojary NCP 1

ಇಂದಿಲ್ಲಿ ಸೋಮವಾರ ಪೂರ್ವಾಹ್ನ ಮುಂಬಯಿ ಅಲ್ಲಿನ ಎನ್‍ಸಿಪಿ ಕಚೇರಿಯಲ್ಲಿ ನಡೆಸಲ್ಪಟ್ಟ ಸಭೆಯಲ್ಲಿ ಈ ಬಗ್ಗೆ ಮಾಹಿತಿ ಪ್ರಕಟಿಸಿದ ಮಲಿಕ್ ಮಹಾನಗರದಾದ್ಯಂತದ ಒಟ್ಟು ಆರು ಜಿಲ್ಲೆಗಳ ನಿರೀಕ್ಷರ ನಾಮಗಳನ್ನು ಪ್ರಕಟಿಸಿದ್ದು ಆ ಪಯ್ಕಿ ಎನ್‍ಸಿಪಿ ಮುಂಬಯಿ ಪ್ರದೇಶ ಸಮಿತಿ ಹಿರಿಯ ಉಪಾಧ್ಯಕ್ಷರಾಗಿ ಸೇವಾ ನಿರತ ಲಕ್ಷ ್ಮಣ ಪೂಜಾರಿ ಅವರಿಗೆ ಮತ್ತೆ ಜವಾಬ್ದಾರಿ ವಹಿಸಿದ ಬಗ್ಗೆ ಮುಂಬಯಿ ಎನ್‍ಸಿಪಿ ಕೋಶಾಧಿಕಾರಿ, ಪ್ರದೇಶ ಪ್ರವಕ್ತ ಸಂಜಯ್ ತಟ್ಕರೆ ತಿಳಿಸಿದ್ದಾರೆ.

ಸುಮಾರು ಆರು ತಾಲೂಕುಗಳ ಅಧೀನದ ದಕ್ಷಿಣ ಮುಂಬಯಿ ಜಿಲ್ಲಾ (ಪ್ರಶಾಸನ)ದ ನಿರೀಕ್ಷಕ ಹುದ್ದೆ ವಹಿಸಲಾಗಿದ್ದು, ಇತರ ಜಿಲ್ಲೆಗಳಿಗೆ ನರೇಂದ್ರ ರಾಣೆ, ಅಬ್ಬಾಸ್ ಕಾಂಟ್ರಕ್ಟರ್, ಪ್ರಭಾಕರ್ ಚಾಳ್ಕೆ, ದಿನಕರ್ ತಾವ್ಡೆ ಮತ್ತು ವಿಲಾಸ್ ಮಾನೆ ಇವರನ್ನು ನೇಮಿಸಲಾಗಿದೆ ಎಂದೂ ಮಾಧ್ಯಮ ವಕ್ತಾರ ಸಂಜಯ್ ತಟ್ಕರೆ ತಿಳಿಸಿದ್ದಾರೆ.
ರಾಷ್ಟ್ರವಾದಿ ಕಾಂಗ್ರೇಸ್ ಪಾರ್ಟಿಯ ಸರ್ವೋಚ್ಛ ನಾಯಕ, ಮಾಜಿ ಕೇಂದ್ರ ಸಚಿವ, ಮಹಾರಾಷ್ಟ್ರದ ಮಾಜಿ ಮುಖ್ಯಮಂತ್ರಿ ಶರದ್ ಪವಾರ್ ನಿಕಟವರ್ತಿ ಆಗಿರುವ ಲಕ್ಷ್ಮಣ್ ಪೂಜಾರಿ ಮೂಲತಃ ದಕ್ಷಿಣ ಕನ್ನಡ ಜಿಲ್ಲೆಯ ಮಂಗಳೂರು ಮೂಲ್ಕಿ ಚಿತ್ರಾಪುರ ಇಲ್ಲಿಯವರು. ಚೆನ್ನಪ್ಪ ಪೂಜಾರಿ ಮತ್ತು ಜಾನಕಿ ಪೂಜಾರಿ ದಂಪತಿ ಸುಪುತ್ರರಾದ ಲಕ್ಷ್ಮಣ್ ಪೂಜಾರಿ ಓರ್ವ ಸರಳ ಸಜ್ಜನಿಕೆಯ ಅನುಭವೀ ರಾಜರಣಿ ಆಗಿದ್ದು ಎನ್‍ಸಿಪಿ ಸ್ಥಾಪನೆಯ ದಿನದಿಂದಲೇ ಪಕ್ಷದಲ್ಲಿ ಸಕ್ರೀಯರಾಗಿದ್ದು, ಪಕ್ಷದ ಪದಾಧಿಕಾರಿಗಳ ಪ್ರಥಮ ಅವಧಿಯಲ್ಲೇ ಪ್ರಧಾನ ಕಾರ್ಯದರ್ಶಿ ಆಗಿ, ನಂತರ ಸತತ ಐದು ಅವಧಿಗಳಲ್ಲಿ ಉಪಾಧ್ಯಕ್ಷರಾಗಿಯೇ ನೇಮಕ ಗೊಂಡಿರುವರು. ಸದ್ಯ ಎನ್‍ಸಿಪಿಯಲ್ಲಿ ಉನ್ನತ ಹುದ್ದೆಯನ್ನು ಹೊಂದಿದ ತುಳು ಕನ್ನಡಿಗರಲ್ಲಿ ಲಕ್ಷ ್ಮಣ್ ಪೂಜಾರಿ ಓರ್ವರು.

Leave a comment

XHTML: You can use these html tags: <a href="" title=""> <abbr title=""> <acronym title=""> <b> <blockquote cite=""> <cite> <code> <del datetime=""> <em> <i> <q cite=""> <strike> <strong>

Get Immediate Updates .. Like us on Facebook…

Visitors Count Visitor Counter